ಕೊಲೆ ಕೇಸಲ್ಲಿ ನಿರ್ಭೀತಿಯ ಸಾಕ್ಷಿ ನುಡಿದಾತನಿಗೆ ಪೊಲೀಸ್ ಪ್ರಶಸ್ತಿ
Team Udayavani, Jan 9, 2017, 4:45 PM IST
ಬುಲಂದ್‌ಶಹರ್, ಉ.ಪ್ರ. : ಇಲ್ಲಿನ ಬರಾರಿ ಗ್ರಾಮದಲ್ಲಿ 9 ವರ್ಷಗಳ ಹಿಂದೆ ನಡೆದಿದ್ದ ಒಂದೇ ಕುಟುಂಬದ 9 ಮಂದಿಯ ಕೊಲೆ ಕೇಸಿನಲ್ಲಿ , ಜೀವ ಬೆದರಿಕೆ ಹಾಗೂ ಹಲ್ಲೆಯನ್ನು ಲೆಕ್ಕಿಸದೆ ಧೈರ್ಯದಿಂದ ಸಾಕ್ಷಿ ನುಡಿದಿದ್ದ ಅಮರ್‌ಪಾಲ್ ಲೋಧಿ ಎಂಬವರನ್ನು ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಸೂರ್ಯ ಕುಮಾರ್ ಅವರು ಪ್ರಶಂಸಾ ಪತ್ರ ನೀಡಿ ಶಾಲು ಹೊದೆಸಿ ಗೌರವಿಸಿದ್ದಾರೆ.
9 ವರ್ಷಗಳ ಹಿಂದೆ ಬರಾರಿ ಗ್ರಾಮದ ಸುಖವೀರ್ ಸಿಂಗ್ ಎಂಬವರ ಕುಟುಂಬದ 9 ಮಂದಿಯನ್ನು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆತನ ನೆರೆಯವನಾಗಿದ್ದ ರಣವೀರ್ ಸಿಂಗ್ ಎಂಬಾತ ದಾರುಣವಾಗಿ ಕೊಂದಿದ್ದ. ಈ ಕೇಸಿನಲ್ಲಿ ಲೋಧಿ ಪ್ರಮುಖ ಪ್ರಾಸಿಕ್ಯೂಶನ್ ಸಾಕ್ಷಿದಾರರಾಗಿದ್ದರು.
ಪ್ರತಿಕೂಲ ಸನ್ನಿವೇಶದಲ್ಲೂ ಧೃತಿಗೆಡದೆ, ಪ್ರಾಣ ಭಯ ಲೆಕ್ಕಿಸದೆ, ತನ್ನ ಮೇಲಿನ ಮಾರಣಾಂತಿಕ ಹಲ್ಲೆಗೂ ಅಂಜದೆ, ಪ್ರಾಸಿಕ್ಯೂಶನ್ ಸಾಕ್ಷಿದಾರ ಲೋಧಿ ನಿರ್ಣಾಯಕ ಸಾಕ್ಷಿ ಹೇಳಿದ ಕಾರಣ ಆರೋಪಿ ರಣವೀರ್ ಸಿಂಗ್‌ಗೆ ನ್ಯಾಯಾಯಲವು ಮರಣ ದಂಡನೆಯನ್ನು ವಿಧಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್
Saif Ali Khan ಬೆನ್ನುಮೂಳೆಯಿಂದ ಚಾಕು ತೆಗೆದ ವೈದ್ಯರು; ಅಪಾಯದಿಂದ ಪಾರು
Video: ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ
Video: ಆತ್ಮಹತ್ಯೆ ಮಾಡಿಕೊಳ್ಳಲು 13ನೇ ಮಹಡಿಯಿಂದ ಜಿಗಿದರೂ ಬದುಕುಳಿದ ಕಾರ್ಮಿಕ….
Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ
MUST WATCH
ಹೊಸ ಸೇರ್ಪಡೆ
ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ ಅರ್ಜುನ್ ಜನ್ಯಾ ನಿರ್ದೇಶನದ ʼ45ʼ ಸಿನಿಮಾ
Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಎಂಟ್ರಿ
Saif Ali Khan ಬೆನ್ನುಮೂಳೆಯಿಂದ ಚಾಕು ತೆಗೆದ ವೈದ್ಯರು; ಅಪಾಯದಿಂದ ಪಾರು
Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.