ಮೋದಿ 2.0 ಖಾತೆ ಹಂಚಿಕೆ; ಶಾ ಗೃಹ ಸಚಿವ, ನಿರ್ಮಲಾಗೆ ಹಣಕಾಸು
Team Udayavani, May 31, 2019, 1:24 PM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ 2 ನೇ ಬಾರಿಯ ನೂತನ ಸಂಪುಟ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಡಲಾಗಿದ್ದು, ನಿರೀಕ್ಷೆಯಂತೆ ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ನೀಡಲಾಗಿದೆ. ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ. ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆ ಹಂಚಿಕೆ ಮಾಡಲಾಗಿದೆ.
ರಾಜ್ಯದ ಮೂವರು ಸಚಿವರಾದ ಡಿ.ವಿ.ಸದಾನಂದ ಗೌಡ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿದೆ.
ಸುರೇಶ್ ಅಂಗಡಿ ಅವರಿಗೆ ರೈಲ್ವೆ ರಾಜ್ಯ ಖಾತೆ, ಪ್ರಹ್ಲಾದ್ ಜೋಷಿ ಅವರಿಗೆ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಖಾತೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ ಮತ್ತು ಎಲ್ಲಾ ಪ್ರಮುಖ ನೀತಿ ಖಾತೆಯನ್ನು ನಿರ್ವಹಿಸುತ್ತಿದ್ದಾರೆ.
ಸಚಿವರು ಮತ್ತು ಪ್ರಮುಖ ಖಾತೆಗಳು
ಡಾ. ಸುಬ್ರಹ್ಮಣ್ಯಂ ಜಯಶಂಕರ್ – ವಿದೇಶಾಂಗ ಸಚಿವ
ಪ್ರಕಾಶ್ ಜಾವ್ಡೇಕರ್ – ಪರಿಸರ ಮತ್ತು ಅರಣ್ಯ
ಪಿಯೂಷ್ ಗೋಯಲ್ – ರೈಲ್ವೆ ಮತ್ತು ವಾಣಿಜ್ಯ
ನಿತಿನ್ ಜೈರಾಮ್ ಗಡ್ಕರಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ.
ರಾಮ್ ವಿಲಾಸ್ ಪಾಸ್ವಾನ್- ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
ನರೇಂದ್ರ ಸಿಂಗ್ ತೋಮರ್- ಕೃಷಿ ಮತ್ತು ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ , ಮತ್ತು ಪಂಚಾಯತ್ ರಾಜ್
ರವಿಶಂಕರ್ ಪ್ರಸಾದ್ -ಕಾನೂನು ಮತ್ತು ನ್ಯಾಯ, ಕಮ್ಯುನಿಕೇಷನ್ಸ್ ,ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
ಹರ್‌ಸಿಮ್ರತ್ ಕೌರ್ ಬಾದಲ್ – ಆಹಾರ ಸಂಸ್ಕರಣೆ
ರಮೇಶ್ ಪೋಖ್ರಿಯಾಲ್ ನಿಶಾಂಕ್-ಮಾನವ ಸಂಪನ್ಮೂಲ ಅಭಿವೃದ್ಧಿ
ಅರ್ಜುನ್ ಮುಂಡಾ -ಬುಡಕಟ್ಟು ಖಾತೆ
ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜವಳಿ ಖಾತೆ
ಡಾ ಹರ್ಷವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ , ವಿಜ್ಞಾನ ಮತ್ತು ತಂತ್ರಜ್ಞಾನ
ಮುಖ್ತಾರ್ ಅಬ್ಬಾಸ್ ನಖ್ವಿ -ಅಲ್ಪಸಂಖ್ಯಾತ ವ್ಯವಹಾರಗಳು
ಮಹೇಂದ್ರ ನಾಥ್ ಪಾಂಡೆ- ಕಾಶಲ್ಯಾಭಿವೃದ್ಧಿ , ಹೊಸ ಉದ್ಯಮ ಖಾತೆ
ಅರವಿಂದ್ ಸಾವಂತ್ – ಭಾರಿ ಕೈಗಾರಿಗೆ ಮತ್ತು ಸಾರ್ವಜನಿಕ ಉದ್ದಿಮೆ
ಗಿರಿರಾಜ್ ಸಿಂಗ್- ಪಶುಸಂಗೋಪನೆ, ಮೀನುಗಾರಿಕೆ
ಗಜೇಂದ್ರ ಸಿಂಗ್ ಶೇಖಾವತ್- ಜಲಶಕ್ತಿ
ಸಂತೋಷ್ ಕುಮಾರ್ ಗಂಗ್ವಾರ್ – ಕಾರ್ಮಿಕ ಮತ್ತು ಉದ್ಯೋಗ
