2020-21ರ ಕೇಂದ್ರ ಬಜೆಟ್‌ಗೆ ಜನರ ಸಲಹೆ ಕೋರಿದ ಪ್ರಧಾನಿ
ಬಜೆಟ್ ಎನ್ನುವುದು ದೇಶದ 130 ಕೋಟಿ ಜನರ ಆಶೋತ್ತರಗಳ ಪ್ರತೀಕ ಎಂದ ಮೋದಿ
Team Udayavani, Jan 8, 2020, 9:29 PM IST
ನವದೆಹಲಿ: 2020-21ರ ಕೇಂದ್ರ ಬಜೆಟ್‌ಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. “ಬಜೆಟ್ ಎನ್ನುವುದು ದೇಶದ 130 ಕೋಟಿ ಜನರ ಆಶೋತ್ತರಗಳ ಪ್ರತೀಕ. ಈ ಬಾರಿಯ ಬಜೆಟ್‌ಗೆ ಸಾರ್ವಜನಿಕರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.
ಸಲಹೆ ಸಲ್ಲಿಸುವುದು ಹೇಗೆ?: ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ನೇರ ಸಂಪರ್ಕಕ್ಕಾಗಿ ಆರಂಭಿಸಲಾಗಿರುವ “mygovindia’ನ ಅಧಿಕೃತ ಟ್ವಿಟರ್ ಖಾತೆಗೆ ಸಾರ್ವಜನಿಕರು ಟ್ವೀಟರ್‌ನಲ್ಲಿ @mygovindia ಖಾತೆಗೆ ನೇರವಾಗಿ ತಮ್ಮ ಸಲಹೆ ಸಲ್ಲಿಸಬಹುದು. ಜೊತೆಗೆ, ಸಲಹೆಯು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು. ಇದಕ್ಕಾಗಿ, #IncomeTax #Finance #Farmers #Agriculture #Health #Education #Environment #WaterConservation #GST #Employment #Entrepreneurship #Railways #Infrastructure #Others ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಪ್ರಕಟಿಸಲಾಗಿದೆ. ಸಲಹೆಗೆ ಸೂಕ್ತವಾದ ಹ್ಯಾಶ್‌ಟ್ಯಾಗ್ ಹಾಕಿ ಆನಂತರ ಸಲಹೆಗಳನ್ನು ಉಲ್ಲೇಖೀಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.