Black Magic: ಶಾಲೆಗೆ ಒಳ್ಳೆ ಹೆಸರು ಬರಲೆಂದು 2ನೇ ತರಗತಿ ಬಾಲಕನನ್ನೇ ಬಲಿ ಕೊಟ್ಟ ಶಿಕ್ಷಕರು
Team Udayavani, Sep 27, 2024, 5:59 PM IST
ಉತ್ತರಪ್ರದೇಶ: ಜಗತ್ತು ಎಷ್ಟೇ ಮುಂದುವರೆದರೂ ಮೂಢನಂಬಿಕೆ ಎಂಬ ಕೆಟ್ಟ ಸಂಪ್ರದಾಯ ಇನ್ನೂ ಜೀವಂತವಾಗಿರುವುದು ಬೇಸರದ ಸಂಗತಿ ಅದರಲ್ಲೂ ಮಕ್ಕಳ ಭವಿಷ್ಯ ರೂಪಿಸುವ ಶಾಲೆಯಲ್ಲೇ ಈ ರೀತಿಯ ಅನಾಚಾರ ನಡೆಯುತ್ತಿದೆ ಎಂಬುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿರುವ ಡಿಎಲ್ ಪಬ್ಲಿಕ್ ಸ್ಕೂಲ್‌ನ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸೇರಿ ತಾವು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆ ಉತ್ತಮ ಯಶಸ್ಸು ಮತ್ತು ಖ್ಯಾತಿಯನ್ನು ಗಳಿಸಲಿ ಎಂದು ಮಾಟಮಂತ್ರ ಮಾಡಿಸಿ ತಮ್ಮದೇ ಶಾಲೆಯಲ್ಲಿ ಓದುತ್ತಿರುವ ಎರಡನೇ ತರಗತಿಯ ಬಾಲಕನ್ನು ಬಲಿ ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಇದೇ ವಾರದ ಆರಂಭದಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ, ಘಟನೆಗೆ ಸಂಬಂಧಿಸಿ ಶಾಲೆಯ ನಿರ್ದೇಶಕರು ಮತ್ತು ಮೂವರು ಶಿಕ್ಷಕರು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಪ್ಪಿದ ಮತ್ತೊಂದು ನರಬಲಿ:
ಓರ್ವ ಬಾಲಕನ ಹತ್ಯೆ ಬೆನ್ನಲೇ ಇನ್ನೋರ್ವ ಬಾಲಕನ ನರಬಲಿಗೆ ಮುಂದಾಗಿದ್ದರು ಆದರೆ ಪೊಲೀಸರ ತಂಡ ಈ ಯತ್ನವನ್ನು ತಪ್ಪಿಸಿದೆ ಎಂದು ಹೇಳಿದೆ.
ಶಾಲೆಯ ನಿರ್ದೇಶಕ ದಿನೇಶ್ ಬಾಘೇಲ್, ಅವರ ತಂದೆ ಜಶೋಧನ್ ಸಿಂಗ್ ಮತ್ತು ಮೂವರು ಶಿಕ್ಷಕರಾದ ಲಕ್ಷ್ಮಣ್ ಸಿಂಗ್, ವೀರಪಾಲ್ ಸಿಂಗ್ ಮತ್ತು ರಾಮಪ್ರಕಾಶ್ ಸೋಲಂಕಿ ಬಾಲಕನ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹತ್ರಾಸ್ ಎಸ್ಪಿ ನಿಪುನ್ ಅಗರ್ವಾಲ್ ಹೇಳಿದ್ದಾರೆ.
