50 ಕೋಟಿ ದುರಾಸೆ; ನಿಗೂಢ ವಾಮಾಚಾರಕ್ಕೆ ತಲೆಬುರುಡೆಗಾಗಿ ವ್ಯಕ್ತಿಯ ಹ*ತ್ಯೆ!!
ರುಂಡವಿಲ್ಲದ ಮೃ*ತ ದೇಹ ಸಿಕ್ಕ ಪ್ರಕರಣ.. ನಾಲ್ವರ ಬಂಧನ
Team Udayavani, Dec 8, 2024, 2:17 PM IST
ಗಾಜಿಯಾಬಾದ್ : ಧಾರ್ಮಿಕ ವಿಧಿ ವಿಧಾನಗಳ ನಂತರ ಕನಿಷ್ಠ 50 ರಿಂದ 60 ಕೋಟಿ ರೂಪಾಯಿಗಳು ಸಿಗಬಹುದೆಂಬ ದುರಾಸೆಯಲ್ಲಿ ಇಬ್ಬರು ತಾಂತ್ರಿಕರ ಸೂಚನೆಯ ವ್ಯಕ್ತಿಯೊಬ್ಬನನ್ನು ಹ*ತ್ಯೆಗೈದು ಆತನ ತಲೆಬುರುಡೆಯನ್ನು ಅತೀಂದ್ರಿಯ ಅಭ್ಯಾಸಗಳಿಗೆ ಬಳಸಿದ ನಾಲ್ವರು ಆರೋಪಿಗಳನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ,ಬಂಧಿತ ಆರೋಪಿಗಳು ಮೂಲತಃ ಬಿಹಾರ ಮೂಲದವರಾಗಿದ್ದು, ದೆಹಲಿಯಲ್ಲಿ ಇ-ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಇಬ್ಬರು ತಮ್ಮ ಸ್ನೇಹಿತರೊಬ್ಬರಿಗೆ ತಾವು ಯೂಟ್ಯೂಬ್‌ನಲ್ಲಿ ಬ್ಲ್ಯಾಕ್ ಮ್ಯಾಜಿಕ್ ಆಚರಣೆಗಳನ್ನು ಕಲಿತಿದ್ದೇವೆ, ಮಾನವ ತಲೆಬುರುಡೆ ಬಳಸಿ ವಾಮಾಚಾರ ಮಾಡಿದರೆ ಬಹಳ ಬೇಗನೆ ಶ್ರೀಮಂತರಾಗಬಹುದು ಎಂದು ಹೇಳಿ ನಂಬಿಸಿದ್ದರು.
ಬಂಧಿತ ಆರೋಪಿಗಳನ್ನು ವಿಕಾಸ್ (28) ಅಲಿಯಾಸ್ ಪರಮಾತ್ಮ, ನರೇಂದ್ರ, ಪವನ್ ಕುಮಾರ್ ಮತ್ತು ಪಂಕಜ್ ಎಂದು ಗುರುತಿಸಲಾಗಿದೆ. ಮೃತನ ತಲೆಬುರುಡೆ ಮತ್ತು ವ್ಯಕ್ತಿಯ ಹತ್ಯೆಗೆ ಬಳಸಿದ ಹರಿತವಾದ ಆಯುಧಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಪರಾಧ 2024 ರ ಜೂನ್ ನಲ್ಲಿ ನಡೆದಿದ್ದು, ಪೊಲೀಸರು ಗಾಜಿಯಾಬಾದ್‌ನ ಚರಂಡಿಯಿಂದ ತಲೆಯಿಲ್ಲದ ಮೃತ ದೇಹವನ್ನು ವಶಪಡಿಸಿಕೊಂಡಿದ್ದರು.ಪ್ರಕರಣ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿ ಆಗಸ್ಟ್‌ನಲ್ಲಿ ಇಬ್ಬರು ಆರೋಪಿಗಳಾದ ವಿಕಾಸ್ ಗುಪ್ತಾ (24) ಅಲಿಯಾಸ್ ಮೋಟಾ ಮತ್ತು ಧನಂಜಯ್ (25) ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯದ ಹಿಂದಿನ ಉದ್ದೇಶ ಬಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.