ಯುಪಿಎ ನೇತೃತ್ವ: ಸೋನಿಯಾ ನಿವೃತ್ತಿ?
ಎನ್‌ಸಿಪಿಯ ಶರದ್ ಪವಾರ್‌ಗೆ ಮೈತ್ರಿಕೂಟ ಹೊಣೆ ಸಾಧ್ಯತೆ
Team Udayavani, Dec 11, 2020, 1:41 AM IST
ಹೊಸದಿಲ್ಲಿ: ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಿವೃತ್ತಿ ಘೋಷಿಸುವ ಸಾಧ್ಯತೆಯಿದ್ದು, ಎನ್‌ಸಿಪಿ ನಾಯಕ ಶರದ್ ಪವಾರ್‌ರನ್ನು ಈ ಸ್ಥಾನಕ್ಕೆ ಕೂರಿಸಲು ರಣತಂತ್ರ ಸಿದ್ಧವಾಗಿದೆ.
ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಕಳಪೆ ಸಾಧನೆ ಕಾರಣಗಳಿಂದ, ಮೈತ್ರಿಕೂಟ ಹುದ್ದೆಯಲ್ಲಿ ಮುಂದುವರಿ ಯಲು ಸೋನಿಯಾ ಗಾಂಧಿ ನಿರಾಸಕ್ತಿ ತಾಳಿರುವುದರಿಂದ ಯುಪಿಎ ಮುನ್ನಡೆಸುವ ಹೊಣೆಯಿಂದ ಅವರು ಹಿಂದೆ ಸರಿಯಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖೀಸಿ “ನ್ಯೂಸ್18′ ವರದಿ ಮಾಡಿದೆ.
ಸಾರಥ್ಯಕ್ಕೆ ಯಾರೂ ಸಿದ್ಧರಿಲ್ಲ!: ಇತ್ತ ಸ್ವಪಕ್ಷದ
ನಾಯಕತ್ವದ ನೊಗವನ್ನೇ ರಾಹುಲ್ ಗಾಂಧಿ ಕೆಳಗಿಟ್ಟಿ ದ್ದಾರೆ. ಇನ್ನೊಂದೆಡೆ ವಯಸ್ಸಿನಲ್ಲಿ ರಾಹುಲ್ ಗಾಂಧಿಯಂಥ ಕಿರಿಯರನ್ನು ಸಂಭಾಳಿಸಿಕೊಂಡು ಹೋಗಲು ಡಿಎಂಕೆ ನಾಯಕ ಸ್ಟಾಲಿನ್‌ರಂಥವರೂ ಸಿದ್ಧರಿಲ್ಲ. ಕಾಂಗ್ರೆಸ್‌ಗಿಂತ ತಮ್ಮ ಪಕ್ಷ ಸಾಧನೆಯೇ ಉತ್ತಮ ವಿದೆ ಎಂಬ ಭಾವನೆಯೂ ಅವರಿ ಗಿದೆ. ಮೈತ್ರಿ ಕೂಟದ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಅಸ್ತಿತ್ವ ಉಳಿದರೆ ಸಾಕೆನ್ನುವ ಯೋಚನೆಯಲ್ಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಸ್ತುತ ಸೋನಿಯಾ ಬಿಟ್ಟರೆ, ಶರದ್ ಪವಾರ್ ಮಾತುಗಳಿಗೆ ಯುಪಿಎ ಕೂಟದಲ್ಲಿ ಹೆಚ್ಚು ಬೆಲೆ ಸಿಗುತ್ತಿದೆ. ಪವಾರ್ ನೇಮಕವನ್ನು ಇತರ ಪಕ್ಷಗಳೂ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು ಸೋನಿಯಾ ಗಾಂಧಿ ಲೆಕ್ಕಾಚಾರ. ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ನೇಮಕವಾಗಲಿದ್ದಾರೆ ಎಂಬ ವರದಿಗಳನ್ನು ಎನ್‌ಸಿಪಿ ತಿರಸ್ಕರಿಸಿದೆ. ಈ ಕುರಿತು ಚರ್ಚೆಗಳೇ ನಡೆದಿಲ್ಲ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.