Google Chrome ತಪ್ಪದೇ ಅಪ್‌ಡೇಟ್ ಮಾಡಿ: ಮಾಡುವುದು ಹೇಗೆ?
Team Udayavani, Feb 25, 2024, 6:35 AM IST
ಹೊಸದಿಲ್ಲಿ : ಡೆಸ್ಕ್ ಟಾಪ್ ಕಂಪ್ಯೂಟರ್‌ಗಳಲ್ಲಿ ಇಂಟರ್‌ನೆಟ್ ಶೋಧಕ್ಕಾಗಿ ಗೂಗಲ್ ಕ್ರೋಮ್ ಬಳಕೆ ವೇಳೆ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.
ಅದರಲ್ಲಿ ತೀವ್ರವಾಗಿರುವ ತಾಂತ್ರಿಕ ಲೋಪಗಳಿವೆ. ಹೀಗಾಗಿ, ಹ್ಯಾಕರ್‌ಗಳು ಸುಲಭವಾಗಿ ಬಳಕೆದಾರರ ಮಾಹಿತಿಯ ಮೇಲೆ ಕನ್ನ ಹಾಕುವ ಸಾಧ್ಯತೆಗಳು ಇವೆ ಎಂದು ಕೇಂದ್ರ ಸರಕಾರದ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ-ಇನ್) ಎಚ್ಚರಿಕೆಯ ಸಂದೇಶ ರವಾನಿಸಿದೆ.
ಈ ದೋಷಗಳನ್ನು ಬಳಸಿ, ಸೂಕ್ಷ್ಮ ಮಾಹಿತಿಯನ್ನು ಹ್ಯಾಕರ್‌ಗಳು ಕದಿಯಬಹುದು. ಈ ದೋಷಗಳು ವಿಂಡೋಸ್, ಮ್ಯಾಕ್ಸ್, ಲಿನಕ್ಸ್‌ನ ಹಿಂದಿನ ಗೂಗಲ್ ಕ್ರೋಮ್ ಆವೃತ್ತಿ ಗಳಲ್ಲಿವೆ.
ಅಪ್‌ಡೇಟ್ ಹೇಗೆ?
ಡೆಸ್ಕ್ಟಾಪ್‌ನ ಗೂಗಲ್ ಕ್ರೋಮ್ ಓಪನ್ ಮಾಡಿ.
ಬಲ ಮೂಲೆಯಲ್ಲಿರುವ ಮೂರು ಲಂಬ ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಅನಂತರ ಮೆನು ಗೆ ಹೋಗಿ, “ಹೆಲ್ಪ್’ ಬಟನ್ ಪ್ರಸ್ ಮಾಡಿ
ಬಳಿಕ “ಎಬೌಟ್ ಗೂಗಲ್ ಕ್ರೋಮ್’ ಆಯ್ಕೆ ಮಾಡಿ.
ಅಪ್‌ಡೇಟ್ ಬಳಿಕ ಇನ್‌ಸ್ಟಾ ಲೇಶನ್ ಪೂರ್ಣಗೊಳ್ಳಲಿದೆ
ಅನಂತರ “ರೀಲಾಂಚ್’ ಬಟನ್ ಕ್ಲಿಕ್ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.