ಹೃದಯಾಘಾತ: ಮದುವೆ ಸಂಭ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೋ ವೈರಲ್
Team Udayavani, Nov 29, 2022, 7:20 PM IST
ವಾರಾಣಸಿ: ಇತ್ತೀಚೆಗೆ ಹೃದಯಾಘಾತಗಳು ಸಾಮಾನ್ಯವಾಗಿದೆ. ಸಣ್ಣ ವಯಸ್ಸಿನವರೂ ಕೂಡ ಕಾರ್ಡಿಯಾಕ್ ಅರೆಸ್ಟ್ ನಂತಹ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮದುವೆ ಸಂಭ್ರಮದಲ್ಲಿ ವ್ಯಕ್ತಿಯೊಬ್ಬ ಹೀಗೆಯೇ ದುರಂತ ಅಂತ್ಯವಾಗಿದ್ದಾನೆ.
ಉತ್ತರಪ್ರದೇಶದ ವಾರಾಣಸಿ ಮೂಲದ ಮನೋಜ್ ವಿಶ್ವಕರ್ಮ (40) ಎನ್ನುವವರು ಪಿಲ್ಪಾನಿ ಕತ್ರಾ ಬಳಿಯ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ಸಂಬಂಧಿಕರೊಂದಿಗೆ ಸಂತಸದಲ್ಲಿ ಎರಡು ಹೆಜ್ಜೆ ನೃತ್ಯವನ್ನು ಮಾಡಿದ್ದಾರೆ. ಈ ಖುಷಿಯ ಕ್ಷಣದಲ್ಲಿ ಅದೇನಾಯಿತೋ ಗೊತ್ತಿಲ್ಲ. ಕುಣಿಯುತ್ತಿದ್ದ ಮನೋಜ್ ಒಂದೇ ಬಾರಿ ಕುಸಿದು ಬಿದ್ದಿದ್ದಾರೆ. ಅಕ್ಕಪಕ್ಕದಲ್ಲಿದ್ದವರು ಅವರನ್ನು ಎಬ್ಬಿಸಲು ಪ್ರಯತ್ನಪಟ್ಟಿದ್ದಾರೆ. ಆದರೆ ಕುಸಿದು ಬಿದ್ದ ಮನೋಜ್ ಮತ್ತೆ ಏಳಲೇ ಇಲ್ಲ.
ಹೃದಯಾಘಾತದಿಂದ ಮನೋಜ್ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆ ನ.25 ರಂದು ನಡೆದಿದ್ದು ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.
ಇಂಥದ್ದೇ ಘಟನೆ ಉತ್ತರ ಪ್ರದೇಶದ ದೇವಗಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದು, 51 ವರ್ಷದ ವ್ಯಕ್ತಿಯೊಬ್ಬ ‘ರಾಸ್’( ಮದುವೆಯ ಮುನ್ನ ನಡೆಯುವ ಕಾರ್ಯಕ್ರಮ) ಸಂಭ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದಿದ್ದರು.
एक और हंसते-गाते-नाचते मौत LIVE
वाराणसी में शादी में डांस करते हुए एक व्यक्ति की मौक़े पर मौत।
कितनी ऐसी मौत के बाद हमें एहसास होगा कि इसपर चिंता करने की ज़रूरत है pic.twitter.com/NvwdaXzwk3
— Narendra nath mishra (@iamnarendranath) November 29, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.