ಈ ವೇಳೆ ಹೇಳಿಕೆ ನೀಡಿರುವ ಪೊಲೀಸ್ ಅಧಿಕಾರಿ “ಶಾಲೆಗೆ ಒಳ್ಳೆಯ ಹೆಸರು, ಕೀರ್ತಿ ಸಿಗಲೆಂದು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸೇರಿ ಹಾಸ್ಟೆಲ್ ನಲ್ಲಿದ್ದ ಎರಡನೇ ತರಗತಿಯ ಬಾಲಕನನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಡಿಎಲ್ ಪಬ್ಲಿಕ್ ಶಾಲೆಯಲ್ಲಿ ಸುಮಾರು 600 ವಿದ್ಯಾರ್ಥಿಗಳಿದ್ದು, ಬಾಲಕ ಹತ್ಯೆಯಾದ ಹಾಸ್ಟೆಲ್‌ನಲ್ಲಿ 1 ರಿಂದ 5 ನೇ ತರಗತಿಯ ಮಕ್ಕಳಿದ್ದು. ಮೃತ ವಿದ್ಯಾರ್ಥಿ ದೆಹಲಿಯ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕ್ರಿಶನ್ ಕುಶ್ವಾಹಾ ಅವರ ಪುತ್ರನಾಗಿದ್ದಾನೆ ಎನ್ನಲಾಗಿದೆ.
ಮೃತ ವಿದ್ಯಾರ್ಥಿಯನ್ನು ಕಾರಿನಲ್ಲಿ ಸುತ್ತಾಡಿಸಿದ ನಿರ್ದೇಶಕ :
ಸೋಮವಾರ ಬೆಳಗ್ಗೆ, ಹಾಸ್ಟೆಲ್‌ನ ಸಿಬ್ಬಂದಿ ಮತ್ತು ಇತರ ವಿದ್ಯಾರ್ಥಿಗಳು ಹಾಸ್ಟೆಲ್‌ನ ಹಾಸಿಗೆಯಲ್ಲಿ ಮಲಗಿದ್ದ ಬಾಲಕನನ್ನು ಎಬ್ಬಿಸಲು ಹೋಗಿದ್ದಾರೆ ಆದರೆ ಬಾಲಕ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ನಿರ್ದೇಶಕರ ಗಮನಕ್ಕೆ ವಿಚಾರ ತಂದಿದ್ದಾರೆ ಕೂಡಲೇ ನಿರ್ದೇಶಕ ಬಾಲಕನನ್ನು ಕಾರಿನಲ್ಲಿ ಆಗ್ರಾ ಮತ್ತು ಅಲಿಘರ್ ಪ್ರದೇಶ ಸುತ್ತಾಡಿಸಿ ಬಳಿಕ ಬಾಲಕನ ಕುಟುಂಬ ಸದಸ್ಯರಿಗೆ ನಿಮ್ಮ ಮಗ ಅನಾರೋಗ್ಯಕ್ಕೆ ಒಳಗಾಗಿದ್ದಾನೆ ಅರೋಗ್ಯ ಸ್ಥಿತಿ ಗಂಭೀರವಾಗಿದೆ ಕೂಡಲೇ ಬರುವಂತೆ ಹೇಳಿದ್ದಾರೆ.
ಬಾಲಕನ ಪೋಷಕರು ಹಾಸ್ಟೆಲ್ ಗೆ ಬಂದಾಗ ಬಾಲಕ ಇರಲಿಲ್ಲ ಬಳಿಕ ಆಸ್ಪತ್ರ್ರೆಗೆ ಬಂದು ನೋಡಿದಾಗಲೂ ಅಲ್ಲಿಯೂ ಪತ್ತೆಯಾಗಲಿಲ್ಲ ಬಳಿಕ ನಿರ್ದೇಶಕರಿಗೆ ಕರೆ ಮಾಡಿದಾಗ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಇದರಿಂದ ಆತಂಕಕ್ಕೆ ಒಳಗಾದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ವೇಳೆ ಸತ್ಯಾಂಶ ಹೊರ ಬಂದಿದೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ:ಚಾಲಕ ಅರ್ಜುನನ ಮೊಬೈಲ್ ಹಾಗೂ ಮಗನಿಗಾಗಿ ಖರೀದಿಸಿದ ಆಟಿಕೆ ಲಾರಿ ಪತ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.