ದೇಶದ ರೈಲ್ವೆ ಪ್ರಯಾಣಿಕರ ಗಮನಕ್ಕೆ…

ಸರ್ವರಿಗೂ ಆರ್ಥಿಕ ಶುಭಾಶಯಗಳು

Team Udayavani, Jul 6, 2019, 5:10 AM IST

PTI7_5_2019_000048A

ಭಾರತದ ರೈಲುಗಳು ಗಿಜಿಗುಡುವುದು ಸಾಮಾನ್ಯ ದೃಶ್ಯ. ಇದನ್ನು ಬದಲಿಸಿ ಪ್ರಯಾಣಿಕ ಸ್ನೇಹಿಯಾಗಿ ಮಾಡಬೇಕೆನ್ನುವುದು ಕೇಂದ್ರದ ಉದ್ದೇಶ. ಅಂತಹ ಹಲವು ಯೋಜನೆಗಳನ್ನು ಶುಕ್ರವಾರ ಪ್ರಕಟಿಸಲಾಯಿತು.

ಭಾರತೀಯ ರೈಲ್ವೆ ಇತಿಹಾಸದಲ್ಲೇ ಬೃಹತ್‌ ಎನಿಸಿದ ಆರ್ಥಿಕ ಲೆಕ್ಕಾಚಾರವನ್ನು ನೂತನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದಾರೆ. ಒಟ್ಟಾರೆ 1.60 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚವನ್ನು ಘೋಷಿಸಿದ್ದಾರೆ. ಈ ಹಿಂದೆ ಎಂದೂ ಈ ಪ್ರಮಾಣದಲ್ಲಿ ಬಂಡವಾಳ ವೆಚ್ಚವನ್ನು ಪ್ರಕಟಿಸಿರ ಲಿಲ್ಲವೆನ್ನುವುದು ಗಮನಾರ್ಹ. ಕಳೆದ ಬಾರಿ ಈ ಮೊತ್ತ 1.48 ಲಕ್ಷ ಕೋಟಿ ರೂ. ಇತ್ತು. ಈ ಬಾರಿ ಬಜೆಟ್‌ನಲ್ಲಿ ರೈಲ್ವೆಗೆ 65,837 ಕೋಟಿ ರೂ. ಅನುದಾನ ನೀಡಲಾಗಿದೆ. ಮಹತ್ವದ ಸಂಗತಿಯೆಂ ದರೆ ಮೂಲ ಸೌಕರ್ಯ ಅಭಿವೃದ್ಧಿಗೆ, ಪ್ರಯಾಣಿಕರ ಸುಖಕರ ಯಾನಕ್ಕೆ, ಅವರ ಸುರಕ್ಷತೆಗೆ ಮಹತ್ವ ನೀಡಲಾಗಿದೆ. ಇನ್ನೂ ಗಮ ನಾರ್ಹ ಸಂಗತಿಯೆಂದರೆ ಅತಿಶೀಘ್ರದಲ್ಲಿಯೇ ಈ ಎಲ್ಲ ವ್ಯವಸ್ಥೆಗ ಳನ್ನು ಅಳವಡಿಸಿಕೊಳ್ಳಲು ಗುರಿ ನಿಗದಿಪಡಿಸಿಕೊಳ್ಳಲಾಗಿದೆ.

ಎಲ್ಲೆಲ್ಲಿ, ಎಷ್ಟೆಷ್ಟು ಹಣ?: 7255 ಕೋಟಿ ರೂ.ಗಳನ್ನು ಹೊಸ ರೈಲು ಮಾರ್ಗಕ್ಕೆ ನಿರ್ಮಾಣಕ್ಕೆ, 2200 ಕೋಟಿ ರೂ.ಗಳನ್ನು ಮಾರ್ಗ ಪರಿವರ್ತನೆಗೆ, ಮಾರ್ಗ ದ್ವಿಮುಖೀಕ ರಣಕ್ಕೆ (ಡಬ್ಲಿಂಗ್‌) 700 ಕೋಟಿ ರೂ., ರೈಲು ಮಾರ್ಗದಲ್ಲಿ ಸಂಚರಿ ಸುವ ಇತರೆ ರೈಲು ವಾಹ ನಗಳಿಗಾಗಿ 6,114.82 ಕೋಟಿ ರೂ., ಸಂಕೇತ ಸೇವೆ ಹಾಗೂ ದೂರ ಸಂಪರ್ಕ ವ್ಯವಸ್ಥೆ ನಿರ್ಮಾಣಕ್ಕೆ 1,750 ಕೋಟಿ ರೂ. ಮೀಸಲು. ಈ ಮೊತ್ತ ಫೆಬ್ರವರಿಯಲ್ಲಿ ಪೀಯೂಷ್‌ ಗೋಯಲ್ ಮಂಡಿಸಿದ ಮಧ್ಯಂತರ ಬಜೆಟ್‌ನಷ್ಟೇ ಇದೆ. ಯಾವುದೇ ಬದಲಾವಣೆಯಿಲ್ಲ.

ರೈಲ್ವೆಯನ್ನು ಉನ್ನತೀಕರಣಗೊಳಿಸುವ, ಅದರ ಭವಿಷ್ಯವನ್ನು ಭದ್ರಗೊಳಿಸುವ ದೃಷ್ಟಿಯಿಂದಲೂ ನಿರ್ಮಲಾ ಯೋಚಿಸಿದ್ದಾರೆ. ಅದರ ಸುಳಿವನ್ನೂ ಅವರು ನೀಡಿದ್ದಾರೆ. 2018ರಿಂದ 2030ರ ಅವಧಿಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ 50 ಲಕ್ಷ ಕೋಟಿ ರೂ. ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಈ ಕೆಲಸ ವೇಗವಾಗಿ ಸಾಗಲು ಸರ್ಕಾರಿ ಮತ್ತು ಖಾಸಗಿ ಸಹಾಭಾಗಿತ್ವ (ಪಿಪಿಪಿ) ಬೇಕು ಎಂದು ಅವರು ಬಯಸಿದ್ದಾರೆ. ಇದೇ ವರ್ಷ ರೈಲ್ವೆ ನಿಲ್ದಾಣಗಳ ಆಧುನೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಉಪನಗರ ರೈಲ್ವೆ ಅಭಿವೃದ್ಧಿಯನ್ನು ವಿಶೇಷ ಉದ್ದೇಶ ವಾಹನ ಯೋಜನೆ (ಎಸ್ಪಿವಿ)ಯಡಿ, ಮೆಟ್ರೊ ರೈಲು ಜಾಲವನ್ನು ಸರ್ಕಾರಿ -ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು.

ಮೂಲಸೌಕರ್ಯ ಅಭಿವೃದ್ಧಿಗೆ 3,422 ಕೋಟಿ ರೂ.
ಭಾರತೀಯ ರೈಲ್ವೆಯನ್ನು ಸಂಪೂರ್ಣ, ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ತೋರಿದೆ. ಹೊಸ ಹೊಸ ರೈಲು ಮಾರ್ಗವನ್ನಷ್ಟೇ ಘೋಷಿಸುವ ಎಂದಿನ ಪರಂಪರಾಗತ ಲೆಕ್ಕಾಚಾರವನ್ನು ಕೈಬಿಟ್ಟು, ಇರುವ ಮಾರ್ಗವನ್ನು ಸುಂದರಗೊಳಿಸುವುದು, ಪ್ರಯಾಣಿಕರ ಸುಖಕರ ಅನುಭವಕ್ಕೆ ಗರಿಷ್ಠ ಸೌಲಭ್ಯ ಒದಗಿಸುವುದು, ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸುವ ಗುರಿಯನ್ನು ಪ್ರಸ್ತುತ ಕೇಂದ್ರ ಆಯವ್ಯಯದಲ್ಲಿ ಹಾಕಿಕೊಳ್ಳಲಾಗಿದೆ. ಪ್ರಯಾಣಿಕರ ಮೂಲಸೌಕರ್ಯ ಅಭಿವೃದ್ಧಿಗಾಗಿ 2019-20ರ ಅವಧಿಯಲ್ಲಿ 3422.57 ಕೋಟಿ ರೂ. ಮೀಸಲಿಡಲಾಗಿದೆ. 2018-19ರಲ್ಲಿ ನೀಡಿದ 1,657 ಕೋಟಿ ರೂ.ಗೆ ಹೋಲಿಸಿದರೆ ಇದು ದುಪ್ಪಟ್ಟು ಮೊತ್ತ. 2017-18ರಲ್ಲಿ ಈ ಮೊತ್ತ ಈ ಮೊತ್ತ ಇನ್ನೂ ಕಡಿಮೆಯಾಗಿ 1,100 ಕೋಟಿ ರೂ.ಗೆ ಸೀಮಿತವಾಗಿತ್ತು.

ಎಲ್ಲ ನಿಲ್ದಾಣಗಳಲ್ಲಿ ಸಿಸಿಟೀವಿ ಕಣ್ಗಾವಲು

ಪ್ರಯಾಣಿಕರ ಸುರಕ್ಷತೆ ಕಾಪಾಡಲು ದೇಶದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟೀವಿ ಅಳವಡಿಸಲು ತೀರ್ಮಾನಿಸಲಾಗಿದೆ. ಹಾಗೆಯೇ ರೈಲುಗಳಲ್ಲಿ ಆರ್ಟ್‌ ವಿಡಿಯೊ ಟೆಕ್ನಾಲಜಿ ಮೂಲಕ ಪ್ರಯಾಣಿಕರ ಚಲನವಲ ನಗಳನ್ನು ಗಮನಿಸುವ ವ್ಯವಸ್ಥೆ ಮಾಡಲಾಗು ವುದು. ಈಗಾಗಲೇ 455 ನಿಲ್ದಾಣಗಳಲ್ಲಿ ಸಿಸಿಟೀವಿ ಅಳವಡಿಸಲಾಗಿದೆ. 2020-21 ರೊಳಗಾಗಿ ದೇಶದ ಎಲ್ಲ ನಿಲ್ದಾಣಗಳಲ್ಲೂ ಈ ವ್ಯವಸ್ಥೆ ಮಾಡಲಾಗಿರುತ್ತದೆ. ಇದುವರೆಗೆ 1,203 ರೈಲ್ವೆ ಕೋಚ್‌ಗಳಲ್ಲಿ ಸಿಸಿಟೀವಿ ಅಳವಡಿಸಲಾಗಿದೆ. 2021-22ರಷ್ಟೊತ್ತಿಗೆ ಎಲ್ಲ ಪ್ರಯಾಣಿಕ ರೈಲುಗಳಲ್ಲಿ ಈ ವ್ಯವಸ್ಥೆ ಎಂದು ನಿರ್ಮಲಾ ಹೇಳಿದ್ದಾರೆ.

ಎಲ್ಲ ನಿಲ್ದಾಣಗಳಲ್ಲೂ ಶೀಘ್ರದಲ್ಲೇ ವೈಫೈ

ಪ್ರಯಾಣಿಕರ ಸುಗಮ ಯಾತ್ರೆಗಾಗಿ ಎಲ್ಲ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಲು ಚಿಂತಿಸಲಾಗಿದೆ. ಕೆಲವೇ ಕೆಲವು ನಿಲುಗಡೆ ನಿಲ್ದಾಣಗಳನ್ನು ಹೊರತುಪಡಿಸಿದರೆ, ಉಳಿದೆಲ್ಲ ನಿಲ್ದಾಣಗಳಲ್ಲಿ ವೈಫೈ ನೀಡಲು ನಿರ್ಧರಿಸಲಾಗಿದೆ. ಈ ಕ್ರಮದ ಮೂಲಕ ನಗರ ಮತ್ತು ಗ್ರಾಮೀಣ ಭಾಗದ ನಿಲ್ದಾಣಗಳ ನಡುವಿನ ಅಂತರವನ್ನು ತೊಡೆದು ಹಾಕುವುದು ಉದ್ದೇಶವಾಗಿದೆ. ಇಲ್ಲಿಯವರೆಗೆ 1,603 ನಿಲ್ದಾಣಗಳಲ್ಲಿ ವೈಫೈ ನೀಡಲಾಗಿದೆ. ಉಳಿದ 4,882 ನಿಲ್ದಾಣಗಳಿಗೆ ಇದೇ ವರ್ಷ ಆ.31ರೊಳಗೆ ಈ ವ್ಯವಸ್ಥೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ.

600 ನಿಲ್ದಾಣಗಳು ವಿಶ್ವದರ್ಜೆಗೇರಿಕೆ
ದೇಶದ 600 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸಲು ನಿರ್ಧರಿಸಲಾಗಿದೆ. ಇಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು. ಸುಗಮ ಅಂತರ್ಜಾಲ ಸೇವೆ ನೀಡಲು ವೈಫೈ ವ್ಯವಸ್ಥೆ ಇರಲಿದೆ.ಅತ್ಯಾಧುನಿಕ ಕುಡಿಯುವ ನೀರಿನ ವ್ಯವಸ್ಥೆ, ಪ್ರಯಾಣಿಕರ ವಸತಿ ಕೊಠಡಿಯ ಉನ್ನತೀಕರಣ, ಟೀವಿಗಳು,ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡುವ ಕಿಯೋಸ್ಕ್ಗಳು, ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು.

ಸಂಬಳವೇ ರೈಲ್ವೆಗೆ ತಲೆನೋವು
ರೈಲ್ವೆ ಇಲಾಖೆಗೆ ಪ್ರಸ್ತುತ ಸಮಸ್ಯೆಯಾಗಿ ಪರಿಣಮಿಸಿರುವುದು ವೇತನ ನೀಡುವುದು. ಈ ವರ್ಷ ವೇತನಕ್ಕಾಗಿಯೇ 86,554.31 ಕೋಟಿ ರೂ. ಅಗತ್ಯವಿದೆ. ಇದು ಕಳೆದವರ್ಷಕ್ಕೆ ಹೋಲಿಸಿದರೆ 14,000 ಕೋಟಿ ರೂ. ಏರಿಕೆಯಾಗಿದೆ. ಸತತವಾಗಿ ಏರುತ್ತಲೇ ಇರುವ ವೇತನ ರೈಲ್ವೆಗೆ ಚಿಂತೆಯುಂಟು ಮಾಡಿದೆ.

ಒಂದು ದೇಶ ಒಂದು ವ್ಯವಸ್ಥೆ
ಇಡೀ ದೇಶವನ್ನೇ ಏಕಸೂತ್ರದಲ್ಲಿ ಬೆಸೆಯುವುದು ಇಂದಿನ ಅಗತ್ಯ. ಭಾರತ ವೈವಿಧ್ಯತೆಯ ನಾಡಾಗಿರುವುದರಿಂದ ಒಂದು ದೇಶ, ಒಂದೇ ವ್ಯವಸ್ಥೆ ಎಂಬ ದಾರಿಯಲ್ಲಿ ಮೋದಿ ಸರ್ಕಾರ ಹೊರಟಿದೆ.ಈಗಾಗಲೇ ದೇಶಾದ್ಯಂತ ಒಂದು ದೇಶ ಒಂದೇ ವಿದ್ಯುತ್‌ ಸಂಪರ್ಕ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಎಲ್ಲ ರಾಜ್ಯಗಳೂ ಈಗ ಕಡಿಮೆ ದರದಲ್ಲಿ ಅನ್ಯ ರಾಜ್ಯಗಳಿಂದ ವಿದ್ಯುತ್‌ ಖರೀದಿಸಬಹುದಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು, ಏಕ ಅನಿಲ ಸೇತು, ಜಲಸೇತು, ಸ್ಥಳೀಯ ವಿಮಾನ ನಿಲ್ದಾಣಗಳನ್ನು ನಿರ್ಮಿಸಬಹುದೆನ್ನುವುದು ನೂತನ ವಿತ್ತ ಸಚಿವರ ಹೇಳಿಕೆ.

ಉಡಾನ್‌: ವಿಶ್ವದ 3ನೇ
ದೊಡ್ಡ ದೇಶೀ ಸೇವೆ
ಸಣ್ಣ ಸಣ್ಣ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸುವುದು ಕೇಂದ್ರದ ಉದ್ದೇಶ.ಇದಕ್ಕಾಗಿ ಉಡಾನ್‌ ಆರಂಭಿಸಲಾಗಿದೆ. ಭಾರತದ ದೇಶೀಯ ವಿಮಾನಯಾನ ಸೇವೆ ವಿಶ್ವದಲ್ಲೇ 3ನೇ ದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆ. ಇದನ್ನು ಬಳಸಿಕೊಂಡು ವಿಮಾನಯಾನಕ್ಕೆ ಹಣ ಒದಗಿಸುವ, ಗುತ್ತಿಗೆ ನೀಡುವ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ. ಇದರಿಂದ ಆರ್ಥಿಕತೆಗೆ ಚೈತನ್ಯ ಸಿಗುತ್ತದೆ, ಉದ್ಯೋಗ
ಸೃಷ್ಟಿಯಾಗುತ್ತದೆ.

657 ಕಿ.ಮೀ. ಮೆಟ್ರೊ
ಮಾರ್ಗ ಆರಂಭ
2018-19ರಲ್ಲಿ 300 ಕಿ.ಮೀ. ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಅನುಮೋದನೆ, 2019ರಲ್ಲಿ 210 ಕಿ.ಮೀ. ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. ಒಟ್ಟಾರೆ 657 ಕಿ.ಮೀ. ಮೆಟ್ರೊ ಮಾರ್ಗಗಳು ಕಾರ್ಯಾಚರಣೆ ಆರಂಭಿಸಿವೆ.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.