Acid victim ಜತೆ ಸೆಲ್ಫಿ:ಇಬ್ಬರು ಮಹಿಳಾ ಕಾನ್‌ಸ್ಟೆಬಲ್ ಸಸ್ಪೆಂಡ್
Team Udayavani, Mar 25, 2017, 11:12 AM IST
ಲಕ್ನೋ : ಸೆಲ್ಫಿ ಹುಚ್ಚಿಗೆ ಜನಸಾಮಾನ್ಯರು ಮಾತ್ರವಲ್ಲ; ಪೊಲೀಸರು ಕೂಡ ಒಳಗಾಗಿದ್ದಾರೆ;ಅದರಲ್ಲೂ ಮಹಿಳಾ ಪೊಲೀಸರೂ ಸೇರಿದ್ದಾರೆ !
ಗ್ಯಾಂಗ್ ರೇಪ್ ಹಾಗೂ ಆ್ಯಸಿಡ್ ಸಂತ್ರಸ್ತೆಯ ಆಸ್ಪತ್ರೆಯ ಬೆಡ್‌ನಲ್ಲಿ ನರಳುತ್ತಿರುವಾಗ ಆಕೆಯ ಕಾವಲಿಗಿದ್ದ ಮೂವರು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೆಲ್ಫಿ ತೆಗೆಸಿಕೊಂಡ ಕಾರಣಕ್ಕೆ ಈಗ ಮೂವರಲ್ಲಿ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಅಮಾನತುಗೊಂಡಿದ್ದಾರೆ. ಲಕ್ನೋ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಈ ಘಟನೆ ನಡೆದಿದೆ.
ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಆಸ್ಪತ್ರೆಯ ಟ್ರೋಮಾ ಸೆಂಟರ್ ಒಳಗಡೆ ಮೂವರು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ಸಂತ್ರಸ್ತೆಯ ಬೆಡ್ ಸಮೀಪವೇ ಕುಳಿತುಕೊಂಡು ಸೆಲ್ಫಿ ತೆಗೆಸಿಕೊಂಡಿರುವುದು ಅವರು ತೆಗಿದಿರುವ ಚಿತ್ರದ ಮೂಲಕ ಖಚಿತವಾಗಿದೆ.
ಹೀಗೆ ಸೆಲ್ಫಿ ತೆಗೆಸಿಕೊಂಡ ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳ ಈ ಕೃತ್ಯವನ್ನು ಸಂವೇದನಾರಾಹಿತ್ಯದ ಕೃತ್ಯವೆಂದು ಹೇಳಿದ್ದು ಇವರ ವಿರುದ್ಧ ತತ್‌ಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳ ಪೈಕಿ ಇಬ್ಬರಾದ ರಜನಿ ಬಾಲಾ ಸಿಂಗ್ ಮತ್ತು ಡೇಸಿ ಸಿಂಗ್ ಅವರನ್ನು ತನಿಖೆಯ ಬಳಿಕ ಅಮಾನತು ಮಾಡಲಾಗಿದೆಯಾದರೆ ಮೂರನೇ ಮಹಿಳಾ ಕಾನ್‌ಸ್ಟೆಬಲ್ ವಿರುದ್ಧ ತನಿಖೆ ನಡೆಯುತ್ತಿದೆ.
45ರ ಹರೆಯದ ಮಹಿಳೆಗೆ ಇಬ್ಬರು ಪುರುಷರು ರೈಲಿನಲ್ಲಿ ಬಲವಂತದಿಂದ ಆ್ಯಸಿಡ್ ಕುಡಿಸಿದ್ದಾರೆ. ಇದೇ ಶಂಕಿತರ ಸಮೂಹದಿಂದ ಈ ಮಹಿಳೆಯು ನಾಲ್ಕನೇ ಬಾರಿಗೆ ದಾಳಿಗೆ ಗುರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಗ್ಯಾಂಗ್ ರೇಪ್ ಹಾಗೂ ಆ್ಯಸಿಡ್ ಸಂತ್ರಸ್ತ ಮಹಿಳೆಯು ಕಳೆದ ಗುರುವಾರ ಬೆಳಗ್ಗೆ ಲಕ್ನೋದ ಚಾರ್‌ಬಾಗ್ ಸ್ಟೇಶನ್‌ನಲ್ಲಿ ಅಲಹಾಬಾದ್ – ಲಕ್ನೋ ಗಂಗಾ ಗೋಮತಿ ಎಕ್ಸ್‌ಪ್ರೆಸ್ ರೈಲಿನಿಂದ ಇಳಿದ ಬಳಿಕವೇ ಆಕೆ ರೈಲಿನಲ್ಲಿ ಅನುಭವಿಸಿದ್ದ ಚಿತ್ರಹಿಂಸೆ ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆ ಅದ್ಹೇಗೋ ಕಷ್ಟಪಟ್ಟು ಕಾಗದದ ತುಂಡೊಂದರಲ್ಲಿ ಕಾಮಾಂಧರು ತನಗೆ ನೀಡಿದ್ದ ಚಿತ್ರಹಿಂಸೆಯ ವಿವರಗಳನ್ನು ಗೀಚಿ ಅದನ್ನು ಸರಕಾರಿ ರೈಲ್ವೇ ಪೊಲೀಸರಿಗೆ ನೀಡಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.