ಸುಳ್ಳು, ಪೂರ್ವಗ್ರಹ ಪೀಡಿತ ವಿಶ್ವಸಂಸ್ಥೆ ವರದಿ: ಭಾರತ ಕಿಡಿ
Team Udayavani, Jul 9, 2019, 5:34 AM IST
ಹೊಸದಿಲ್ಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಕಾಶ್ಮೀರ ಕುರಿತು ಸಲ್ಲಿಸಿದ ವರದಿಯು ಸಂಪೂರ್ಣ ಸುಳ್ಳು ಹಾಗೂ ಪ್ರಚೋದಿತ ದೃಷ್ಟಿಕೋನದ್ದಾಗಿದೆ ಎಂದು ಭಾರತ ಆಕ್ಷೇಪಿಸಿದೆ. ಕಳೆದ ವರ್ಷ ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆ ಸಲ್ಲಿಸಿದ ವರದಿಯಲ್ಲಿ, ಕಾಶ್ಮೀರದ ಸನ್ನಿವೇಶವನ್ನು ಸುಧಾರಿಸಲು ಭಾರತವಾಗಲೀ, ಪಾಕಿಸ್ಥಾನವಾಗಲೀ ಯತ್ನಿಸಿಲ್ಲ ಎಂದು ದೂರಿತ್ತು. ಅದೇ ವರದಿಯನ್ನು ಪರಿಷ್ಕರಿಸಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಈ ಬಾರಿಯೂ ಇದೇ ದೃಷ್ಟಿಕೋನದಲ್ಲಿ ಕಾಶ್ಮೀರ ಸಮಸ್ಯೆಯನ್ನು ವ್ಯಾಖ್ಯಾನಿಸಿದೆ.
ವರದಿಯಲ್ಲಿನ ದೃಷ್ಟಿಕೋನವು ಭಾರತದ ಸಾರ್ವಭೌಮತ್ವ ಹಾಗೂ ಪ್ರಾಂತೀಯ ಸಮಗ್ರತೆಗೆ ಧಕ್ಕೆ ತರುವಂತಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಭಾರತ ಆಕ್ಷೇಪಿಸಿದೆ. ಗಡಿಯಾಚೆಗಿನ ಭಯೋತ್ಪಾದನೆ ವಿಚಾರವನ್ನು ಗಣನೆಗೆ ತೆಗೆದುಕೊಳ್ಳದೆಯೇ ವರದಿ ಸಿದ್ಧಪಡಿಸಲಾಗಿದೆ. ವಿಶ್ವದ ಅತ್ಯಂತ ದೊಡ್ಡ, ವೈವಿಧ್ಯಮಯ ಪ್ರಜಾಪ್ರಭುತ್ವವಾಗಿರುವ ಭಾರತ ಮತ್ತು ಭಯೋತ್ಪಾದನೆಯನ್ನೇ ಪ್ರಚೋದಿಸುವ ಪಾಕಿಸ್ಥಾನದ ಮಧ್ಯದ ವ್ಯತ್ಯಾಸವನ್ನು ವರದಿ ಪರಿಗಣಿಸಿಯೇ ಇಲ್ಲ. ಈ ಕುರಿತು ನಮ್ಮ ರಾಯಭಾರ ಕಚೇರಿಯ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
2018 ಎಪ್ರಿಲ್ನಿಂದ 2019 ಎಪ್ರಿಲ್ ಅವಧಿಯಲ್ಲಿ ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಹಿಂದಿನ ಒಂದು ವರ್ಷಕ್ಕೆ ಹೋಲಿಸಿದರೆ ಹೆಚ್ಚಳ ಕಂಡಿದೆ. ಎರಡೂ ಪ್ರದೇಶಗಳಲ್ಲಿ ಸನ್ನಿವೇಶ ಸುಧಾರಣೆಗೆ ಭಾರತವಾಗಲೀ, ಪಾಕಿಸ್ಥಾನವಾಗಲೀ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಉಲ್ಲೇಖೀಸಿದೆ. ಅಲ್ಲದೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳು ಯಾವುದೇ ಹಿಂಸಾಚಾರ ನಡೆಸಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.
ನರಹತ್ಯೆ ಕಡಿಮೆ
ವಿಶ್ವದ ಶೇ. 60ರಷ್ಟು ಜನಸಂಖ್ಯೆ ಹೊಂದಿರುವ ಏಷ್ಯಾ ಖಂಡದಲ್ಲಿ ನರಹತ್ಯೆ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಅಮೆರಿಕ ಖಂಡದಲ್ಲಿ ನರಹತ್ಯೆ ಪ್ರಮಾಣ 2017ರ ವೇಳೆಗೆ ಅತ್ಯಂತ ಅಧಿಕ ಪ್ರಮಾಣದಲ್ಲಿದೆ. ವಿಶ್ವಸಂಸ್ಥೆಯ ಮಾದಕದ್ರವ್ಯ ಮತ್ತು ಅಪರಾಧ ವಿಭಾಗವು ಜಾಗತಿಕ ನರಹತ್ಯೆ ಅಧ್ಯಯನ ನಡೆಸಿದ್ದು, ವಿಶ್ವದಲ್ಲಿ 2017ರಲ್ಲಿ ಒಟ್ಟು 4.64 ಲಕ್ಷ ನರಹತ್ಯೆ ನಡೆದಿದ್ದು, 1 ಲಕ್ಷಕ್ಕೆ ಇದು 6.1 ಆಗಿದೆ. ಈ ಪೈಕಿ ಏಷ್ಯಾ ಖಂಡದಲ್ಲಿ ಅತ್ಯಂತ ಕಡಿಮೆ ವರದಿಯಾಗಿದ್ದು, 1 ಲಕ್ಷ ಜನರಿಗೆ ಕೇವಲ 2.3 ನರಹತ್ಯೆ ನಡೆದಿದೆ. ಅಮೆರಿಕ ಖಂಡದಲ್ಲಿ 1 ಲಕ್ಷಕ್ಕೆ 17.2 ನರಹತ್ಯೆ ನಡೆದಿದೆ ಎಂದು ವರದಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.