Bridge: 9 ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ಸೇತುವೆ ಮೂರನೇ ಬಾರಿಗೆ ಕುಸಿದು ಬಿತ್ತು
Team Udayavani, Aug 17, 2024, 12:10 PM IST
ಬಿಹಾರ: ಭಾಗಲ್ಪುರದ ಸುಲ್ತಂಗಂಜ್ – ಅಗುವಾನಿ ಗಂಗಾ ನದಿಯ ಮೇಲೆ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ಸೇತುವೆ ಶನಿವಾರ ಮೂರನೇ ಬಾರಿಗೆ ಕುಸಿದು ಗಂಗಾ ನದಿ ಪಾಲಾಗಿದೆ.
ಸುಲ್ತಂಗಂಜ್‌ನಿಂದ ಅಗುವಾನಿ ಘಾಟ್ ಕಡೆಯ ಒಂಬತ್ತು ಮತ್ತು ಹತ್ತನೇ ಕಂಬಗಳ ನಡುವಿನ ಭಾಗವು ಕುಸಿದು ಬಿದ್ದಿದೆ. ಎಸ್. ಪಿ. ಸಿಂಗ್ಲಾ ಕಂಪನಿ ಕಳೆದ ಒಂಬತ್ತು ವರ್ಷಗಳಿಂದ ಈ ಸೇತುವೆ ನಿರ್ಮಾಣ ಕಾರ್ಯ ನಡೆಸುತ್ತಿದ್ದು. ಖಗರಿಯಾ ಮತ್ತು ಭಾಗಲ್ಪುರ್ ಜಿಲ್ಲೆಗಳನ್ನು ಸಂಪರ್ಕಿಸಲು ಭಾಗಲ್ಪುರ ಜಿಲ್ಲೆಯ ಸುಲ್ತಂಗಂಜ್ನಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.
ಮೂರನೇ ಬಾರಿ ಕುಸಿತ:
ಈ ಸೇತುವೆ ಏಪ್ರಿಲ್ 27, 2022 ರಂದು ಮೊದಲ ಬಾರಿಗೆ ಕುಸಿದು ಬಿದ್ದಿತ್ತು, ಈ ವೇಳೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಸೂಪರ್ ಸ್ಟ್ರಕ್ಚರ್ ನದಿಗೆ ಬಿದ್ದಿತ್ತು. ಇದಾದ ಬಳಿಕ ಜೂನ್ 4, 2023ರಂದು ಮತ್ತೆ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ ಅದೇ ಸಮಯದಲ್ಲಿ, ಸೇತುವೆಯ ಮೇಲೆ ಕರ್ತವ್ಯದಲ್ಲಿದ್ದ ಇಬ್ಬರು ಸಿಬ್ಬಂದಿ ಕೂಡ ನಿರುಪಾಲಾಗಿದ್ದರು. ಇದೀಗ ಮತ್ತೆ ಒಂಬತ್ತು ಮತ್ತು ಹತ್ತನೇ ಪಿಲ್ಲರ್ ನಡುವಿನ ಭಾಗ ಕುಸಿದು ಬಿದ್ದಿದೆ ಇದರೊಂದಿಗೆ ಒಟ್ಟು ಮೂರನೇ ಬಾರಿ ಸೇತುವೆ ಕುಸಿದು ಬಿದ್ದಂತಾಗಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
ಭಾಗಲ್ಪುರ್-ಸುಲ್ತಂಗಂಜ್ ಅಗುವಾನಿ ಸೇತುವೆಯು ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಂಪರ್ಕಿಸುವ ಬಿಹಾರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯ ಆರಂಭಿಕ ಮೌಲ್ಯ 1710.77 ಕೋಟಿ ರೂ. ಮುಖ್ಯಮಂತ್ರಿ ನಿತೀಶ್ ಕುಮಾರ್ 23 ಫೆಬ್ರವರಿ 2014 ರಂದು ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಸೇತುವೆ ಮತ್ತು ರಸ್ತೆ ನಿರ್ಮಾಣದೊಂದಿಗೆ, NH 31 ಮತ್ತು NH 80 ಸಂಪರ್ಕಗೊಳ್ಳಲಿದೆ. ಈ ಸೇತುವೆಯ ಒಟ್ಟು ಉದ್ದವು 3.160 ಕಿಲೋಮೀಟರ್ ಆಗಿದೆ.
ಇದನ್ನೂ ಓದಿ: Atal ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ… Cab ಚಾಲಕನಿಂದ ಉಳಿಯಿತು ಜೀವ
This Bridge in Bihar is under construction from last 11 Years & today it Collapsed for the 3 rd time from inception. Cost of Bridge is ₹ 1710 Crores.
If wasting Tax payers money is an art then Completely corrupt Bihar Govt is Pro Artist in that. Still Modi Govt sanctioned 26k… pic.twitter.com/XYcpqRHyGj
— Veena Jain (@DrJain21) August 17, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.