ಯುವ ಸೇನಾಧಿಕಾರಿ ಹತ್ಯೆ: 3 ಹಿಜ್‌ಬುಲ್ ಶಂಕಿತರ ಪೋಟೋ ಬಿಡುಗಡೆ
Team Udayavani, May 12, 2017, 12:23 PM IST
ಜಮ್ಮು ಕಾಶ್ಮೀರ : 22ರ ಹರೆಯದ ಕಾಶ್ಮೀರದ ಭಾರತೀಯ ಸೇನಾ ಅಧಿಕಾರಿಯನ್ನು ಅಪಹರಿಸಿ ಹತ್ಯೆಗೈದ ಹಿಜ್‌ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಮೂವರು ಶಂಕಿತರನ್ನು ಪೊಲೀಸರು ಗುರುತಿಸಿದ್ದಾರೆ. ಅಂತೆಯೇ ಅವರ ಫೋಟೋಗಳನ್ನು ಮಾಧ್ಯಮಕ್ಕೆ ಬಿಡುಗಡೆಮಾಡಿದ್ದಾರೆ ಮಾತ್ರವಲ್ಲದೆ ಅವರ ಚಿತ್ರಗಳಿರುವ ಪೋಸ್ಟರ್‌ಗಳನ್ನು ಸಾರ್ವಜನಿಕವಾಗಿ ಹಾಕಿಸಿದ್ದಾರೆ.
ಪೊಲೀಸರು ಗುರುತಿಸಿರುವ ಹಂತಕರ ಹೆಸರು ಇಂತಿದೆ : ಇಷ್‌ಫಾಕ್ ಅಹ್ಮದ್ ಠೊಕರ್, ಗಯಾಸ್ ಉಲ್ ಇಸ್ಲಾಮ್ ಮತ್ತು ಅಬ್ಟಾಸ್ ಅಹ್ಮದ್ ಭಟ್.
ಈ ಶಂಕಿತ ಉಗ್ರರು ಎಲ್ಲಿ ಅಡಗಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದವರಿಗೆ ಇನಾಮು ನೀಡಲಾಗುವುದು ಎಂದು ಪೊಲೀಸರು ಪ್ರಕಟಿಸಿದ್ದಾರೆ.
ಮೂಲತಃ ದಕ್ಷಿಣ ಕಾಶ್ಮೀರದ ಕುಲಗಾಂವ್‌ನ ನಿವಾಸಿ, 22ರ ಹರೆಯದ ರಾಜಪುತಾನ ರೈಫಲ್ಸ್ ಅಧಿಕಾರಿ, ಉಮರ್ ಫಯಾಜ್ ಅವರು ಶೋಪಿಯಾನ್‌ನಲ್ಲಿನ ತಮ್ಮ ಸೋದರ ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದಾಗ ಶಂಕಿತ ಹಿಜ್‌ಬುಲ್ ಮುಜಾಹಿದೀನ್ ಉಗ್ರರು ಕಳೆದ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಅಪಹರಿಸಿ ಬಳಿಕ ಹತ್ಯೆಗೈದಿದ್ದರು. ಫಯಾಜ್ ಅವರ ಗುಂಡುಗಳು ತುಂಬಿದ್ದ ಮೃತ ದೇಹವು ಮರುದಿನ ಬೆಳಗ್ಗೆ ಪತ್ತೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.