ಆಧಾರ್ ಕಾರ್ಡ್ ಮ್ಯಾಜಿಕ್ :1,000 ಗ್ರಾಮಸ್ಥರ ಹುಟ್ಟಿದ ದಿನ ಜನವರಿ1
Team Udayavani, May 23, 2017, 5:31 PM IST
ಅಲಹಾಬಾದ್ : ಇಲ್ಲಿಂದ 50 ಕಿ.ಮೀ. ದೂರದಲ್ಲಿರುವ ಕಂಜಾಸಾ ಎಂಬ ಗ್ರಾಮದ 5,000 ನಿವಾಸಿಗಳು ಈಚೆಗೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದರು. ಈ ಪೈಕಿ 1,000 ಮಂದಿಯ ಆಧಾರ್ ಕಾರ್ಡ್‌ನಲ್ಲಿ ಅವರ ಹುಟ್ಟಿದ ದಿನವನ್ನು ಸಾರಾ ಸಗಟಾಗಿ ಜನವರಿ 1 ರಂದು ಕಾಣಿಸಲಾಗಿದೆ.
ಆಧಾರ್ ಕಾರ್ಡ್‌ನಲ್ಲಿನ ಈ ದೋಷದ ಬಗ್ಗೆ ದೂರುಗಳ ಮಹಾಪೂರವೇ ಹರಿದು ಬರುತ್ತಿದ್ದು ಕಂಗಾಲಾಗಿರುವ ಅಧಿಕಾರಿಗಳು ಇದೀಗ ತನಿಖೆಗೆ ಆದೇಶಿಸಿದ್ದಾರೆ; ಜತೆಗೆ ಆಧಾರ್ ಕಾರ್ಡ್‌ನಲ್ಲಿನ ಜನ್ಮ ದಿನಾಂಕ ದೋಷವನ್ನು ಸರಿಪಡಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.
ತಾಂತ್ರಿಕ ದೋಷದಿಂದಾಗಿ 1,000 ಜನರ ಹುಟ್ಟಿದ ದಿನಾಂಕ ಜನವರಿ 1 ಎಂದು ತಪ್ಪಾಗಿ ದಾಖಲಾಗಿರಬಹುದು; ಮೇಲಾಗಿ ಅನೇಕ ಗ್ರಾಮಸ್ಥರಿಗೆ ತಮ್ಮ ಹುಟ್ಟಿದ ದಿನಾಂಕವೇ ಗೊತ್ತಿಲ್ಲದಿರುವುದರಿಂದ ಅಂತಹವರ ಸಂದರ್ಭಗಳಲ್ಲಿ ಸಾರಾ ಸಗಟಾಗಿ ಜನವರಿ 1 ಎಂದು ದಾಖಲಾಗಿರಬಹುದು.ಹಾಗಿದ್ದರೂ ಸರಿಯಾಗಿ ಜನ್ಮ ದಿನ ದಾಖಲೆ ಕೊಟ್ಟವರ ಕಾರ್ಡ್‌ನಲ್ಲಿ ಕೂಡ ಜನವರಿ 1 ಎಂದು ದಾಖಲಾಗಿರುವುದು ಅಚ್ಚರಿಯ ವಿಷಯ ಎಂದು ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ನೀರಜ್ ದುಬೆ ಹೇಳಿದ್ದಾರೆ.
ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ; ಯಾವ ಹಂತದಲ್ಲಿ ತಪ್ಪಾಗಿದೆ ಎಂಬುದನ್ನು ಕಂಡುಕೊಂಡ ಬಳಿಕ ಅದಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.