ಏನಿದು ಘಟನೆ; ಇತಿಹಾಸದ ಪುಟದಲ್ಲಿ ಚೌರಿ-ಚೌರಾ ಹುತಾತ್ಮರ ನಿರ್ಲಕ್ಷ್ಯ; ಪ್ರಧಾನಿ ಮೋದಿ
ಚೌರಿ ಚೌರಾ ಹುತಾತ್ಮರ ಸ್ಮರಣಾರ್ಥವಾಗಿ ಉತ್ತರಪ್ರದೇಶ ಸರ್ಕಾರ ಎಲ್ಲಾ 74 ಜಿಲ್ಲೆಗಳಲ್ಲಿ ವರ್ಷ ಪೂರ್ತಿ ಸಮಾರಂಭ
Team Udayavani, Feb 4, 2021, 12:45 PM IST
ಲಕ್ನೋ: ಭಾರತದ ಇತಿಹಾಸದ ಪುಟಗಳಲ್ಲಿ ಚೌರಿ-ಚೌರಾ ಘಟನೆಯಲ್ಲಿ ಹುತಾತ್ಮರಾದವರಿಗೆ ಸಲ್ಲಬೇಕಾದ ಗೌರವ ದೊರತಿಲ್ಲವಾಗಿತ್ತು. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ್ದ ಹುತಾತ್ಮರನ್ನು ಗೌರವಿಸುವ ನಿಟ್ಟಿನಲ್ಲಿ ಚೌರ-ಚೌರ ಶತಮಾನೋತ್ಸವ ಆಚರಿಸಿದ ಉತ್ತರಪ್ರದೇಶ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಇದನ್ನೂ ಓದಿ:ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆ ಯತ್ನ: ಪತಿ ಸ್ಥಳದಲ್ಲೇ ಸಾವು, ಪತ್ನಿ ಗಂಭೀರ
ಚೌರಿ ಚೌರಾ ಘಟನೆ ಕೇವಲ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಘಟನೆಯಿಂದ ದೊಡ್ಡ ಸಂದೇಶ ರವಾನೆಯಾಗಿದೆ. ಆದರೆ ಹಲವು ಕಾರಣಗಳಿಂದ ಇದನ್ನು ಸಣ್ಣ ಘಟನೆ ಎಂಬಂತೆ ಬಿಂಬಿಸಲಾಗಿತ್ತು. ನಾವು ಘಟನೆಯನ್ನು ಸಂದರ್ಭಕ್ಕೆ ತಕ್ಕಂತೆ ಅವಲೋಕಿಸಬೇಕಾಗಿದೆ. ಇದು ಕೇವಲ ಪೊಲೀಸ್ ಠಾಣೆಗೆ ಹಚ್ಚಿದ ಬೆಂಕಿಯಲ್ಲ, ಜನರ ಹೃದಯದಲ್ಲಿತ್ತು ಎಂದು ಪ್ರಧಾನಿ ಹೇಳಿದರು.
ದುರದೃಷ್ಟವಶಾತ್ ಐತಿಹಾಸಿಕ ಘಟನೆ ಬಗ್ಗೆ ಈವರೆಗೂ ಹೆಚ್ಚು ಚರ್ಚೆಯಾಗಿಲ್ಲ. ಚೌರಿ ಚೌರಾ ಹುತಾತ್ಮರಿಗೆ ಇತಿಹಾಸದ ಪುಟಗಳಲ್ಲಿ ಸಲ್ಲಬೇಕಾಗಿದ್ದ ಗೌರವ ಸಿಕ್ಕಿಲ್ಲ. ಹುತಾತ್ಮರ ರಕ್ತ ದೇಶದ ಮಣ್ಣಿನಲ್ಲಿದ್ದು, ಅದು ನಮ್ಮ ಸ್ಫೂರ್ತಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಮರಕ್ಕೆ ಢಿಕ್ಕಿ ಹೊಡೆದ ಕಾರು: ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ(ಫೆ.04, 2021) ಉತ್ತರಪ್ರದೇಶದ ಗೋರಖ್ ಪುರ್ ಜಿಲ್ಲೆಯಲ್ಲಿ ಚೌರಿ-ಚೌರಾ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.
ಚೌರಿ ಚೌರಾ ಹುತಾತ್ಮರ ಸ್ಮರಣಾರ್ಥವಾಗಿ ಉತ್ತರಪ್ರದೇಶ ಸರ್ಕಾರ ಎಲ್ಲಾ 74 ಜಿಲ್ಲೆಗಳಲ್ಲಿ ವರ್ಷ ಪೂರ್ತಿ ಸಮಾರಂಭ ನಡೆಸಲು ನಿರ್ಧರಿಸಿದೆ.
ಏನಿದು ಚೌರಿ-ಚೌರಾ ಘಟನೆ?
ಗೋರಖ್ ಪುರ್ ಜಿಲ್ಲೆಯ ಚೌರಿ-ಚೌರಾ ಪ್ರದೇಶದಲ್ಲಿ 1922ರ ಫೆಬ್ರುವರಿ 4ರಂದು ನಡೆದ ಭೀಕರ ಘಟನೆ ಇದಾಗಿದೆ. ಮಹಾತ್ಮಗಾಂಧಿ ನೀಡಿದ್ದ ಅಸಹಕಾರ ಚಳವಳಿ ಕರೆ ಹಿನ್ನೆಲೆಯಲ್ಲಿ ಚೌರಾ-ಚೌರಾದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಏರ್ಪಟ್ಟಾಗ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಮೂವರು ನಾಗರಿಕರು ಹಾಗೂ 22 ಪೊಲೀಸರು ಸಾವನ್ನಪ್ಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.