ಕೋಲ್ಕತ ಎಟಿಎಂ ಲೂಟಿ: 3 ನಿರುದ್ಯೋಗಿ ಇಂಜಿನಿಯರ್‌ಗಳು ಅರೆಸ್ಟ್
Team Udayavani, Aug 9, 2018, 4:06 PM IST
ಕೋಲ್ಕತ : ಲಕ್ಷಾಂತರ ರೂಪಾಯಿ ಎಟಿಎಂ ವಂಚನೆ ಹಗರಣದಲ್ಲಿ ಕಳೆದ ಆಗಸ್ಟ್ 3ರಂದು ದಿಲ್ಲಿಯಲ್ಲಿ ಮೂವರು ರೋಮನ್ನರು ಬಂಧಿಸಲಾದುದನ್ನು ಅನುಸರಿಸಿ ಇಂದು ಗುರುವಾರ ಈ ಜಾಲಕ್ಕಾಗಿ ಕೋಲ್ಕತದಲ್ಲಿನ ಎಟಿಎಂ ಮಶೀನ್‌ಗಳ ಸ್ಕಿಮ್ಮಿಂಗ್ ನಡೆಸುತ್ತಿದ್ದ ಮೂವರು ನಿರುದ್ಯೋಗಿ ಇಂಜಿನಿಯರ್‌ಗಳನ್ನು ಬಂಧಿಸಿದರು.
ಈ ಜಾಲದಲ್ಲಿ ಹಲವಾರು ನಿರುದ್ಯೋಗಿ ಇಂಜಿನಿಯರ್‌ಗಳು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೆಲಸ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ಇಂದು ಬಂಧಿಸಲ್ಪಟ್ಟ ಮೂವರು ಇಂಜಿನಿಯರ್ ಗಳಿಂದ ಪೊಲೀಸರು ಸ್ಕಿಮ್ಮರ್ ಮಶೀನ್ ಗಳು, ಸೂð ಡೈವರ್‌ಗಳು, ಕ್ಲೋನ್ ಮಾಡಲ್ಪಟ್ಟ ಕಾರ್ಡುಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡರು.
ದಿಲ್ಲಿಯಲ್ಲಿ ಬಂಧಿಸಲ್ಪಟ್ಟಿದ್ದ ಮೂವರು ರೋಮನ್ನರನ್ನು ಇಂದು ಗುರುವಾರ ಕೋಲ್ಕತ ಸೆಶನ್ಸ್ ಕೋರ್ಟಿನಲ್ಲಿ ಹಾಜರುಪಡಿಸಲಾಗಿ ಅವರನ್ನು ಆಗಸ್ಟ್ 21ರ ವರಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
“ನಾವೀಗ ಪತ್ತೆ ಹಚ್ಚಿರುವುದು ಭಾರೀ ದೊಡ್ಡ ಎಟಿಎಂ ಹಗರಣದ ಒಂದು ಸಣ್ಣ ಭಾಗ ಮಾತ್ರ. ಇನ್ನೆರಡು ದಿನಗಳಲ್ಲಿ ನಾವು ನಾವು ಇಡಿಯ ಪ್ರಕರಣವನ್ನು ಆಮೂಲಾಗ್ರವಾಗಿ ಭೇದಿಸಲಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎಟಿಎಂ ಸ್ಕಿಮ್ಮಿಂಗ್ ನಡೆಸಿರುವ ಖದೀಮರು ಮೊದಲಾಗಿ ಸೆಕ್ಯುರಿಟಿ ಗಾರ್ಡ್ ಗಳು ಇಲ್ಲದ ಎಟಿಎಂ ಗಳನ್ನೇ ಆಯ್ದುಕೊಂಡು ಬ್ಯಾಂಕಿಂಗ್ ಅವಧಿಗೆ ಮುನ್ನ ಅಲ್ಲಿನ ಎಟಿಎಂ ಮಶೀನ್‌ನಲ್ಲಿ ಸ್ಕಿಮ್ಮಿಂಗ್ ಉಪಕರಣ ಇತ್ಯಾದಿಗಳನ್ನು ಸೆಟ್ ಮಾಡುತ್ತಿದ್ದರು. ರಾತ್ರಿಯ ಬಳಿಕ ಅದನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಅವಧಿಯಲ್ಲಿ ಯಾರೆಲ್ಲ ಎಟಿಎಂ ಗೆ ಬಂದು ಹಣ ಡ್ರಾ ಮಾಡಿರುವರೋ ಅವರ ಕಾರ್ಡ್ ಮಾಹಿತಿ, ಪಾಸ್ ವಾರ್ಡ್ ಎಲ್ಲವನ್ನೂ ಸ್ಕಿಮ್ಮಿಂಗ್ ಮೂಲಕ ಕದಿಯಲಾಗುತ್ತಿತ್ತು.
ಬಂಧಿತ ಮೂವರು ರೋಮನ್ನರು ಕೋಲ್ಕತದ ನಿರುದ್ಯೋಗಿ ಇಂಜಿನಿಯರ್‌ಗಳಿಗೆ ಭಾರೀ ಹಣದಾಸೆ ತೋರಿಸಿ ಸ್ಕಿಮ್ಮಿಂಗ್, ಕ್ಲೋನಿಂಗ್ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಈ ಕೆಲಸಗಳು ಈ ವರ್ಷ ಎಪ್ರಿಲ್‌ನಲ್ಲಿ ನಡೆದಿದ್ದವು. ಜುಲೈಯಲ್ಲಿ ರೋಮನ್ ಖದೀಮರು ದಿಲ್ಲಿಯ ಎಟಿಎಂ ಗಳಲ್ಲಿ ಕ್ಲೋನ್ ಮಾಡಲ್ಪಟ್ಟ ಎಟಿಎಂ ಕಾರ್ಡುಗಳನ್ನು ಬಳಸಿಕೊಂಡು 20 ಲಕ್ಷ ರೂ.ಗಳನ್ನು ಲೂಟಿ ಮಾಡಿದ್ದರು.
ಕೋಲ್ಕತದ ವಿವಿಧ ಬ್ಯಾಂಕುಗಳ ಸುಮಾರು 72 ಗ್ರಾಹಕರು ಒಂದೇ ದಿನ ತಮ್ಮ ಖಾತೆಯಿಂದ ಹಣ ಲಪಟಾವಣೆಗೊಂಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಮೊದಲಾಗಿ ದಿಲ್ಲಿಯಲ್ಲಿ ಮೂವರು ರೋಮನ್ನರು ಬಂಧಿಸಿದರು. ಅನಂತರ ಅವರಿಂದ ಈ ಜಾಲದ ಮಾಹಿತಿಗಳನ್ನು ಕಕ್ಕಿಸಿದ ಬಳಿಕ ಇಂದು ಮೂವರು ಇಂಜಿನಿಯರ್‌ಗಳನ್ನು ಪೊಲೀಸರು ಸೆರೆಹಿಡಿಯಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
MUST WATCH
ಹೊಸ ಸೇರ್ಪಡೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.