ಬಿಜೆಪಿ ವಿರುದ್ಧ ನಾವೆಲ್ಲರೂ ಒಂದಾಗೋಣ : ಸೋನಿಯಾ ಮತ್ತು ಇತರ ನಾಯಕರಿಗೆ ಮಮತಾ ಪತ್ರ
Team Udayavani, Mar 31, 2021, 6:25 PM IST
ನವ ದೆಹಲಿ : ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯ ಕಾವು ಏರುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನ ಸೋನಿಯಾ ಗಾಂಧಿಯವರನ್ನು ಒಳಗೊಂಡು ಹತ್ತು ಪ್ರಮುಖ ವಿರೋಧ ಪಕ್ಷಗಳ ಮುಖಂಡರಿಗೆ ‘ನಾವೆಲ್ಲರೂ ಬಿಜೆಪಿ ವಿರುದ್ಧ ಒಂದಾಗಬೇಕು’ ಎಂದು ಪತ್ರ ಬರೆದಿದ್ದಾರೆ ಎಂಬ ವರದಿಯಾಗಿದೆ.
ಬಿಜೆಪಿಯ ನ್ಯೂನ್ಯತೆಗಳನ್ನು ಉಲ್ಲೇಖಿಸಿರುವ ಪತ್ರದಲ್ಲಿ ಮಮತಾ, “ಬಿಜೆಪಿಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ದಾಳಿಯ ವಿರುದ್ಧ ಏಕೀಕೃತ ಮತ್ತು ಪರಿಣಾಮಕಾರಿ ಹೋರಾಟ” ಮತ್ತು “ಭಾರತದ ಜನರಿಗೆ ವಿಶ್ವಾಸಾರ್ಹ ಪರ್ಯಾಯವನ್ನು ಪ್ರಸ್ತುತಪಡಿಸುವ” ಸಮಯ ಬಂದಿದೆ ಎಂದು ಬರೆದಿದ್ದಾರೆ.
ಓದಿ : ಬೇಂದ್ರೆಯವರ ಕಾವ್ಯ ಸ್ಪರ್ಶದ ಸೃಜನಾತ್ಮಕ ಪ್ರಿ ವೆಡ್ಡಿಂಗ್ ಶೂಟ್ಸ್ ಸಖತ್ ವೈರಲ್ ..!
“ಬಿಜೆಪಿ ಹೊರತಾಗಿರುವ ಪಕ್ಷಗಳು ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಚಲಾಯಿಸಲು ಅಸಾಧ್ಯವಾಗಿಸಲು ಬಿಜೆಪಿ ಬಯಸಿದೆ. ಇದು ರಾಜ್ಯ ಸರ್ಕಾರಗಳ ಅಧಿಕಾರವನ್ನು ದುರ್ಬಲಗೊಳಿಸಲು ಮತ್ತು ಅವುಗಳನ್ನು ಕೇವಲ ಪುರಸಭೆಗಳಿಗೆ ಇಳಿಸಲು ಬಯಸಿದೆ. ಸಂಕ್ಷಿಪ್ತವಾಗಿ, ಇದು ಒಂದು ಪಕ್ಷದ ಸರ್ವಾಧಿಕಾರವನ್ನು ಸ್ಥಾಪಿಸುವ ಧೋರಣೆ, “ಎಂದಿದ್ದಾರೆ.