ಇಂದ್ರಜಿತ್ ಸಿಂಗ್ -ಕಾರ್ಯಕ್ರಮ ಅನುಷ್ಠಾನ ಮತ್ತು ಅಂಕಿ ಅಂಶ
ಶ್ರೀಪಾದ್ ನಾಯಕ್ -ಆಯುರ್ವೇದ, ಯೋಗ ಯುನಾನಿ
ಡಾ.ಜಿತೇಂದ್ರ ಸಿಂಗ್- ಈಶಾನ್ಯ ರಾಜ್ಯ ಅಭಿವೃದ್ಧಿ ಖಾತೆ, ಪ್ರಧಾನಿ ಕಾರ್ಯಾಲಯ
ಕಿರಣ್ ರಿಜಿಜು -ಯುವಜನ ಮತ್ತು ಕ್ರೀಡೆ
ಪ್ರಹ್ಲಾದ್ ಸಿಂಗ್ ಪಟೇಲ್ -ಸಂಸ್ಕೃತಿ ಮತ್ತು ಪ್ರವಾಸೋಧ್ಯಮ
ರಾಜ್‌ಕುಮಾರ್ ಸಿಂಗ್-(ರಾಜ್ಯ ಖಾತೆ)ಇಂಧನ, ಮರುಬಳಕೆ ಇಂಧನ, ಕೌಶಲ್ಯಾಭಿವೃದ್ಧಿ
ಹರ್‌ದೀಪ್ ಸಿಂಗ್ ಪುರಿ -ವಸತಿ ಮತ್ತು ನಗರಾಭಿವೃದ್ಧಿ
ಮಾನ್ಸುಖ್ ಎಲ್ ಮಾಂಡವ್ಯ- ಹಡಗು, ರಾಜ್ಯ ಖಾತೆರಾಸಾಯನಿಕ ಮತ್ತು ರಸಗೊಬ್ಬರ
ರಾಜ್ಯ ಖಾತೆ ಸಚಿವರು
ಫಗ್ಗನ್ ಸಿಂಗ್ ಕುಲಸ್ತೆ-ಉಕ್ಕು ಖಾತೆ
ಅಶ್ವಿನ್ ಕುಮಾರ್ ಚೌಬೇ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ
ಅರ್ಜುನ್ ರಾಮ್ ಮೇಘಾÌಲ್ -ಸಂಸದೀಯ ಖಾತೆ ರಾಜ್ಯ ಸಚಿವ, ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಸಂಪರ್ಕ
ಜನರಲ್ ವಿ.ಕೆ ಸಿಂಗ್- ರಸ್ತೆ ಮತ್ತು ಸಾರಿಗೆ ರಾಜ್ಯ ಖಾತೆ ಸಚಿವ
ಕಿಶನ್ ಪಾಲ್-ಸಾಮಾಜೀಕ ನ್ಯಾಯ ಮತ್ತು ಸಬಲೀಕರಣ
ದಾನ್ವೆ ರಾವ್ ಸಾಹೇಬ್ ದಾದಾ ರಾವ್-ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ
ಕಿಶನ್ ರೆಡ್ಡಿ-ಗೃಹ ಖಾತೆ ರಾಜ್ಯ ಸಚಿವ
ಪುರುಷೋತ್ತಮ್ ರೂಪಾಲಾ-ಕೃಷಿ ಮತ್ತು ರೈತ ಕಲ್ಯಾಣ ಖಾತೆ
ರಾಮ್‌ದಾಸ್ ಅಠವಳೆ-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
ಸಾಧ್ವಿ ನಿರಂಜನ್ ಜ್ಯೋತಿ -ಗ್ರಾಮೀಣಾಭಿವೃದ್ಧಿ ರಾಜ್ಯ ಖಾತೆ
ಬಬುಲ್ ಸುಪ್ರಿಯೋ -ಪರಿಸರ,ಅರಣ್ಯ ಮತ್ತು ಹವಮಾನ ಬದಲಾವಣೆ ರಾಜ್ಯ ಖಾತೆ
ಸಂಜೀವ್ ಕುಮಾರ್ ಬಲ್ಯಾನ್-ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ
ಧೋತ್ರೆ ಸಂಜಯ್ ಶಾಮರಾವ್ -ಮಾನವಸಂಪನ್ಮೂಲ ಅಭಿವೃದ್ದಿ ರಾಜ್ಯ ಖಾತೆ.ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ
ಅನುರಾಗ್ ಠಾಕೂರ್-ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರ
ನಿತ್ಯಾನಂದ ರಾಯ್-ಗೃಹ ಖಾತೆ ರಾಜ್ಯ ಸಚಿವ
ರತನ್ ಲಾಲ್ ಕಟಾರಿಯಾ- ಜಲಶಕ್ತಿ ರಾಜ್ಯ ಸಚಿವ,ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ವಿ ಮುರಳೀಧರನ್ -ವಿದೇಶಾಂಗ ಇಲಾಖೆ ಸಹಾಯಕ ಖಾತೆ,ಸಂಸದೀಯ ಖಾತೆ ರಾಜ್ಯ ಸಚಿವ
ರೇಣುಕಾ ಸಿಂಗ್ ಸರೂತಾ -ಬುಡಕಟ್ಟು ರಾಜ್ಯ ಖಾತೆ
ಸೋಮ್ ಪ್ರಕಾಶ್-ವಾಣಿಜ್ಯ ಮತ್ತು ಕೈಗಾರಿಕೆ
ರಾಮೇಶ್ವರ್ ಟೇಲಿ-ಆಹಾರ ಸಂಸ್ಕರಣ ಉದ್ದಿಮೆ
ಪ್ರತಾಪ್ ಚಂದ್ರ ಸಾರಂಗಿ -ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಪಶುಸಂಗೋಪನೆ , ಮೀನುಗಾರಿಕೆ
ಕೈಲಾಶ್ ಚೌಧರಿ- ಕೃಷಿ ಮತ್ತು ರೈತ ಕಲ್ಯಾಣ
ಸುಶ್ರೀ ದೇಬಶ್ರಿ ಚೌಧರಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.