![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Sep 15, 2020, 1:23 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಬುಧವಾರದಿಂದ ಆರಂಭವಾಗಬೇಕಿದ್ದ “ರಾಷ್ಟ್ರಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆ’ (ಯುಜಿಸಿ-ನೆಟ್)ಯನ್ನು ಸೆ. 24ರಿಂದ ನಡೆಸಲು ನಿರ್ಧರಿಸಲಾಗಿದೆ. ಸೆ. 16ರಿಂದ 23ರ ವರೆಗೆ “ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್’ (ಐಸಿಎಆರ್) ಪರೀಕ್ಷೆಗಳು ನಡೆಯುವುದರಿಂದ ನೆಟ್ ಅನ್ನು ಮುಂದೂಡಲು ಈ ಎರಡೂ ಪರೀಕ್ಷೆಗಳನ್ನು ಆಯೋಜಿಸುವ ರಾಷ್ಟ್ರೀಯ ಪರೀಕ್ಷಾ ಆಯೋಗ (ಎನ್‌ಟಿಎ) ನಿರ್ಧರಿಸಿದೆ.
ನೆಟ್ ಪರೀಕ್ಷೆಯು ಜೂನ್ ತಿಂಗಳಲ್ಲೇ ನಡೆಯಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇತ್ತೀಚೆಗೆ ಪ್ರಕಟನೆ ನೀಡಿದ್ದ ಎನ್‌ಟಿಎಯು ಸೆ. 14ರಿಂದ ಉಪನ್ಯಾಸಕರ ಅರ್ಹತಾ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಆದರೆ ಪರೀಕ್ಷೆಯ ದಿನಾಂಕ ಹತ್ತಿರಕ್ಕೆ ಬರುತ್ತಿದ್ದರೂ ಪ್ರವೇಶ ಪತ್ರಗಳ ಡೌನ್‌ಲೋಡ್‌ಗೆ ಎನ್‌ಟಿಎ ಪ್ರಕಟನೆ ನೀಡಿರಲಿಲ್ಲ. ಇದು ಪರೀಕ್ಷಾರ್ಥಿಗಳ ದುಗುಡಕ್ಕೆ ಕಾರಣವಾಗಿತ್ತು.
You seem to have an Ad Blocker on.
To continue reading, please turn it off or whitelist Udayavani.