ಉತ್ತರ ಪ್ರದೇಶ: ಸರಕಾರೇತರ ಸಲಹೆಗಾರರು, ಅಧ್ಯಕ್ಷರಿಗೆ ಕೊಕ್
Team Udayavani, Mar 21, 2017, 3:50 PM IST
ಲಕ್ನೋ : ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ್ ಅವರ ನೂತನ ಸರಕಾರ, ಹಿಂದಿನ ಸಮಾಜವಾದಿ ಪಕ್ಷದ ಸರಕಾರ ನೇಮಿಸಿದ್ದ ಎಲ್ಲ ಸರಕಾರೇತರ ಸಲಹೆಗಾರರನ್ನು, ನಿಗಮಗಳ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು, ಸದಸ್ಯರನ್ನು, ಸಮಿತಿಗಳನ್ನು ಹಾಗೂ ಅವರ ಇಲಾಖಾ ಹೊಣೆಗಾರಿಕೆಗಳನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಕೊನೆಗೊಳಿಸಿದೆ.
ಮುಖ್ಯಮಂತ್ರಿಗಳು ನಿನ್ನೆ ಸೋಮವಾರ ಹೊರಡಿಸಿದ್ದ ಆದೇಶದ ಪ್ರಕಾರ ಇವರೆಲ್ಲರ ಸೇವೆಗಳನ್ನು ಕೊನೆಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಎಲ್ಲ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮುತ್ತ ಅಧಿಕಾರಿಗಳು ಈ ಆದೇಶವನ್ನು ಪರಿಪಾಲಿಸಬೇಕು ಎಂದು ಆದೇಶದಲ್ಲಿ ಅಪ್ಪಣೆ ನೀಡಲಾಗಿದೆ.
ಹಿಂದಿನ ಸಮಾಜವಾದಿ ಪಕ್ಷದ ಸರಕಾರವು ಸುಮಾರು 80ಕ್ಕೂ ಹೆಚ್ಚು ಈ ರೀತಿಯ ಸರಕಾರೇತರ ಸಲಹೆಗಾರರನ್ನು ನೇಮಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.