UP: ಮೊಬೈಲ್ ನಲ್ಲಿ ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ; ಮೃತ್ಯು
Team Udayavani, Jan 22, 2024, 12:10 PM IST
ಲಕ್ನೋ: ಮೊಬೈಲ್ ನಲ್ಲಿ ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವೊಂದು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯದ ಹತೈಖೇಡಾದಲ್ಲಿ ಭಾನುವಾರ(ಜ.21 ರಂದು) ನಡೆದಿದೆ.
ಘಟನೆ ಹಿನ್ನೆಲೆ: ಮಗು ಕಾಮಿನಿ ಬೆಡ್ ನಲ್ಲಿ ತನ್ನ ಅಮ್ಮನ ಪಕ್ಕದಲ್ಲಿ ಮಲಗಿಕೊಂಡು ಮೊಬೈಲ್ ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿತ್ತು. ಈ ವೇಳೆ ಮಗುವಿನ ಕೈಯಿಂದ ಫೋನ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದೆ. ಆ ಬಳಿಕ ಮಗು ಪ್ರಜ್ಞಾಹೀನವಾಗಿ ಬಿದ್ದಿದೆ. ಗಾಬರಿಗೊಂಡ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ ಬಳಿಕ ಮಗು ಆದಾಗಲೇ ಮೃತಪಟ್ಟಿದೆ ಎಂದು ಹೇಳಿದ್ದಾರೆ.
“ಮಗು ಹೃದಯಾಘಾತದಿಂದ ಸಾವನ್ನಪ್ಪಿರಬಹುದು” ಎಂದು ಹಸನಪುರ ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರಿ ಧ್ರುವೇಂದ್ರಕುಮಾರ್ ಹೇಳಿದ್ದಾರೆ.
“ಶವವನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸುವಂತೆ ನಾವು ಕುಟುಂಬಕ್ಕೆ ಮನವಿ ಮಾಡಿದ್ದೇವೆ. ಆದರೆ ಅವರು ಒಪ್ಪಲಿಲ್ಲ. ಮಗು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಬೇರೆ ಯಾವುದಾದರೂ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ತನಿಖೆಯ ವಿಷಯವಾಗಿದೆ” ಎಂದು ಅಮ್ರೋಹಾ ಮುಖ್ಯ ವೈದ್ಯಾಧಿಕಾರಿ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: ಅಂಗನವಾಡಿಯಲ್ಲಿ ಉಪ್ಪಿಟ್ಟು ಬೇಡ, ಬಿರಿಯಾನಿ ಬೇಕು.. ಬಾಲಕನ ಮನವಿಗೆ ಸಚಿವೆ ಸ್ಪಂದನೆ
Video: ಊಟದ ವಿಚಾರದಲ್ಲಿ ಅರ್ಧಕ್ಕೆ ನಿಂತಿದ್ದ ಮದುವೆ ಪೊಲೀಸ್ ಠಾಣೆಯಲ್ಲಿ ಪೂರ್ಣಗೊಂಡಿತು
Central Govt vs LOP: ಮೇಕ್ ಇನ್ ಇಂಡಿಯಾದಲ್ಲಿ ಮೋದಿ ವಿಫಲ: ರಾಹುಲ್ ಗಾಂಧಿ ಟೀಕೆ
Madhya Pradesh: ಅಪ್ಪನ ಮೃತದೇಹವನ್ನು 2 ಭಾಗ ಮಾಡಿಕೊಡಲು ಹಿರಿಯ ಸಹೋದರ ಪಟ್ಟು!
Parliament: ಕುಂಭದಲ್ಲಿ ಸಾವಿರಾರು ಸಾವು: ಖರ್ಗೆ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gundlupete: ಟಾಟಾ ಏಸ್ – ಬೈಕ್ ನಡುವೆ ಅಪಘಾತ: ಬೈಕ್ ಸವಾರನ ಕಾಲಿಗೆ ಗಂಭೀರ ಗಾಯ
Kerala: ಅಂಗನವಾಡಿಯಲ್ಲಿ ಉಪ್ಪಿಟ್ಟು ಬೇಡ, ಬಿರಿಯಾನಿ ಬೇಕು.. ಬಾಲಕನ ಮನವಿಗೆ ಸಚಿವೆ ಸ್ಪಂದನೆ
Yakshagana: ವೇಷ- ಪಾತ್ರವೇ ಕಾಣದ ರೀತಿಯ ಅಲಂಕಾರದಿಂದ ಏನು ಪ್ರಯೋಜನ?
America: ಅಮೆರಿಕದಿಂದ ಭಾರತೀಯ ವಲಸಿಗರ ಗಡಿಪಾರು ಶುರು; 205 ಪ್ರಯಾಣಿಕರ ವಿಮಾನ
Hubballi: ಬೆಳ್ಳಂಬೆಳಗ್ಗೆ ಗುಂಡಿನ ಸದ್ದು… ಗುಜರಾತ್ ಮೂಲದ ಇಬ್ಬರು ದರೋಡೆಕೋರರ ಬಂಧನ