3ನೇ ಮಗು ಹೆರಿಗೆ ರಜೆ ನಿರಾಕರಣೆ ಅಸಾಂವಿಧಾನಿಕ: ಉತ್ತರಾಖಂಡ ಹೈಕೋರ್ಟ್
Team Udayavani, Aug 4, 2018, 4:14 PM IST
ನೈನಿತಾಲ್ : ಮೂರನೇ ಮಗು ಹೆತ್ತ ಉದ್ಯೋಗಿಗೆ ಹೆರಿಗೆ ರಜೆ ನಿರಾಕರಿಸಿರುವ ರಾಜ್ಯ ಸರಕಾರದ ನಿಯಮ ಅಸಾಂವಿಧಾನಿಕ ಎಂದು ಉತ್ತರಾಖಂಡ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹಲದ್ವಾನಿ ನಿವಾಸಿಯಾಗಿರುವ ರಾಜ್ಯ ಸರಕಾರಿ ಉದ್ಯೋಗಿ ಊರ್ಮಿಳಾ ಮನೀಷ್ ಅವರಿಗೆ ಮೂರನೇ ಮಗು ಹೆತ್ತದ್ದಕ್ಕೆ ಹೆರಿಗೆ ರಜೆ ನಿರಾಕರಿಸಲಾಗಿತ್ತು. ರಾಜ್ಯ ಸರಕಾರದ ಈ ನಿಯಮವನ್ನು ಪ್ರಶ್ನಿಸಿ ಅಕೆ ಹೈಕೋರ್ಟ್ ಮೆಟ್ಟಲೇರಿದ್ದರು.
ಜಸ್ಟಿಸ್ ರಾಜೀವ್ ಶರ್ಮಾ ಅವರ ಏಕ ಸದಸ್ಯ ಪೀಠವು ಉತ್ತರಾಖಂಡ ಸರಕಾರದ ಈ ನಿಯಮವು ಸಂವಿಧಾನದ ಅಶಯಕ್ಕೆ ವಿರುದ್ಧವಾದುದೆಂದು ತೀರ್ಪು ನೀಡಿದರು.
ಉತ್ತರ ಪ್ರದೇಶ ಮೂಲಭೂತ ನಿಯಮಗಳ ಹಣಕಾಸು ಕೈಪಿಡಿಯ ಎರಡನೇ ಪ್ರಾವಿಸೋ ಅಡಿಯ 153ನೇ ಮೂಲಭೂತ ನಿಯಮವು ಮೂರನೇ ಮಗು ಹೆತ್ತರೆ ಹೆರಿಗೆ ರಜೆಯನ್ನು ನಿರಾಕರಿಸುತ್ತದೆ. ಈ ನಿಯಮಾವಳಿಯನ್ನು ಉತ್ತರಾಖಂಡ ಸರಕಾರ ಯಥಾವತ್ ಎತ್ತಿಕೊಂಡಿದೆ.
ರಾಜ್ಯ ಸರಕಾರದ ಈ ನಿಯಮವು ಸಂವಿಧಾನದ 42ನೇ ವಿಧಿ ಮತ್ತು 1961ರ ಹೆರಿಗೆ ಸೌಲಭ್ಯ ಕಾಯಿದೆಯ ಸೆ.27ರ ಆಶಯಕ್ಕೆ ವಿರುದ್ಧವಾಗಿರುವುದರಿಂದ ಇದನ್ನು ಕಿತ್ತು ಹಾಕಬೇಕು ಎಂದು ತನ್ನ ಜು.30ರ ಆದೇಶದಲ್ಲಿ ಹೇಳಿದೆ. ಸಂವಿಧಾನದ 42ನೇ ವಿಧಿಯು ಮಹಿಳಾ ನೌಕರರಿಗೆ ನ್ಯಾಯೋಚಿತ ಮತ್ತು ಮಾನವೀಯ ಕೆಲಸದ ನಿಯಮ ಮತ್ತು ಹೆರಿಗೆ ಸೌಕರ್ಯಗಳ ಭರವಸೆ ನೀಡುತ್ತದೆ.
ಮನೀಶ್ ಅವರಿಗೆ ಈಗಾಗಲೇ ಎರಡು ಮಕ್ಕಳಿರುವುದರಿಂದ, ತನ್ನ ನಿಯಮಗಳ ಪ್ರಕಾರ, ಮೂರನೇ ಮಗುವಿಗಾಗಿ ಹೆರಿಗೆ-ರಜೆ ನೀಡುವಂತಿಲ್ಲ ಎಂದು ಉತ್ತರಾಖಂಡ ಸರಕಾರ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.