UPI;1 ಖಾತೆಯಿಂದ ಇಬ್ಬರಿಗೆ ಪಾವತಿ ಅವಕಾಶ!
Team Udayavani, Aug 9, 2024, 6:45 AM IST
ಮುಂಬಯಿ: ಇನ್ನು ಮುಂದೆ ಯುಪಿಐ ಬಳಕೆದಾರರು ತಮ್ಮ ಖಾತೆ ಮೂಲಕ ವಹಿವಾಟು ನಡೆಸುವ ಅಧಿಕಾರವನ್ನು ಮತ್ತೂಬ್ಬರಿಗೆ ನೀಡಲು ಸಾಧ್ಯವಾಗಲಿದೆ. ಅಂದರೆ ಒಂದೇ ಬ್ಯಾಂಕ್ ಖಾತೆಯ ಮೂಲಕ ಇಬ್ಬರು ವ್ಯಕ್ತಿಗಳು ಪಾವತಿಗಳನ್ನು ಮಾಡಬಹುದು.
ಹೌದು, ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) “ಡೆಲಿಗೇಟೆಡ್ ಪೇಮೆಂಟ್ಸ್’ ಸೌಲಭ್ಯ ಪರಿಚಯಿಸಿದೆ. ಈ ಮೂಲಕ ಪ್ರಾಥಮಿಕ ಬಳಕೆ ದಾರರು ತಮ್ಮ ಖಾತೆಯ ಮೂಲಕವೇ ನಿಗದಿತ ಮೊತ್ತದವರೆಗೂ ದ್ವಿತೀಯ ಬಳಕೆದಾರರಿಗೆ ಯುಪಿಐ ವಹಿವಾಟು ನಡೆಸಲು ಅವಕಾಶವಿದೆ. ಈ ವ್ಯವಸ್ಥೆ ಯಲ್ಲಿ ದ್ವಿತೀಯ ಬಳಕೆದಾರರು ಯುಪಿಐ ಸಂಪರ್ಕಿತ ಖಾತೆ ಹೊಂದಿರ ಬೇಕಿಲ್ಲವೆಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ದಾಸ್ ತಿಳಿಸಿದ್ದಾರೆ.ಗ್ರಾಮೀಣ ಭಾಗದ ಜನರು ಪ್ರತ್ಯೇಕ ಖಾತೆ ಹೊಂದಿರುವುದಿಲ್ಲ. ಕುಟುಂಬದ ಒಬ್ಬರ ಹೆಸರಲ್ಲಿ ಬ್ಯಾಂಕ್ ಖಾತೆ ಇರುತ್ತದೆ. ಹಾಗಾಗಿ ಈ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
ಯುಪಿಐ ತೆರಿಗೆ ಪಾವತಿ ಮಿತಿ 5 ಲಕ್ಷ ರೂ.ಗೆ ಏರಿಕೆ
ತೆರಿಗೆ ಪಾವತಿ ಸಂಬಂಧ ಯುಪಿಐ ವಹಿವಾಟು ಮಿತಿಯನ್ನು ಈಗಿನ 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗೆ ಹೆಚ್ಚಿಸಿರುವುದಾಗಿ ಆರ್ಬಿಐ ಹೇಳಿದೆ. ಇನ್ನು, ಸಾಮಾನ್ಯ ವಹಿವಾಟಿಗಿರುವ ