ದೀರ್ಘಾವಧಿ ಬಂಡವಾಳ ಲಾಭ ತೆರಿಗೆ ಮತ್ತೆ ಜಾರಿಗೆ
Team Udayavani, Feb 2, 2018, 8:35 AM IST
ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಕೊಂಚ ಗಮನಿಸಿ. 18 ವರ್ಷಗಳ ಬಳಿಕ ದೀರ್ಘಾವಧಿ ಬಂಡವಾಳ ಲಾಭ (ಎಲ್‌ಟಿಸಿಜಿ) ತೆರಿಗೆಯನ್ನು ಮರಳಿ ಜಾರಿಗೆ ತರಲಾಗಿದೆ. ಈಕ್ವಿಟಿ ಶೇರು ಹಾಗೂ ಮ್ಯೂಚುವಲ್ ಫಂಡ್‌ಗಳ ಮಾರಾಟದಿಂದ ವರ್ಷವೊಂದರಲ್ಲಿ ಒಟ್ಟು 1 ಲಕ್ಷ ರೂ.ಗಳನ್ನು ಮೀರಿದ ಬಂಡವಾಳಕ್ಕೆ ಲಾಭ ಬಂದಲ್ಲಿ ಅದರ ಮೇಲೆ ಶೇ. 10 ತೆರಿಗೆ ವಿಧಿಸಲಾಗುವುದು. 1 ಲಕ್ಷ ರೂ.ಗಳಿಗಿಂತ ಕಡಿಮೆ ಲಾಭಕ್ಕೆ ತೆರಿಗೆ ಇರುವುದಿಲ್ಲ. ಪ್ರಸಕ್ತ ಶೇರು ಹಾಗೂ ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಒಂದು ವರ್ಷ ಕಾಲ ಇಟ್ಟುಕೊಂಡು ಮಾರಿದರೆ ಎಲ್‌ಟಿಸಿಜಿ ತೆರಿಗೆ ವಿಧಿಸಲಾಗುತ್ತಿಲ್ಲ. ಖರೀದಿಸಿದ 1ವರ್ಷದಲ್ಲಿ ಶೇರು ಮಾರಾಟ ಮಾಡಿದರೆ ಶೇ. 15 ತೆರಿಗೆ ವಿಧಿಸಲಾಗುತ್ತಿದೆ. ಮ್ಯೂಚುವಲ್‌ಫಂಡ್ ಯೂನಿಟ್ ಹೊಂದಿರುವವರು ಮಾರಾಟ ವೇಳೆ ಪಾವತಿಸುವ ಶೇ. 0.001 ಸೆಕ್ಯುರಿಟಿ ವಹಿವಾಟು ತೆರಿಗೆ (ಎಸ್‌ಟಿಟಿ) ಮತ್ತು ಈಕ್ವಿಟಿ ಶೇರುಗಳ ಖರೀದಿ ಹಾಗೂ ಮಾರಾಟ ವೇಳೆ ಪಾವತಿಸಲಾಗುವ ಶೇ. 0.1 ಎಸ್‌ಟಿಟಿ ಮುಂದುವರಿಯಲಿದೆ.
2004ರಲ್ಲಿ ಸರಕಾರ ಈಕ್ವಿಟಿ ಮೇಲಣ ದೀರ್ಘಾವಧಿ ಬಂಡವಾಳ ಲಾಭ ತೆರಿಗೆಯನ್ನು ರದ್ದುಗೊಳಿಸಿತ್ತು ಮತ್ತು ಅದರ ಜಾಗದಲ್ಲಿ ಎಸ್‌ಟಿಟಿಯನ್ನು ಜಾರಿಗೆ ತಂದಿತ್ತು. ಇದೀಗ ದೀರ್ಘಾವಧಿ ಬಂಡವಾಳ ತೆರಿಗೆಯನ್ನು ಮರಳಿ ಜಾರಿಗೆ ತರಲಾಗಿದೆ ಮತ್ತು ಜತೆಗೆ ಎಸ್‌ಟಿಟಿ ಮುಂದುವರಿಯಲಿದೆ. ಆದರೆ 2018 ಜ. 31ರ ತನಕ ಬಂದ ಲಾಭಗಳಿಗೆ ಎಲ್‌ಟಿಸಿಜಿ ತೆರಿಗೆ ವಿನಾಯಿತಿ ನೀಡಲಾಗಿದೆ. 2018 ಜ. 31ರ ಬಳಿಕ ಬಂದ ಲಾಭಗಳಿಗಷ್ಟೇ ತೆರಿಗೆ ಅನ್ವಯವಾಗಲಿದೆ.
ಹೂಡಿಕೆದಾರರು ಹೊಸ ಶೇ. 10 ಎಲ್‌ಟಿಸಿಜಿ ತೆರಿಗೆ ಪಾವತಿಸುವುದನ್ನು ತಪ್ಪಿಸಿಕೊಳ್ಳಲು ಡಿವಿಡೆಂಡ್ ಪ್ಲಾನ್‌ಗಳಿಗೆ ತಮ್ಮ ಹೂಡಿಕೆ ಮಾಡುವುದನ್ನು ತಡೆಯಲು ಬಜೆಟ್‌ನಲ್ಲಿ ಮ್ಯೂಚುವಲ್ ಫಂಡ್‌ಗಳ ಮೇಲೆ ಶೇ. 10 ಡಿವಿಡೆಂಡ್ ವಿತರಣಾ ತೆರಿಗೆ(ಡಿಟಿಟಿ)ಯನ್ನು ಪ್ರಸ್ತಾವಿಸಲಾಗಿದೆ. ಇದು ಫಂಡ್‌ಹೌಸ್‌ಗಳು ಮಿಗತೆಯನ್ನು ಡಿವಿಡೆಂಡ್ ಆಗಿ ಪಾವತಿಸುವುದಕ್ಕೆ ಮುನ್ನ ನೀಡುವ ತೆರಿಗೆಯಾಗಿದೆ. ವಿಶೇಷವೆಂದರೆ ಶೇ. 10 ಎಲ್‌ಟಿಸಿಜಿ ತೆರಿಗೆಯನ್ನು ವಾರ್ಷಿಕ ಒಟ್ಟು ಬಂಡವಾಳ ಲಾಭ 1 ಲಕ್ಷ ರೂ.ಗಳನ್ನು ಮೀರುವ ಹೂಡಿಕೆದಾರರಿಗೆ ವಿಧಿಸಲಾಗುವುದಿದ್ದರೆ ಡಿಟಿಟಿಯನ್ನು ಈಕ್ಟಿಟಿಯಲ್ಲಿ ಹೂಡಿಕೆ ನಡೆಸುವ ಮ್ಯೂಚುವಲ್ ಫಂಡ್‌ಗಳ ಎಲ್ಲ ಹೂಡಿಕೆದಾರರು ಭರಿಸಬೇಕಾಗುವುದು. ಈ ಬಜೆಟ್ ಪ್ರಸ್ತಾವದಿಂದ ಬೊಕ್ಕಸಕ್ಕೆ ಮೊದಲ ವರ್ಷ 20,000 ಕೋಟಿ ರೂ.ಗಳ ವರಮಾನ ಲಭಿಸಲಿದೆ. ಮುಂದಿನ ವರ್ಷಗಳಲ್ಲಿ ಈ ವರಮಾನದಲ್ಲಿ ಹೆಚ್ಚಳವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.