ವಿದ್ಯಾರ್ಥಿಗಳನ್ನು ಕರೆತರಲು ರಾಜಸ್ಥಾನಕ್ಕೆ 300 ಬಸ್ ಕಳುಹಿಸಿದ ಉತ್ತರಪ್ರದೇಶ ಸರ್ಕಾರ
ನಾವು ಆಹಾರ, ನೀರಿನ ಬಾಟಲು, ಮಾಸ್ಕ್ ಹಾಗೂ ಸ್ಯಾನಿಟೈಸರ್ಸ್ ಅನ್ನು ಕಳುಹಿಸಿದ್ದೇವೆ.
Team Udayavani, Apr 17, 2020, 8:37 PM IST
ಲಕ್ನೋ:ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಮುಂದುವರಿದಿದ್ದು, ಏತನ್ಮಧ್ಯೆ ವಿದ್ಯಾರ್ಥಿಗಳನ್ನು ವಾಪಸ್ ಕರೆಯಿಸಿಕೊಳ್ಳಲು ಉತ್ತರಪ್ರದೇಶ ಸರ್ಕಾರ ಆಗ್ರಾದಿಂದ 200 ಬಸ್ ಹಾಗೂ ಜಾನ್ಸಿಯಿಂದ 100 ಬಸ್ ಗಳನ್ನು ರಾಜಸ್ಥಾನದ ಕೋಟಾಕ್ಕೆ ಕಳುಹಿಸಿರುವುದಾಗಿ ವರದಿ ತಿಳಿಸಿದೆ.
ರಾಜಸ್ಥಾನದ ಕೋಟಾದಲ್ಲಿ ಸಿಕ್ಕಿಹಾಕಿಕೊಂಡಿರುವ ಮಕ್ಕಳಳನ್ನು ವಾಪಸ್ ಕರೆತರಲು ಬಸ್ ಗಳನ್ನು ಕಳುಹಿಸಲಾಗಿದೆ. ನಾವು ಆಹಾರ, ನೀರಿನ ಬಾಟಲು, ಮಾಸ್ಕ್ ಹಾಗೂ ಸ್ಯಾನಿಟೈಸರ್ಸ್ ಅನ್ನು ಕಳುಹಿಸಿದ್ದೇವೆ. ಪ್ರತಿಯೊಂದು ಬಸ್ 25 ಮಕ್ಕಳನ್ನು ಕರೆತರಬಹುದಾಗಿದೆ. ಕೆಲವು ಬಸ್ ಗಳನ್ನು ಜಾನ್ಸಿಯಿಂದ ಕೂಡಾ ಕಳುಹಿಸಲಾಗಿದೆ ಎಂದು ಆಗ್ರಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಸ್ಥಾನದ ಕೋಟಾ ಕೋಚಿಂಗ್ ಸೆಂಟರ್ ಗಳ ಹಬ್ ಆಗಿದೆ. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಂತಹ ಕಠಿಣ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲು ಕೋಟಾ ಪ್ರದೇಶ ಹೆಸರುವಾಸಿಯಾಗಿದೆ.
ಇತರ ರಾಜ್ಯಗಳು ಕೂಡಾ ತಮ್ಮ ವಿದ್ಯಾರ್ಥಿಗಳನ್ನು ವಾಪಸ್ ಕರೆದೊಯ್ಯಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ ಎಂದು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಉತ್ತರಪ್ರದೇಶ ಸರ್ಕಾರದ ನಿಲುವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಟುವಾಗಿ ಟೀಕಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕೋಟಾದಿಂದ ಕರೆತರಲು ವಿಶೇಷ ಬಸ್ ಗಳನ್ನು ಕಳುಹಿಸುವುದು ನ್ಯಾಯಸಮ್ಮತವಾದುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.