“ಸೀತಾ” ರಾಮರಾಜ್ಯ
ಬಜೆಟ್ ಗಾತ್ರ 27,86,349 ಕೋಟಿ ರೂ.
Team Udayavani, Jul 6, 2019, 6:00 AM IST
ಕಾಯಕವೇ ಕೈಲಾಸ… ಗ್ರಾಮ, ಬಡವ ಮತ್ತು ರೈತರೇ ನಮ್ಮ ಆದ್ಯತೆ ಎಂದು ಹೇಳುತ್ತಾ, ಸೂಪರ್ ಸಿರಿವಂತರಿಗೆ ತೆರಿಗೆಯ ಬರೆ ಎಳೆದಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡಿಸಿದ ನಿರ್ಮಲಾ, ಹಳ್ಳಿಗಳ ಉದ್ದಾರ, ವಸತಿ ಸೌಲಭ್ಯ ಕಲ್ಪಿಸಿಕೊಡುವತ್ತ ದೃಷ್ಟಿ ಹರಿಸಿದ್ದು, ಇದಕ್ಕೆ ಬೇಕಾದ ಹಣವನ್ನು ಸಿರಿವಂತರ ಕಿಸೆಯಿಂದ ಪಡೆದಿದ್ದಾರೆ. ಮಹಿಳೆಯರ ಕಲ್ಯಾಣಕ್ಕೆ ಹೆಚ್ಚು ಒತ್ತು ಕೊಟ್ಟಿರುವ ವಿತ್ತ ಸಚಿವರು, ರಾಮರಾಜ್ಯ ಮಾಡುವ ಕನಸು ಬಿತ್ತಿದ್ದಾರೆ…
70,000 ಕೋಟಿ. ಸಾರ್ವಜನಿಕ ಬ್ಯಾಂಕುಗಳಿಗೆ ಮರು ಬಂಡವಾಳೀಕರಣ
100 ಲಕ್ಷ ಕೋಟಿ. ಮುಂದಿನ 5 ವರ್ಷಗಳಲ್ಲಿ ಮಾಡಲಿರುವ ವೆಚ್ಚ
04 ಲಕ್ಷ ಕೋಟಿ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‌ಬಿಐನಿಂದ ಎನ್‌ಪಿಎ ವಸೂಲಿ
6.6 ಲಕ್ಷ ಕೋಟಿ. 2020ರ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಸಂಗ್ರಹ ನಿರೀಕ್ಷೆ
3% 2 ಕೋಟಿ ಯಿಂದ 5 ಕೋಟಿ ರೂ.ವರೆಗೆಗಳಿಸುವವರಿಗೆ ಹಾಕುವ ಸರ್ಚಾಜ್
7% 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಸರ್ಚಾರ್ಜ್
1.5 ಲಕ್ಷ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಸಾಲದ ಮೇಲೆ ತೆರಿಗೆ ಕಡಿತ
ಶೂನ್ಯ ಬಂಡವಾಳಕ್ಕೆ ಕರ್ನಾಟಕವೇ ಮಾದರಿ
2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣ ಮಾಡುವ ಕನಸು ಹೊತ್ತು, ಕರ್ನಾಟಕ ಮಾದರಿಯ ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ಕೊಡಲು ನಿರ್ಮಲಾ ಮುಂದಾಗಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಈ ಕೃಷಿ ವಿಧಾನ ಯಶಸ್ವಿಯಾಗಿದ್ದು, ಇದನ್ನು ದೇಶದೆಲ್ಲೆಡೆ ಪಸರಿಸುವ ಗುರಿ ಕೇಂದ್ರ ಸರ್ಕಾರದ್ದು. ಇದರ ಜತೆಗೆ 10,000 ಕೃಷಿಕರ ಉತ್ಪಾದನಾ ಸಂಘಗಳನ್ನು ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ಮೀನುಗಾರರಿಗೂ ಯೋಜನೆಯುಂಟು, ಹಾಲು ಉತ್ಪಾದಕರಿಗೂ ಬಜೆಟ್‌ನಲ್ಲಿ ಪ್ರೋತ್ಸಾಹವುಂಟು.
