Superglue Surgery: ಫೆವಿಕ್ವಿಕ್, ಬ್ಲೌಸ್‌ಹುಕ್ ಬಳಸಿ ಆಮೆ ಚಿಪ್ಪು ಶಸ್ತ್ರಚಿಕಿತ್ಸೆ!
ಬರೇಲಿಯಲ್ಲಿ ಸೂಪರ್ ಗ್ಲೂ ಸರ್ಜರಿ ಯಶಸ್ವಿ!
Team Udayavani, Jul 10, 2024, 9:08 PM IST
ಲಕ್ನೋ: ಉತ್ತರ ಪ್ರದೇಶದ ಬರೇಲಿಯಲ್ಲಿ ಕಾರಿನ ಚಕ್ರಕ್ಕೆ ಸಿಲುಕಿದ್ದ ಆಮೆಯೊಂದರ ಚಿಪ್ಪು ತುಂಡಾಗಿದ್ದನ್ನು ಫೆವಿಕ್ವಿಕ್ ಮತ್ತು ಬ್ಲೌಸ್‌ನ ಹುಕ್ ಬಳಸಿ ಶಸ್ತ್ರಚಿಕಿತ್ಸೆ ನಡೆಸಿ, ಸರಿಪಡಿಸಲಾಗಿದೆ. ಬರೇಲಿಯಲ್ಲಿನ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ತಜ್ಞರು ಈ ವಿನೂತನ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ.
ಗಾಯಗೊಂಡಿದ್ದ ಆಮೆಯನ್ನು ಪರಿಸರ ಕಾರ್ಯಕರ್ತರೊಬ್ಬರು ಐವಿಆರ್‌ಐಗೆ ತರಲಾಗಿತ್ತು. . ಆಮೆ ಅದಾಗಲೇ ತುಂಡಾಗಿದ್ದ ಕಾರಣ ಅದು ಸಾವು-ಬದುಕಿನ ಹೋರಾಟದಲ್ಲಿತ್ತು.
ಅದರ ಒಳಗೆ 7 ಮೊಟ್ಟೆಗಳೂ ಕೂಡ ಇದ್ದವು. ಈ ಹಿನ್ನೆಲೆಯಲ್ಲಿ ತಕ್ಷಣವೇ ಶಸ್ತ್ರ ಚಿಕಿತ್ಸೆ ನಡೆಸಬೇಕಿತ್ತು. ಆದರೆ, ಆಮೆಯ ಚಿಪ್ಪಿನ ಬಿರುಕುಗಳನ್ನು ಸರಿ ಪಡಿಸಲು ಮೂಳೆ ವೈದ್ಯರು ಬಳಸುವ ಅಂಟು ಆ ಸಮಯಕ್ಕೆ ಲಭ್ಯವಿರಲಿಲ್ಲ.
ಸಮಯವೂ ಕಡಿಮೆ ಇದ್ದ ಕಾರಣ ಸೂಪರ್ ಗ್ಲೂ ಹಾಗೂ ಬ್ಲೌಸ್ ಹುಕ್ ಬಳಸಿ ಚಿಪ್ಪನ್ನು ಅಂಟಿಸಲಾಗಿದೆ. ನಂತರ ಶಸ್ತ್ರ ಚಿಕಿತ್ಸೆಗೆ ಬಳಸುವ ವೈರ್‌ನಿಂದ ಹೊಲಿಗೆ ಹಾಕಲಾಗಿದೆ. ಡಾ.ಅಭಿಜಿತ್ ಪಾಬ್ಡೆ ಹಾಗೂ ಡಾ. ಕಮಲೇಶ್ ಕುಮಾರ್ ಈ ಶಸ್ತ್ರ ಚಿಕಿತ್ಸೆ ನಡೆಸಿ, ಯಶಸ್ವಿಯಾಗಿದ್ದಾರೆ. ಸದ್ಯ ಆಮೆ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.