ಮದುವೆ ಪ್ರಸ್ತಾಪ ತಿರಸ್ಕರಿಸಿದ ಪುತ್ರಿಯನ್ನು ಇರಿದು ಕಾಲುವೆಗೆ ಎಸೆದ ಅಪ್ಪ, ಸಹೋದರ
Team Udayavani, Jun 17, 2019, 4:53 PM IST
ಶಹಜಹಾನ್‌ಪುರ : ತಮ್ಮ ಆಯ್ಕೆಯ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ 15ರ ಹರೆಯದ ಬಾಲಕಿಯನ್ನು ಆಕೆಯ ತಂದೆ ಮತ್ತು ಸಹೋದರ ಇರಿದು ಕಾಲುವೆಗೆ ಎಸೆದ ಅತ್ಯಮಾನುಷ ಘಟನೆ ಇಲ್ಲಿ ನಡೆದಿದೆ.
ಮುಖ ಮತ್ತು ಹೊಟ್ಟೆಗೆ ತೀವ್ರ ಇರಿತದ ಗಾಯ ಪಡೆದ ಬಾಲಕಿ ಹೇಗೋ ಕಷ್ಟಪಟ್ಟು ಈಜಿ ಪಾರಾಗಿ ಬಳಿಕ ಗ್ರಾಮಸ್ಥರಲ್ಲಿ ತನ್ನ ದಾರುಣ ಕಥೆಯನ್ನು ಹೇಳಿದಾಗ ಅವರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಕೂಡಲೇ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು ಎಂದು ನಗರದ ಎಸ್‌ಪಿ ದಿನೇಶ್ ತ್ರಿಪಾಠಿ ತಿಳಿಸಿದರು.
ಈ ಘಟನೆ ಕಳೆದ ಶುಕ್ರವಾರ ಲಖೀಮ್ ಪುರ ಪ್ರದೇಶದ ಆಸ್ಮಾನಿ ಸೇತುವೆಯಲ್ಲಿ ನಡೆದಿತ್ತು. ಪೊಲೀಸರು ಬಾಲಕಿಯ ತಂದೆ ಮತ್ತು ಸಹೋದರನನ್ನು ಬಂಧಿಸಿದ್ದಾರೆ.
ಬಾಲಕಿಯು ತನ್ನ ಸೋದರ ಸಂಬಂಧಿಯನ್ನು ಮದುವೆಯಾಗಲು ಬಯಸಿದ್ದಳು; ಆದರೆ ಆಕೆಯ ತಂದೆ ಮತ್ತು ಸಹೋದರ ಬೇರೊಬ್ಬ ಹುಡುಗನಿಗೆ ಮದುವೆ ಮಾಡಿಕೊಡಲು ಬಯಸಿದ್ದರು ಎಂದು ಎಸ್‌ಪಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.