![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 17, 2022, 7:05 AM IST
ಹೊಸದಿಲ್ಲಿ: ಉಗ್ರವಾದದ ಅಮಲೇರಿಸಿಕೊಂಡಿರುವ ಪಾಕಿಸ್ಥಾನವು ಅಂತಾರಾಷ್ಟ್ರೀಯ ವೇದಿಕೆಯ ಶಿಷ್ಟಾಚಾರ ಮರೆತು ಪ್ರಧಾನಿ ಮೋದಿಯವರ ಬಗ್ಗೆ ವೈಯಕ್ತಿಕವಾಗಿ ಅವಹೇಳನಕಾರಿ ನಿಂದನೆ ಮಾಡಿ ಭಾರೀ ಟೀಕೆಗೆ ಒಳಗಾಗಿದೆ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಬಗ್ಗೆ ಮಾತನಾಡಿದ್ದ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಬಳಿಕ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಿಂದ ತೀವ್ರ ಮಾತಿನ ಏಟು ತಿಂದಿದ್ದರು. ಮತ್ತೆ ನಾಲಗೆ ಹರಿಬಿಟ್ಟಿರುವ ಬಿಲಾವಲ್ ಭುಟ್ಟೋ, ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ.
ಈ ಬಗ್ಗೆ ದೇಶದಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ. ವಿದೇಶಾಂಗ ಸಚಿವಾಲಯ ಸುದೀರ್ಘ ಟಿಪ್ಪಣಿ ಬಿಡುಗಡೆ ಮಾಡಿದ್ದು, ಸರಣಿ ಪ್ರಶ್ನೆಗಳನ್ನು ಕೇಳಿದೆ. ಪಾಕ್ ಸಚಿವರು ಹತಾಶೆಯಿಂದ ಇಂಥ ಹೇಳಿಕೆ ನೀಡಿದ್ದು, ಇದನ್ನು ತಮ್ಮ ದೇಶ ದಲ್ಲಿರುವ ಉಗ್ರರ ಕುರಿತಂತೆ ಹೇಳಿದರೆ ಸೂಕ್ತವಾಗುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಆರಿಂದನ್ ಬಾಗಿc, ತಿರುಗೇಟು ನೀಡಿದ್ದಾರೆ.
ಪಾಕ್ ಉಸಾಮಾ ಬಿನ್ ಲಾದನ್‌ನನ್ನು ಹುತಾತ್ಮ ಎಂದಿದೆ. ಝಾಕೀರ್ ರೆಹಮಾನ್ ನಖೀÌ, ಹಫೀಜ್ ಸಯೀದ್, ಮಸೂದ್ ಅಜರ್, ಸಾಜಿದ್ ಮಿರ್, ದಾವೂದ್ ಇಬ್ರಾಹಿಂಗೆ ಆಶ್ರಯ ನೀಡಿದೆ. ಯಾವ ದೇಶವೂ ವಿಶ್ವಸಂಸ್ಥೆಯಿಂದ ಉಗ್ರರು ಎಂದು ಕರೆಯಲ್ಪಟ್ಟ 126 ಉಗ್ರರು ಮತ್ತು 27 ಉಗ್ರ ಸಂಘಟನೆಗಳಿಗೆ ಆಶ್ರಯ ನೀಡಿಲ್ಲ ಎಂದಿದ್ದಾರೆ.
ಮತ್ತೂಂದು ದೇಶದ ಮುಖ್ಯಸ್ಥರ ಬಗ್ಗೆ ಹೇಗೆ ಮಾತನಾಡಬೇಕು ಎಂಬುದು ಕೂಡ ಬಿಲಾವಲ್‌ಗೆ ತಿಳಿದಿಲ್ಲ. ಪಾಕ್ ಮಟ್ಟಿಗೆ ಹೇಳುವುದಾದರೆ ಅಲ್ಲಿಂದ ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರತಿಭಟನೆಗೆ ಕರೆ
ಬಿಲಾವಲ್ ಭುಟ್ಟೋ ಹೇಳಿಕೆ ಸಂಬಂಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೊಸದಿಲ್ಲಿಯಲ್ಲಿರುವ ಪಾಕ್ ಹೈಕಮಿಷನರ್ ಕಚೇರಿ ಮುಂದೆ ಅದು ಪ್ರತಿಭಟನೆ ನಡೆಸಿದೆ. ಅಲ್ಲದೆ ಶನಿವಾರ ದೇಶಾದ್ಯಂತ ಪ್ರತಿಭಟನೆ ನಡೆಸಲು
ಬಿಜೆಪಿ ಕರೆ ನೀಡಿದೆ.
