ಯೋಗಿ ಸರ್ಕಾರ ತನ್ನ “ದರ್ಪ ಮತ್ತು ಸರ್ವಾಧಿಕಾರಿ” ಧೋರಣೆಯನ್ನು ಬಿಡಬೇಕು: ಮಾಯಾವತಿ
Team Udayavani, Oct 5, 2020, 2:11 PM IST
ಲಕ್ನೋ: ಹತ್ರಾಸ್ ಪ್ರಕರಣದಲ್ಲಿ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಪ್ರತಿಪಕ್ಷ ನಾಯಕರ ಮೇಲೆ ತನ್ನ ಬಲವನ್ನು ಯೋಗಿ ಸರ್ಕಾರ ಬಳಸುತ್ತಿರುವುದು ನಾಚಿಕೆಗೇಡು. ಈ ಕೂಡಲೇ ಉತ್ತರ ಪ್ರದೇಶ ಸರ್ಕಾರ ತನ್ನ “ದರ್ಪದ ಮತ್ತು ಸರ್ವಾಧಿಕಾರಿ” ಮನೋಭಾವವನ್ನು ಬದಲಾಯಿಸಿಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಕಿಡಿಕಾರಿದ್ದಾರೆ.
ಬಿಎಸ್ ಪಿ ನಿಯೋಗವು ಹತ್ರಾಸ್ ಸಂತ್ರಸ್ಥೆಯ ಕುಟುಂಬದ ಸದಸ್ಯರೊಂದಿಗೆ ಸೆ. 28ರಂದೇ ಮಾತುಕತೆ ನಡೆಸಿದೆ. ಅಲ್ಲಿ ನಮಗೆ ತಿಳಿದ ಮಾಹಿತಿ ಮನಕಲಕುವಾಗಿತ್ತು. ಇದರಿಂದಲೇ ತಾವು ಮಾಧ್ಯಮದ ಮೊರೆ ಹೋಗಿದ್ದು ಎಂದು ಮಾಯಾವತಿ ತಿಳಿಸಿದ್ದಾರೆ.
ಆದರೇ ಸರ್ಕಾರ ಮಾಧ್ಯಮವನ್ನೇ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಮಾತ್ರವಲ್ಲದೆ ವಿರೋಧ ಪಕ್ಷದ ನಾಯಕರ ಮೇಲೆ ಲಾಠಿ ಚಾರ್ಜ್ ನಡೆಸಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಹಾಗೂ ಖಂಡನೀಯ. ಸರ್ಕಾರ ತನ್ನ ಸರ್ವಾಧಿಕಾರ ಧೋರಣೆಯನ್ನು ಬಿಡಬೇಕು. ಮಾತ್ರವಲ್ಲದೆ ಪ್ರಜಾಪ್ರಭುತ್ವದ ಬೇರುಗಳನ್ನೇ ಕತ್ತರಿಸುವ ಪ್ರಯತ್ನ ಸಲ್ಲದು ಎಂದಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಭೇಟಿ: ಭೀಮ್ ಆರ್ಮಿಯ ಮುಖ್ಯಸ್ಥ ಸೇರಿದಂತೆ 400ಕ್ಕೂ ಹೆಚ್ಚು ಜನರ ಮೇಲೆ FIR ದಾಖಲು
ಹತ್ರಾಸ್ ಪ್ರಕರಣ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಹಾಗೂ ಕೃಷಿ ಮಸೂದೆಯನ್ನು ವಿರೋಧಿಸಿ ಆ. 2ರ ಶುಕ್ರವಾರ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ: ಡಿಕೆ ಶಿವಕುಮಾರ್ ದೊಡ್ಡಾಲಹಳ್ಳಿಯ ಮನೆ ಲಾಕರ್ ಒಡೆದಾಗ ಸಿಕ್ಕಿದ್ದು ಚಿಲ್ಲರೆ ಮಾತ್ರ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.