ಹಳ್ಳಿ ಕಸದ ಮೇಲೆ ಕಣ್ಣು
ಇನ್ನೂ ಮೂರು ವರ್ಷಗಳಲ್ಲಿ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ, ಅಡುಗೆ ಅನಿಲ,
ವಿದ್ಯುತ್ ಸೌಲಭ್ಯ, 2024ರೊಳಗೆ ಗ್ರಾಮೀಣ ಭಾಗಗಳ ಪ್ರತಿ ಮನೆಗೂ ನೀರು, ಶೌಚಾಲಯ ನಿರ್ಮಾಣದಂಥ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದಷ್ಟೇ ಅಲ್ಲ, ಸ್ವಚ್ಛ ಭಾರತ ಯೋಜನೆಯಡಿಯಲ್ಲಿ 9 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಿಸಲಾಗಿದ್ದು, ಇದೇ ಯೋಜನೆಯನ್ನು ಮುಂದೆ ಹಳ್ಳಿಗಳಲ್ಲಿನ ಘನ ತ್ಯಾಜ್ಯ ನಿರ್ವಹಣೆಗಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಖುಷಿ
ಪ್ರಧಾನ ಮಂತ್ರಿ ಕರಮ್ ಯೋಗಿ ಮಾನ್‌ಧನ್ ಯೋಜನೆಯಡಿಯಲ್ಲಿ 1.5 ಕೋಟಿ ರೂ.ಗಳವರೆಗೆ ವಹಿವಾಟು ನಡೆಸುವ ವರ್ತಕರು ಮತ್ತು ಶಾಪ್ ಕೀಪರ್‌ಗಳಿಗೆ ಪಿಂಚಣಿ ಸೌಲಭ್ಯವಿಸ್ತರಿಸಲಾಗಿದೆ. ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾವತಿ ಸೌಲಭ್ಯಕ್ಕಾಗಿ ಪಾವತಿ ವೇದಿಕೆಯನ್ನು ಸೃಜಿಸಲಾಗಿದೆ. ಈ ಮೂಲಕ
ಪಾವತಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಸಂಶೋಧನಾ ಯುಗ
ಸಂಶೋಧನೆ ಮಾಡುತ್ತೀರಾ, ಇದೋ ಇಲ್ಲಿದೆ ಅವಕಾಶ ಎಂದಿದ್ದಾರೆ ನಿರ್ಮಲಾ. ದೇಶದಲ್ಲಿ ರಿಸರ್ಚ್ ಮಾಡುವ ಸಲುವಾಗಿಯೇ ಪ್ರತ್ಯೇಕ ಸಂಸ್ಥೆ ನಿರ್ಮಾಣಕ್ಕೆ ಅವರು
ಮುಂದಾಗಿದ್ದಾರೆ. ಇದಕ್ಕಿಂತ ಹೆಚ್ಚಾಗಿ, 400 ಕೋಟಿ ರೂ.ಗಳ ವೆಚ್ಚದಲ್ಲಿ ವಿಶ್ವ ದರ್ಜೆಯ ಶೈಕ್ಷಣಿಕ ಸಂಸ್ಥೆ ಆರಂಭಿಸಲು ಅನುವು ಮಾಡಿಕೊಟ್ಟಿದ್ದಾರೆ. ಜತೆಗೆ, ಇಲ್ಲೇ ಓದಿ, ಇಲ್ಲೇ
ಕೆಲಸ ಮಾಡಿ ಧ್ಯೇಯವೂ ಈ ನಿರ್ಧಾರದ ಹಿಂದಿದೆ. ಹಾಗೆಯೇ, ಕೃತಕ ಬುದ್ಧಿ ಮತ್ತೆ, ವಚ್ಯುಯಲ್‌ರಿಯಾಲಿಟಿ,3ಡಿ ಪ್ರಿಂಟಿಂಗ್ ಸೇರಿದಂತೆ ವಿವಿಧ ತಂತ್ರಜ್ಞಾನವನ್ನು ಕಲಿಸಲು
ನಿರ್ಧರಿಸಲಾಗಿದೆ.
ಇನ್ನು ಸೂಪರ್ ಸಿರಿವಂತರಿಗೆ ಬರೆ
ಗ್ರಾಮೀಣ ಭಾಗಕ್ಕೆ, ವಸತಿ ಯೋಜನೆಗಳಿಗೆ, ಕೃಷಿಗೆ ಅನುದಾನ ನೀಡಿರುವ ನಿರ್ಮಲಾ ಸೀತಾರಾಮನ್, ಸೂಪರ್ ಸಿರಿವಂತರ ಮೇಲೆ ತೆರಿಗೆಯ ಬರೆ ಎಳೆದಿದ್ದಾರೆ. ಎಲ್ಲಾದರೂ, ವರ್ಷದಲ್ಲಿ 1 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಬ್ಯಾಂಕಿಂದ ನಗದು ರೂಪದಲ್ಲಿ ತೆಗೆದರೆ, ಅಂಥವರಿಗೆ ಶೇ.2 ರಷ್ಟು ಟಿಡಿಎಸ್ ವಿಧಿಸಲು ನಿರ್ಧರಿಸಲಾಗಿದೆ.
2ರಿಂದ 5 ಕೋಟಿ ರೂ. ಆದಾಯ ಇರುವಂಥವರಿಗೆ ಶೇ.39 ತೆರಿಗೆ, 5 ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯವಿರುವಂಥವರಿಗೆ ಶೇ.42.47 ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ.
ಮನೆ ಖರೀದಿಸಿದರೆ ತೆರಿಗೆ ಕಡಿತ ಸೌಲಭ್ಯ
2.5 ಲಕ್ಷ ದಿಂದ 3 ಲಕ್ಷಕ್ಕೆ ಆದಾಯ ತೆರಿಗೆ ಮಿತಿ ಹೆಚ್ಚಿಸುತ್ತಾರೆ ಎಂದು ಕಾದಿದ್ದೇ ಬಂತು. ಆದರೆ, ಹಾಗಾಗಲಿಲ್ಲ. ಇದಕ್ಕೆ ಬದಲಾಗಿ, ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ ಹಾಗೆ, 5 ಲಕ್ಷ ರೂ.ಗಳವರೆಗಿನ ಆದಾಯ ತೆರಿಗೆದಾರರಿಗೆ ತೆರಿಗೆ ಮಾಫಿ
ಮುಂದುವರಿಸಲಾಗಿದೆ. ಆದರೆ, ಮನೆ ಕಟ್ಟಲು 45 ಲಕ್ಷ ರೂ.ಗಳವರೆಗೆ ಸಾಲ ಪಡೆಯುವವರು ಕಟ್ಟುವ ಬಡ್ಡಿಯ ಮೇಲೆ 1.5 ಲಕ್ಷ ರೂ.ನಷ್ಟು ಬಡ್ಡಿ ವಿನಾಯಿತಿ
ನೀಡಲು ನಿರ್ಧರಿಸಲಾಗಿದೆ. ಜತೆಗೆ ಪ್ಯಾನ್ ಇಲ್ಲದಿದ್ದರೂ ಚಿಂತೆ ಇಲ್ಲ, ಆಧಾರ್ ಕೊಟ್ಟು ರಿಟರ್ನ್ಸ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
ನಾರಿ ಟು ನಾರಾಯಣಿ
ನಾರಿಯೇ ನಾರಾಯಣಿ ಎಂದು ನಾರಿ ಶಕ್ತಿಯ ಮಹತ್ವವನ್ನು ಸಾರಿ ಹೇಳುವುದರ
ಜತೆಗೆ, ಮಹಿಳಾ ಸಬಲೀಕರಣದತ್ತಲೂ ಮಹತ್ತರ ಕ್ರಮ ಕೈಗೊಂಡಿದ್ದಾರೆ ನಿರ್ಮಲಾ.
ಪ್ರತಿಯೊಂದು ಸ್ವಸಹಾಯಗುಂಪಿನಲ್ಲಿ ಓರ್ವ ಮಹಿಳೆಗೆ ಮುದ್ರಾ ಯೋಜನೆ ಅಡಿ 1
ಲಕ್ಷದವರೆಗೂ ಸಾಲ ಸೌಲಭ್ಯ, ಜತೆಗೆ, ಸರ್ಕಾರದಿಂದ ಗುರುತಿಸಲಾದ ಸ್ವಸಹಾಯ
ಗುಂಪಿನ ಮಹಿಳಾ ಸದಸ್ಯಗೆ 5,000 ರೂಪಾಯಿಯವರೆಗೆ ಓವರ್‌ಡ್ರಾಫ್ಟ್ಗೆ
ಅನುಮತಿ ನೀಡಲಾಗುತ್ತದೆ.
ಎಲೆಕ್ಟ್ರಿಕ್ ಕಾರ್‌ಗೆ ಪ್ರೋತ್ಸಾಹ
ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಪ್ರಮಾಣ ಏರಿಕೆ ಮಾಡಿರುವ ಸರ್ಕಾರ, ವಿದ್ಯುತ್ ಚಾಲಿತ ವಾಹನಗಳ ಮೇಲಿನ ತೆರಿಗೆ ಪ್ರಮಾಣ ತಗ್ಗಿಸಲು ಮುಂದಾಗಿದೆ.
ಈಗಾಗಲೇ ಜಿಎಸ್‌ಟಿ ಮಂಡಳಿ ತೆರಿಗೆ ಪ್ರಮಾಣವನ್ನು ಶೇ.12 ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ. ವಿದ್ಯುತ್ ವಾಹನಗಳನ್ನು ಖರೀದಿ ಮಾಡಿದರೆ, 1.5 ಲಕ್ಷ ರೂ.ಗಳಷ್ಟು ತೆರಿಗೆ ಪ್ರಮಾಣ ಕಡಿಮೆಯಾಗಲಿದೆ. ಸುಧಾರಿತ ಬ್ಯಾಟರಿ ಮತ್ತು ರಿಜಿಸ್ಟರ್ಡ್ ವಾಹನಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
ಚಿನ್ನ ಇನ್ನು ಸಲೀಸಲ್ಲ
ವಿದೇಶಗಳಿಂದ ಚಿನ್ನ ಆಮದು ಮಾಡಿ ಕೊಳ್ಳುವವರಿಗೆ ಕೊಂಚ ನಿರಾಸೆ ಎದುರಾಗಿದೆ. ಕಸ್ಟಮ್ಸ್ ಸುಂಕ ಪ್ರಮಾಣವನ್ನು ಹಾಲಿ ಶೇ.10ರಿಂದ ಶೇ.12.5ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಬೆಲೆ ಬಾಳುವ ಲೋಹ, ಚಿನ್ನದ ಆಭರಣಗಳು ದುಬಾರಿಯಾಗಲಿವೆ. 2018-19ನೇ ಸಾಲಿನಲ್ಲಿ ಚಿನ್ನದ ಆಮದು ಪ್ರಮಾಣ ಶೇ.3ರಷ್ಟು ಕಡಿಮೆಯಾಗಿತ್ತು. 2017-18ನೇ ಸಾಲಿನಲ್ಲಿ 33.7 ಶತ ಕೋಟಿ
ಅಮೆರಿಕನ್ ಡಾಲರ್ ಮೌಲ್ಯದಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು.
ಪೆಟ್ರೋಲ್ 2.50, ಡೀಸೆಲ್ 2.30 ಏರಿಕೆ
ಇಂಧನದ ಮೇಲಿನ ತೆರಿಗೆಯನ್ನು ಬಜೆಟ್‌ನಲ್ಲಿ ಹೆಚ್ಚಳ ಮಾಡಿದ ಕಾರಣ, ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ. ಬಜೆಟ್ ಘೋಷಣೆಯ ಪರಿಣಾಮ,
ದೇಶ ದಲ್ಲಿ ಪೆಟ್ರೋಲ್ ದರ ಲೀಟರ್‌ಗೆ ಸುಮಾರು 2.50 ರೂ. ಮತ್ತು ಡೀಸೆಲ್ ದರ ಲೀ.ಗೆ 2.30 ರೂ. ಹೆಚ್ಚಳವಾಗಲಿದೆ. ಇಂಧನಗಳ ಮೇಲೆ ಲೀಟರ್‌ಗೆ 2 ರೂ.ನಂತೆ ಎಕ್ಸೆ„ಸ್ ಶುಲ್ಕ, ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹೆಚ್ಚಳ ಮಾಡುವ ಮೂಲಕ ಸುಮಾರು 28 ಸಾವಿರ ಕೋಟಿ ರೂ. ಸಂಗ್ರಹಿಸುವು ದಾಗಿ ಸಚಿವೆ ನಿರ್ಮಲಾ ಘೋಷಿಸಿರುವ ಕಾರಣ, ಪೆಟ್ರೋಲ್ -ಡೀಸೆಲ್ ದರದಲ್ಲಿ ಹೆಚ್ಚಳವಾಗುವುದು ಖಾತ್ರಿ ಯಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್ ದರ ಲೀ.ಗೆ 72.83 ರೂ. ಹಾಗೂ ಡೀಸೆಲ್ ದರ ಲೀ.ಗೆ 66.45 ರೂ. ಆಗಿತ್ತು.
ಗಾಂಧಿ ಪೀಡಿಯಾ
ಇದ್ಯಾವುದು ವಿಕಿ ಪೀಡಿಯಾ ಅಂದು ಕೊಂಡ್ರಾ? ಹೌದು, ಇದು ಗಾಂಧಿ ಬಗ್ಗೆ ರಿಯಲು ಕೇಂದ್ರ ಸರ್ಕಾರ ವಸ್ತು ಸಂಗ್ರಹಾಲಯವೊಂದನ್ನು ರಚಿಸಲು ಹೊರಟಿದೆ. ಇದಕ್ಕೆ ಗಾಂಧಿಪೀಡಿಯಾ ಎಂಬ ಹೆಸರನ್ನೂ ಇಡಲಾಗಿದೆ. ಹಾಗೆಯೇ, 2019ರ ಅ.2 ರಂದು ಬಯಲು ಶೌಚ ಮುಕ್ತ ದಿನವೆಂದು ಆಚರಿಸಲೂ ನಿರ್ಧರಿಸಲಾಗಿದೆ.
ಬ್ರಿಫ್ಕೇಸ್ ಹೋಗಿ ಬಹಿ-ಖಾತಾ ಬಂತಪ್ಪ!
ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡನೆ ವೇಳೆ ಓಬಿರಾಯನ ಕಾಲದ ಸಂಪ್ರದಾಯಕ್ಕೆ ಸೆಡ್ಡು ಹೊಡೆದಿದ್ದಾರೆ. ಹಿಂದಿನ ವಿತ್ತ ಸಚಿವರಂತೆ ಬಜೆಟ್ ದಾಖಲೆಗಳನ್ನು ಬ್ರಿಫ್ ಕೇಸ್‌ನಲ್ಲಿ ತರುವ ಬದಲು ಭಾರತದ ಸಾಂಪ್ರದಾಯಿಕ ಲೇವಾದೇವಿಯ ಲೆಕ್ಕ ಪುಸ್ತಕವಾದ “ಬಹಿ-ಖಾತಾ’ದಲ್ಲಿ ತಂದಿದ್ದು ಎಲ್ಲರನ್ನು ಅಚ್ಚರಿಗೆ ನೂಕಿತು. ಬ್ರಿಟಿ ಷರ ದಾಸ್ಯದಿಂದ ಬಿಡುಗಡೆಗೊಂಡ ದ್ಯೋತಕ ವಾಗಿ ನಿರ್ಮಲಾ ಅವರು ಕೆಂಪು ಬಣ್ಣದ ವಸ್ತ್ರದಲ್ಲಿ ಬಜೆಟ್ ಕಡತ ಸುತ್ತಿಟ್ಟು ತಂದಿದ್ದರು. ಭಾರತೀಯ ವ್ಯಾಪಾರಿಗಳ ಪಾಲಿಗೆ ಈ ಕೆಂಪು ವಸ್ತ್ರವು ಸಂಪತ್ತಿನ ದೇವತೆ ಹಾಗೂ ಸಮೃದ್ಧಿಯ ಸಂಕೇತವಾಗಿದೆ.
$50,00,00,00,00,000
ಇದೇನೆಂದು ಯೋಚಿಸುತ್ತಿದ್ದೀರಾ? ಮುಂದಿನ ಕೆಲವೇ ಕೆಲವು ವರ್ಷಗಳಲ್ಲಿ ನಮ್ಮ ದೇಶದ ಆರ್ಥಿಕತೆಯು ಇಷ್ಟಾಗುತ್ತದೆ. ಆಗ 5 ಡಾಲರ್‌ನ ಮುಂದೆ 12 ಸೊನ್ನೆಗಳು ಬಂದಿರುತ್ತವೆ. ಇದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಗುರಿಯೂ ಹೌದು. ದೇಶದ ಆರ್ಥಿಕತೆಯನ್ನು 2025ರೊಳಗೆ 5 ಲಕ್ಷ ಕೋಟಿ ಡಾಲರ್
ಗೇರಿಸುವ ಉದ್ದೇಶವನ್ನು ಹೊಂದಲಾಗಿದೆ. 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೇರಿದಾಗ ಆರ್ಥಿಕತೆ 1.85 ಲಕ್ಷಕೋಟಿ ಡಾಲರ್ ಆಗಿತ್ತು. 5 ವರ್ಷಗಳಲ್ಲಿ ಇದು 2.7 ಲಕ್ಷಕೋಟಿ ಡಾಲರ್‌ಗೆ ತಲುಪಿದೆ. ಹೀಗಾಗಿ, ಮುಂದಿನ 5 ವರ್ಷಗಳಲ್ಲಿ ಆರ್ಥಿಕತೆಯನ್ನು 5 ಲಕ್ಷಕೋಟಿ ಡಾಲರ್‌ಗೆರಿಸುವ ಸಾಮರ್ಥ್ಯ ಖಂಡಿತಾ ನಮಗಿದೆ
ಎನ್ನುವುದು ಸಚಿವೆ ನಿರ್ಮಲಾರ ಅಚಲ ವಿಶ್ವಾಸ. ಅಂದ ಹಾಗೆ, 5 ಲಕ್ಷ ಕೋಟಿ ಡಾಲರ್ ಎಂದರೆ, 34,23,50,00,00,00,000 ರೂಪಾಯಿಗಳು (342ಲಕ್ಷ ಕೋಟಿ ರೂ.).
ಅಗ್ರ ಪಾಲು? ( ಕೋಟಿ ರೂ.ಗಳಲ್ಲಿ)
ಪಿಂಚಣಿ 1,74,300
ರಕ್ಷಣೆ 3,05,296
ಪ್ರಮುಖ ಸಬ್ಸಿಡಿ 3,01,694
ಕೃಷಿ ಮತ್ತಿ ತರ ಸಂಬಂಧಿತ ಚಟು ವ ಟಿಕೆ 1,51,518
ಶಿಕ್ಷಣ 94,854
ಗ್ರಾಮೀಣಾಭಿವೃದ್ಧಿ 1,40,762
ಟಾರ್ಗೆಟ್ 5
2022ರ ವೇಳೆಗೆ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ, ಅಡುಗೆ ಅನಿಲ ಸಂಪರ್ಕ, ವಿದ್ಯುತ್ ಸೌಲಭ್ಯ.
2022 ಮೂರು ವರ್ಷಗಳಲ್ಲಿ ಪ್ರಧಾನಮಂತ್ರಿ ವಸತಿ
ಯೋಜನೆಯಡಿಯಲ್ಲಿ 1.95 ಕೋಟಿ ಮನೆಗಳ ನಿರ್ಮಾಣ.
2024 ಜಲ ಜೀವನ್ ಯೋಜನೆ ಯಡಿಯಲ್ಲಿ ಪ್ರತಿಯೊಬ್ಬರ
ಮನೆಗೂ ನೀರು ಪೂರೈಕೆ.
2024 ಮುಂದಿನ 5 ವರ್ಷದಲ್ಲಿ 25 ಸಾವಿರ ಕಿಲೋ ಮೀಟರ್
ರಸ್ತೆ ನಿರ್ಮಾಣ. 1.25 ಲಕ್ಷ ಕಿ.ಮೀ ರಸ್ತೆ ಮೇಲ್ದರ್ಜೆಗೆ.
5 ಲಕ್ಷ ಕೋಟಿ ಡಾಲರ್. ಸದ್ಯ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿರುವ ದೇಶವನ್ನು ಮುಂದಿನ ಐದು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿಸುವ ಗುರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.