ಉತ್ತರ ಪ್ರದೇಶ : ಹೆಚ್ಚಿನ ವರದಕ್ಷಿಣೆಗಾಗಿ ನವ ವಿವಾಹಿತೆಯ ಕೊಲೆ
Team Udayavani, Feb 2, 2019, 6:49 AM IST
ಮುಜಫರನಗರ, ಉತ್ತರ ಪ್ರದೇಶ : ಶಾಮ್ಲಿ ಜಿಲ್ಲೆಯ ಗಢೀ ಪುಖ್‌ತಾ ಪೊಲೀಸ್ ಠಾಣೆ ವ್ಯಾಪ್ತಿಯ ಪಕ್ಕೀ ಗಢೀ ಗ್ರಾಮದಲ್ಲಿ, ಹೆಚ್ಚಿನ ವರದಕ್ಷಿಣೆಗಾಗಿ ನವ ವಿವಾಹಿತೆಯನ್ನು ಆಕೆಯ ಗಂಡ ಮತ್ತು ಮನೆಯವರು ಸೇರಿಕೊಂಡು ಕೊಂದಿರುವ ಘಟನೆ ವರದಿಯಾಗಿದೆ.
ಮೃತ ನವ ವಿವಾಹಿತೆ ಸನಾ ಖಾನ್ (28) ಒಂಬತ್ತು ತಿಂಗಳ ಹಿಂದೆ ಅರಿಝ್ ಹಸನ್ ಎಂಬಾತನನ್ನು ಮದುವೆಯಾಗಿದ್ದಳು. ಆಕೆಯನ್ನು ಕೊಂದಿರುವ ಆರೋಪದ ಮೇಲೆ ಪೊಲೀಸರು ಇದೀಗ ತಲೆ ಮರೆಸಿಕೊಂಡಿರುವ ಆಕೆಯ ಪತಿ ಮತ್ತು ಆತನ ಐವರು ಸಂಬಂಧಿಗಳ ವಿರುದ್ಧ ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೃತ ಮಹಿಳೆಯ ಸಹೋದರ ಹೇಹಾದ್ ಖಾನ್ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಆಕೆಯ ಗಂಡ ಮತ್ತು ಮನೆಯವರು 10 ಲಕ್ಷ ರೂ. ವರದಕ್ಷಿಣೆಗಾಗಿ ಕಳೆದ ಹಲವು ತಿಂಗಳಿಂದ ಸನಾಳನ್ನು ದೈಹಿತವಾಗಿ ಮಾನಸಿಕವಾಗಿ ಪೀಡಿಸುತ್ತಿದ್ದರು.
ಸನಾಳ ಸಾವಿನಿಂದ ಉದ್ರಿಕ್ತತೆ ತಲೆದೋರಿದ್ದು ಸಿಟ್ಟಿಗೆದ್ದಿರುವ ಗ್ರಾಮಸ್ಥರು ನವಾಲ್ತಿ ಚೌಕ್ ಸಮೀಪ ರಸ್ತೆ ತಡೆ ನಡೆಸಿ ಕೊಲೆಗಾರರ ತ್ವರಿತ ಬಂಧನವನ್ನು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.