ಅಸಹಾಯಕತೆಯ ಪ್ರದರ್ಶನ
ತನ್ನ ದೇಶದ ಭಯೋತ್ಪಾದನೆ ಮತ್ತು ಅದರ ನಕಲಿ ಮುಖವಾಡವನ್ನು ನಿಯಂತ್ರಿಸಲಾಗದೆ ಭುಟ್ಟೋ ಭಾರತದ ವಿರುದ್ಧ ಟೀಕೆ ಮಾಡಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ನಿಂದನೆ, ಆರೆಸ್ಸೆಸ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರಿಂದಮ್ ಬಾಗಿc ಹೇಳಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ಥಾನದ ಭಯೋತ್ಪಾದನೆಯನ್ನು ಬಿಚ್ಚಿಟ್ಟಿದ್ದರಿಂದಲೇ ಈ ರೀತಿ ಹೇಳಿಕೆ ನೀಡಿದ್ದಾರೆ. ಭುಟ್ಟೋ ಹೇಳಿಕೆಯನ್ನು ಸ್ವತಃ ಪಾಕಿಸ್ಥಾನಕ್ಕೆ ಹೋಲಿಸಿ ಹೇಳುವುದಾದರೂ ಅತ್ಯಂತ ಕೀಳು ಮಟ್ಟದ್ದು ಎಂದಿದ್ದಾರೆ.
1971ರ ಡಿ. 16 ಮರೆತರೇ?
ಪಾಕ್ 1971ರ ಬಾಂಗ್ಲಾ ವಿಮೋಚನ ದಿನವನ್ನೇ ಮರೆತಂತೆ ಕಾಣುತ್ತಿದೆ. ಅಂದು ಭಾರತವು ಪಾಕಿಸ್ಥಾನವನ್ನು ಸೋಲಿಸಿ ಬಾಂಗ್ಲಾವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲು ನೆರವಾಗಿತ್ತು. ಆಗ ಪಾಕ್ ಸೇನೆ ಬಾಂಗ್ಲಾದಲ್ಲಿದ್ದ ಹಿಂದೂಗಳು ಮತ್ತು ಅಲ್ಪಸಂಖ್ಯಾಕರ ನರಮೇಧ ನಡೆಸಿದ್ದನ್ನು ಪಾಕ್ ವಿದೇಶಾಂಗ ಸಚಿವರು ಮರೆತಿದ್ದಾರೆ ಎಂದು ಬಾಗಿc ಹೇಳಿದ್ದಾರೆ. ಮೇಕ್ ಇನ್ ಪಾಕಿಸ್ಥಾನದ ಭಯೋತ್ಪಾದನೆಯನ್ನು ಇಡೀ ಜಗತ್ತು ತಡೆಯಬೇಕಿದೆ ಎಂದಿದ್ದಾರೆ.
ಜೈಶಂಕರ್ ಹೇಳಿದ್ದೇನು?
ವಿಶ್ವಸಂಸ್ಥೆಯ ಭದ್ರತ ಮಂಡಳಿಯಲ್ಲಿ ಮಾತನಾಡಿದ್ದ ಎಸ್. ಜೈಶಂಕರ್, ಪಾಕ್ ಹೆಸರೆತ್ತದೆಯೇ ಅದು ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಕರೆದಿದ್ದರು. ಅಲ್ಲಿ ಉಗ್ರರು ಅತ್ಯಂತ ಸಕ್ರಿಯರಾಗಿ ದ್ದಾರೆ ಎಂದಿದ್ದರು. ಅನಂತರ ಪತ್ರಕರ್ತರ ಜತೆ ಮಾತನಾಡುವ ವೇಳೆ, “ನಿಮ್ಮ ಮನೆಯಲ್ಲಿ ಇರುವ ಹಾವುಗಳು ನೆರೆಮನೆಯವರನ್ನಷ್ಟೇ ಕಚ್ಚುತ್ತವೆ ಎಂದು ನಿರೀಕ್ಷಿಸುವುದು ತಪ್ಪು’ ಎಂದು ಹಿಲರಿ ಕ್ಲಿಂಟನ್ ಪಾಕ್ ಬಗ್ಗೆ ಆಡಿದ್ದನ್ನು ಉಲ್ಲೇಖೀಸಿದ್ದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.