ಡಿಜಿಟಲ್ಗೆ ಉತ್ತೇಜನ
Team Udayavani, Feb 2, 2017, 3:50 AM IST
ನಗದು ರಹಿತ ವಹಿವಾಟು ಉತ್ತೇಜಿಸುವುದು ಕೇಂದ್ರ ಸರಕಾರದ ಕಾರ್ಯತಂತ್ರಗಳಲ್ಲಿ ಒಂದು. ಆರ್ಥಿಕತೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಗದು ರಹಿತ ವ್ಯವಹಾರವನ್ನು ಗರಿಷ್ಠ ಮಟ್ಟದಲ್ಲಿ ಜಾರಿಗೆ ತರುವುದೇ ಇದರ ಮುಖ್ಯ ಉದ್ದೇಶ.
ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಯೋಜನೆಗೆ ಪೂರಕವಾಗಿ ಮೂಲಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ. ಇದನ್ನು ದೂರು ನಿರ್ವಹಣಾ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಗೊಳಿಸಲಾಗುತ್ತಿದೆ. ಅಂಚೆ ಕಚೇರಿಗಳು, ನ್ಯಾಯಬೆಲೆ ಅಂಗಡಿಗಳು , ಬ್ಯಾಂಕಿಂಗ್ ಪ್ರತಿನಿಧಿಗಳನ್ನು ಯೋಜನೆಯ ಉತ್ತೇಜಕರನ್ನಾಗಿ ನಿಯೋಜಿ ಸಲಾಗುತ್ತಿದೆ. ಪೆಟ್ರೋಲ್ ಪಂಪ್ಗ್ಳು, ಸರಕಾರಿ ಕಚೇರಿಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಭೀಮ್ ಆ್ಯಪ್ ಸಹಿತ ಡಿಜಿಟಲ್ ಪಾವತಿ ವಿಧಾನಗಳನ್ನು ಕಡ್ಡಾಯ ಗೊಳಿಸುವ ಯೋಚನೆಯನ್ನೂ ಸರಕಾರ ಹೊಂದಿದೆ.
ರಾಜ್ಯ ಸರಕಾರಗಳು ನಿಗದಿತ ಮೊತ್ತಕ್ಕಿಂತ ಹೆಚ್ಚಿನ ವ್ಯವಹಾರ ವನ್ನು ಡಿಜಿಟಲ್ ಮೂಲಕವೇ ಮಾಡಬೇಕೆಂಬ ನಿಯಮ ರೂಪಿ
ಸುವ ಪ್ರಸ್ತಾವನೆಯನ್ನು ಮುಖ್ಯ ಮಂತ್ರಿಗಳ ಮಂಡಳಿ ಎದುರು ಇಡಲಾಗಿದೆ. ಈ ವರದಿಯಲ್ಲಿನ ಶಿಫಾರಸುಗಳ ಅನ್ವಯ 2007ರ ಪಾವತಿಗಳು, ಸೆಟಲ್ಮೆಂಟ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ.
ಡಿಜಿಟಲ್ ಪೇಮೆಂಟ್ ಸಾಧನಗಳಿಗೆ ರಿಯಾಯಿತಿ
ನಗದು ರಹಿತ ವ್ಯವಹಾರಕ್ಕೆ ಅತ್ಯಗತ್ಯವಾಗಿರುವ ಕಾರ್ಡ್ ರೀಡರ್, ಮೈಕ್ರೋ ಎಟಿಎಂ ಸ್ಟಾಂಡರ್ಡ್ಗಳು, ಬೆರಳಚ್ಚು ಸ್ಕ್ಯಾನರ್ಗಳು, ರೀಡರ್ಗಳು ಹಾಗೂ ಕಣ್ಣಿನ ಸ್ಕ್ಯಾನರ್ಗಳ ಮೇಲಿನ ಬಿಸಿಡಿ, ಅಬಕಾರಿ, ಸಿವಿ ಸುಂಕ ಹಾಗೂ ಎಸ್ಎಡಿ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು. ಈ ಯಂತ್ರಗಳ ಭಾಗ ತಯಾರಕರಿಗೂ ವಿನಾಯಿತಿ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.