Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Team Udayavani, Nov 27, 2024, 3:11 PM IST
ಲಕ್ನೋ: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ವೈದ್ಯರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ(ನ.27) ಮುಂಜಾನೆ ಸಂಭವಿಸಿದೆ.
ಮೃತರನ್ನು ಆಗ್ರಾದ ಡಾ ಅನಿರುದ್ಧ್ ವರ್ಮಾ (29), ಭದೋಹಿಯ ಡಾ ಸಂತೋಷ್ ಕುಮಾರ್ ಮೌರ್ಯ (46), ಕನೌಜ್‌ನ ಡಾ ಅರುಣ್ ಕುಮಾರ್ (34), ಬರೇಲಿಯ ಡಾ ನಾರ್ದೇವ್ (35) ಮತ್ತು ರಾಕೇಶ್ ಕುಮಾರ್ (38) ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಉತ್ತರ ಪ್ರದೇಶದ ಸೈಫೈನಲ್ಲಿರುವ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಬೇತಿ ಪಡೆದ ವೈದ್ಯರಾಗಿದ್ದಾರೆ ಎನ್ನಲಾಗಿದೆ.
ಆರು ಮಂದಿಯಿದ್ದ ವೈದ್ಯರ ತಂಡ ಲಕ್ನೋದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಆಗ್ರಾಕ್ಕೆ ವಾಪಸ್ಸಾಗುತ್ತಿದ್ದರು ಎನ್ನಲಾಗಿದ್ದು ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ಚಾಲಕನ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ಕಾರು ಡಿವೈಡರ್‌ಗೆ ಏರಿ ಇನ್ನೊಂದು ಬದಿಗೆ ಹೈವೇಗೆ ದಾಟಿದ ಪರಿಣಾಮ ಎದುರಿನಿಂದ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿದ್ದು ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಆನಂದ್ ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಪಘಾತದ ಕುರಿತು ತನಿಖೆ ನಡೆಯುತ್ತಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಡಾ.ಪ್ರಿಯಾಂಕಾ ಬಾಜಪೇಯ್ ತಿಳಿಸಿದ್ದಾರೆ.
“Five doctors from #Saifai Medical College tragically died in road accident & one doctor severe injured! They were returning from wedding in Scorpio, which crashed into divider, then truck.
Deeply saddened by tragic loss!
Pray for injured Dr !🙏🏻#MedTwitter #RIP🙏🏻 pic.twitter.com/fs5HR1NFyf— Indian Doctor🇮🇳 (@Indian__doctor) November 27, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!
Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್
Maoist; 15 ಲಕ್ಷ ರೂ.ಇನಾಮು ಹೊಂದಿದ್ದ ಮಾವೋವಾದಿ ಕಮಾಂಡರ್ ಆಂತರಿಕ ಕಲಹದಲ್ಲಿ ಹ*ತ್ಯೆ
Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!
Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Mumbai: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!
CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Kollywood: ಲೇಡಿ ಸೂಪರ್ ಸ್ಟಾರ್ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.