ರಷ್ಯಾ-ಉಕ್ರೇನ್ ಯುದ್ಧ: ಮರಿಯುಪೋಲ್‌ನ 24 ಮಕ್ಕಳು ಸೇರಿ ಒಟ್ಟು 287 ಮಕ್ಕಳ ಸಾವು
Team Udayavani, Jun 12, 2022, 7:10 AM IST
ನವದೆಹಲಿ: ಉಕ್ರೇನಿನ ಆಗ್ನೇಯ ಭಾಗದಲ್ಲಿರುವ ಬಂದರು ನಗರಿ ಮರಿಯುಪೋಲ್‌ನಲ್ಲಿ ಇತ್ತೀಚೆಗೆ ರಷ್ಯಾ ನಡೆಸಿದ ದಾಳಿಯಲ್ಲಿ 24 ಮಕ್ಕಳು ಸಾವನ್ನಪ್ಪಿದ್ದಾರೆ. ಯುದ್ಧಾರಂಭದಿಂದ ಇಲ್ಲಿಯವರೆಗೆ ಒಟ್ಟು 287 ಮಕ್ಕಳು ಕೊನೆಯುಸಿರೆಳೆದಿದ್ದಾರೆ. 492 ಮಕ್ಕಳು ಗಾಯಗೊಂಡಿದ್ದಾರೆ.
ಪೂರ್ವ ಉಕ್ರೇನ್‌ನಲ್ಲಿ ಸದ್ಯ ರಷ್ಯಾ-ಉಕ್ರೇನ್ ನಡುವೆ ತೀವ್ರ ಸೆಣೆಸಾಟ ನಡೆಯುತ್ತಿದೆ. ಈ ಭಾಗ ಉಕ್ರೇನಿನ ಕೈಗಾರಿಕೆಗಳ ಹೃದಯಭಾಗ. ಇಲ್ಲಿ ಕಾದಾಟ ಹೆಚ್ಚಾಗಿರುವುದರಿಂದ ಇಲ್ಲಿರುವ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಪಶ್ಚಿಮ ಭಾಗಕ್ಕೆ ವಿಶೇಷ ಟ್ರೈನಿನಲ್ಲಿ ವಲಸೆ ಹೋಗಿದ್ದಾರೆ.
ಮತ್ತೊಂದೆಡೆ, ಫೆ. 24ರಿಂದ ಆರಂಭವಾದ ಉಕ್ರೇನ್- ರಷ್ಯಾ ನಡುವಿನ ಯುದ್ಧದಿಂದಾಗಿ ಇಲ್ಲಿಯವರೆಗೆ ತಾನು 10 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿರುವುದಾಗಿ ಉಕ್ರೇನ್ ತಿಳಿಸಿದೆ.
ರಷ್ಯಾ ಹೊರಕ್ಕೆ:
ವಿಶ್ವಸಂಸ್ಥೆಯ ಅಂಗವಾದ ವಿಶ್ವ ಪ್ರವಾಸೋದ್ಯಮ ಸಂಸ್ಥೆಯಿಂದ ರಷ್ಯಾ ಹೊರಬಂದಿದೆ. ಉಕ್ರೇನ್ ವಿರುದ್ಧ ದಾಳಿ ಮಾಡಿದ್ದರಿಂದ ಏ.27ರಂದೇ ಪ್ರವಾಸೋದ್ಯಮ ಸಂಸ್ಥೆ ರಷ್ಯಾಕ್ಕೆ ನಿಷೇಧ ಹೇರಿತ್ತು!
ಚೆಕ್ ಸ್ವಯಂಸೇವಕ ಸಾವು:
ಉಕ್ರೇನ್‌ನಲ್ಲಿ ಚೆಕ್ ಗಣರಾಜ್ಯದ ಹಲವರು ಸ್ವಯಂಸೇವಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೂರಾರು ಮಂದಿ ಚೆಕ್ಕರು ತಮ್ಮ ಸರ್ಕಾರದ ಅನುಮತಿಯೊಂದಿಗೆ ಉಕ್ರೇನ್ ಸೇನೆಯನ್ನೇ ಸೇರಿದ್ದಾರೆ. ಇದೀಗ ಮೊದಲ ಚೆಕ್ ಸ್ವಯಂಸೇವಕ ಸಾವನ್ನಪ್ಪಿರುವುದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.