ಇನ್ನು, ಕೇಂದ್ರವು “ಚುನಾಯಿತ ಸರ್ಕಾರಗಳಿಗೆ ಸಮಸ್ಯೆಗಳನ್ನು ಹೇಗೆ ಸೃಷ್ಟಿಸುತ್ತಿದೆ” ದೆಹಲಿಯಲ್ಲಿ ಕೇಂದ್ರ ಸರ್ಕಾರ ಏನು ಮಾಡಿದೆ. ಸರ್ಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಗೆ ಹಚ್ಚು ಅಧಿಕಾರವನ್ನು ನೀಡಿದೆ ಎಂದು ಪತ್ರದ ಮೂಲಕ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯಪಾಲರ ಕಚೇರಿಯ “ದುರುಪಯೋಗ”, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರ ಸಂಸ್ಥೆಗಳು, ರಾಜ್ಯಗಳ ಹಣವನ್ನು “ತಡೆಹಿಡಿಯುವುದು”, ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಮತ್ತು ಯೋಜನಾ ಆಯೋಗದಂತಹ ಸಂಸ್ಥೆಗಳನ್ನು ವಿಸರ್ಜಿಸುವುದು, ಬಿಜೆಪಿಯೇತರರನ್ನು ಕೆಳಗಿಳಿಸಲು ಹಣದ ಶಕ್ತಿಯನ್ನು ಬಳಸುವುದು, ಖಾಸಗೀಕರಣ ಇವೇ ಹೆಚ್ಚಾಗಿವೆ ಎಂದು ಅವರು ಪತ್ರದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಓದಿ : ಡಿ.ಕೆ. ಶಿವಕುಮಾರ್ ವಿರುದ್ಧ ನಾಯಕ ಸಮಿತಿ ಪ್ರತಿಭಟನೆ
ನಾವೆಲ್ಲರೂ ಒಂದಾಗಿ ಬಿಜೆಪಿ ವಿರುದ್ಧ ನಿಲ್ಲುವ ಸರಿಯಾದ ಸಮಯ ಬಂದಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ಆಕ್ರಮಣಶೀಲ ಧೋರಣೆಯನ್ನು ಮೆರೆಯುತ್ತಿರುವ ಬಿಜೆಪಿಯ ವಿರುದ್ಧ ನಾವೆಲ್ಲರೂ ಒಂದಾಗಬೇಕಾಗಿದೆ. ನಾನು ನಿಮ್ಮೊಂದಿಗೆ ಇದಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಿದ್ಧಳಿದ್ದೇನೆ. ಬಿಜೆಪಿ ವಿರುದ್ಧ ನಾವೆಲ್ಲರೂ ಸಮಾನ ಮನಸ್ಥಿತಿಯಿಂದ ಹೋರಾಟ ಮಾಡಲೇಬೇಕು ಎಂದು ಪತ್ರದಲ್ಲಿ ಮಮತಾ ಬರೆದಿದ್ದಾರೆ.
ಸೋನಿಯಾ ಗಾಂಧಿಯವರಲ್ಲದೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ಮುಖ್ಯಸ್ಥ ಸ್ಟಾಲಿನ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ವೈ ಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್, ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್, ಸಮಾಜವಾದಿ ಪಕ್ಷ ರಾಷ್ಟ್ರೀಯ ಜನ ದಳದ ತೇಜಸ್ವಿ ಯಾದವ್, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಸಿಪಿಐಎಂಎಲ್ ನ ದೀಪಂಕರ್ ಭಟ್ಟಾಚಾರ್ಯ ಅವರಿಗೆ ತಮ್ಮ ಪತ್ರವನ್ನು ಮಮತಾ ಕಳುಹಿಸಿದ್ದಾರೆ.
Mamata Banerjee writes to leaders incl Sonia Gandhi, Sharad Pawar, MK Stalin, Tejashwi Yadav, Uddhav Thackeray, Arvind Kejriwal, Naveen Patnaik stating, “I strongly believe that the time has come for a united & effective struggle against BJP’s attacks on democracy & Constitution” pic.twitter.com/OLp7tDm9pU
— ANI (@ANI) March 31, 2021
ಓದಿ : FIR ಎಲ್ಲಿದೆ..? ನೀವು ಕಾನೂನಿಗಿಂತ ಮೇಲಿದ್ದೀರಾ..? : ಪರಮ್ ಗೆ ಬಾಂಬೆ ಹೈ ಕೋರ್ಟ್ ಪ್ರಶ್ನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.