ಯುಪಿಐಗೆ 1 ಬಿಲಿಯನ್ ಬಳಕೆದಾರರು
Team Udayavani, Oct 28, 2019, 6:35 PM IST
ಮಣಿಪಾಲ: 3 ವರ್ಷಗಳ ಹಿಂದೆ ಕಾರ್ಯಗತಗೊಂಡ ಭಾರತೀಯ ಮೂಲದ ಆನ್‌ಲೈನ್ ಪಾವತಿ ವ್ಯವಸ್ಥೆ “ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್’ ಯುಪಿಐ ಈಗ 1 ಬಿಲಿಯನ್ ಬಳಕೆದಾರರನ್ನು ಸಂಪಾದಿಸಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಜಾರಿಗೆ ಬಂದ ಈ ವ್ಯವಸ್ಥೆ ಇಂದು 100 ಕೋಟಿ ಬಳಕೆದಾರರನ್ನು ಹೊಂದಿದೆ. ಈ ನೂರು ಕೋಟಿ ಗ್ರಾಹಕರು ಇಂದು ತಮ್ಮ ಹಣಕಾಸು ವ್ಯವಹಾರಗಳನ್ನು ಆನ್‌ಲೈನ್ ಮೂಲಕವೇ ಹೆಚ್ಚಾಗಿ ನಡೆಸುತ್ತಿದ್ದಾರೆ. ಇಂದು ಈ ವ್ಯವಸ್ಥೆ ಸಿಂಗಾಪುರ ಮತ್ತು ಯುಎಇನಲ್ಲಿ ಲಭ್ಯವಿದ್ದು, ಅಲ್ಲಿನ ಗ್ರಾಹಕರು ಇದನ್ನು ಬಳಸಬಹುದಾಗಿದೆ.
ನೋಟು ಅಮಾನೀಕರಣಗೊಳ್ಳುವ ಮೊದಲೇ 2016ರಲ್ಲಿ ಈ ವ್ಯವಸ್ಥೆಯನ್ನು ರಾಷ್ಟ್ರದಲ್ಲಿ ಪರಿಚಯಿಸಲಾಗಿತ್ತು. ಒಂದು ಖಾತೆಯಿಂದ ಮತ್ತೂಂದು ಬ್ಯಾಂಕ್ ಖಾತೆಗೆ ನಗದನ್ನು ಸುಲಭವಾಗಿ ಕಳುಹಿಸಿಕೊಡಲಾಗುತ್ತಿತ್ತು. ನಮ್ಮ ಬ್ಯಾಂಕ್ ಡಿಟೇಲ್‌ಗಳನ್ನು ಹೆಚ್ಚಾಗಿ ಅವಲಂಭಿಸದೇ ಕೇವಲ ಮೊಬೈಲ್ ಸಂಖ್ಯೆ, ಈ ಮೇಲ್ ಮತ್ತು ಕ್ಯೂ ಆರ್ ಕೋಡ್‌ಗಳ ಮೂಲಕ ಪಾವತಿಯನ್ನು ನಡೆಸಲಾಗುತ್ತದೆ. ಬ್ಯಾಂಕುಗಳ ಮೂಲಕ ಹೋಗಿ ನಾವು ಹಣ ವರ್ಗಾಯಿಸುವುದಕ್ಕಿಂತ ಸುಲಭವಾಗಿ ಈ ವ್ಯವಸ್ಥೆಯಲ್ಲಿ ನಾವು ಪೂರೈಸಬಹುದಾಗಿದೆ.
ಕಳೆದ ಅಗಸ್ಟ್ ತಿಂಗಳಲ್ಲಿ 142 ಕೋಟಿ ವ್ಯವಹಾರಗಳು ದಾಖಲಾಗಿವೆ. ಇದರಲ್ಲಿ ಕ್ರೆಡಿಟ್ ಮತ್ತು ಡೆಬಿಟ್‌ಗಳು ಸೇರಿವೆ. ಅಂಗಡಿಗಳು ಸೇರಿದಂತೆ ಶಾಪಿಂಗ್ ಮಾಲ್‌ಗಳಲಿ ಕ್ಯೂಆರ್ ಕೋಡ್‌ಗಳ ಮೂಲಕ ಪಾವತಿಗಳು ನಡೆಯುತ್ತಿದೆ. ಸದ್ಯ 1 ಕೋಟಿ ಇಂತಹ ವ್ಯವಸ್ಥೆಗಳು ಇದ್ದು ಮುಂದಿನ 2 ವರ್ಷಗಳಲ್ಲಿ ಅದನ್ನು 3 ಕೋಟಿಗೆ ವಿಸ್ತರಿಸುವ ಪ್ರಸ್ತಾವನೆ ಇದ್ದು, ವಿವಿಧ ದೇಶಗಳಿಗೂ ಯುಪಿಐ ಅನ್ನು ವಿಸ್ತರಿಸುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.