![Beer](https://www.udayavani.com/wp-content/uploads/2025/02/Beer-415x232.jpg)
![Beer](https://www.udayavani.com/wp-content/uploads/2025/02/Beer-415x232.jpg)
Team Udayavani, Feb 6, 2024, 3:12 PM IST
ಲಕ್ನೋ: ಆಶ್ಲೀಲ ವಿಡಿಯೋ ನೋಡಿ ಅಪ್ರಾಪ್ತ ತಂಗಿಯನ್ನೇ ಅತ್ಯಾಚಾರಗೈದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಫೆಬ್ರವರಿ 3 ರ ರಾತ್ರಿ ಈ ಘಟನೆ ನಡೆದಿದ್ದು,19 ವರ್ಷದ ಸಹೋದರ ಸಂಜು ತನ್ನ ತಂಗಿಯ ಪಕ್ಕದಲ್ಲಿ ಮಲಗಿದ್ದ. ಈ ವೇಳೆ ತಾಯಿ ಸಂಬಂಧಿಕರ ಮನೆಗೆ ತೆರಳಿದ್ದು, ಅಣ್ಣ – ತಂಗಿ ಮಾತ್ರ ಮನೆಯಲ್ಲಿದ್ದರು. ಸಂಜು ತನ್ನ ಮೊಬೈಲ್ ಫೋನಿನಲ್ಲಿ ಆಶ್ಲೀಲ ವಿಡಿಯೋಗಳನ್ನು ನೋಡಿ, ಆ ಬಳಿಕ ತಂಗಿಯ ಮೇಲೆ ಅತ್ಯಾಚಾರಗೈದಿದ್ದಾನೆ. ಆ ಬಳಿಕ ತಾನುವೆಸಗಿದ ಕೃತ್ಯವನ್ನು ತಂಗಿ ಬಹಿರಂಗಪಡಿಸಬಹುದೆನ್ನುವ ಭೀತಿಯಲ್ಲಿ ಸಂಜು ಸಹೋದರಿಯ ಕತ್ತು ಹಿಸುಕಿ ಕೊಲೆಗೈದು, ಅಲ್ಲಿಂದ ಪರಾರಿಯಾಗಿದ್ದಾನೆ.
ಮರುದಿನ ಬಾಲಕಿಯ ಚಿಕ್ಕಪ್ಪ ರಾಧೇಶ್ಯಾಮ್ ಸಂಜು ವಿರುದ್ಧ ದೂರು ದಾಖಲಿಸಿದ್ದಾರೆ. ಫೆಬ್ರವರಿ 5 ರಂದು(ಸೋಮವಾರ) ಪೊಲೀಸರು ಆರೋಪಿಯನ್ನು ಬಂಧಿಸಿದ್ದು,ವಿಚಾರಣೆಯ ಸಮಯದಲ್ಲಿ, ಸಂಜು ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.
ಆಶ್ಲೀಲ ವಿಡಿಯೋಗಳಿದ್ದ ಮೊಬೈಲ್ ಫೋನ್ ನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಕಾಸ್‌ಗಂಜ್‌ನ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.