ದುಷ್ಕರ್ಮಿಗಳಿಂದ ಪ್ರಿಯಕರನ ಹತ್ಯೆ, ಮಹಿಳೆಯ ಗ್ಯಾಂಗ್ ರೇಪ್
Team Udayavani, Mar 6, 2018, 3:37 PM IST
ಥಾಣೆ : ದುಷ್ಕರ್ಮಿಗಳ ಗುಂಪೊಂದು ನಿನ್ನೆ ತಡರಾತ್ರಿ ಥಾಣೆಯ ನಾಲಿಂಬಿ ಗ್ರಾಮದಲ್ಲಿ ಗಣೇಶ್ ದಿನಕರ್ ಎಂಬಾತನನ್ನು ಅಡ್ಡಗಟ್ಟಿ ಬಂದೂಕು ತೋರಿಸಿ ಹಣ ಕೀಳಲು ಯತ್ನಿಸಿದಾಗ ಪ್ರತಿರೋಧ ಒಡ್ಡಿದ ಆತನನ್ನು ಗುಂಡಿಕ್ಕಿ ಕೊಂದು, ಆತನ ಜತೆ ಇದ್ದ ಗರ್ಲ್ ಫ್ರೆಂಡ್ ಮೇಲೆ ಗ್ಯಾಂಗ್ ರೇಪ್ ನಡೆಸಿ ಪರಾರಿಯಾದ ಘಟನೆ ವರದಿಯಾಗಿದೆ.
ತಿತ್ವಾಲಾ ಪೊಲೀಸ್ ಠಾಣಾಧಿಕಾರಿ ಯೋಗೇಶ್ ಗುರವ್ ಅವರು ಈ ಘಟನೆಯ ಬಗ್ಗೆ ಮಾಹಿತಿ ನೀಡಿ, ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ; ಘಟನೆಯು ನಿರ್ಜನ ಪ್ರದೇಶದಲ್ಲಿ ನಡೆದಿರುವುದರಿಂದ ಪ್ರತ್ಯಕ್ಷದರ್ಶಿಗಳು ಇಲ್ಲದ ಕಾರಣಕ್ಕೆ ಪ್ರಕರಣವು ಜಟಿಲವಾಗಿದೆ; ಹಾಗಿದ್ದರೂ ದುಷ್ಕರ್ಮಿಗಳನ್ನು ಸೆರೆ ಹಿಡಿಯಲು ಸಕಲ ಯತ್ನ ಮಾಡಲಾಗುವುದು ಎಂದಿದ್ದಾರೆ.
ನಾಲಿಂಬಿ ಗ್ರಾಮ ಹಾಗೂ ಆಸುಪಾಸಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ; ಈ ಹಿಂದೆ ಹೆತ್ತವರೊಂದಿಗೆ ಮನೆಗೆ ಹೋಗುತ್ತಿದ್ದ 11ರ ಬಾಲಕಿಯನ್ನು ದುಷ್ಕರ್ಮಿಗಳು, ಆಕೆಯ ಹೆತ್ತವರಿಗೆ ಬಂದೂಕು ತೋರಿಸಿ ಬದಿಗೆ ಸರಿಸಿ, ಅತ್ಯಾಚಾರ ಮಾಡಿದ್ದರು. ಪೊಲೀಸರು ಅನಂತರ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Without Helmet: ಹೀಗೂ ಉಂಟೇ.! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.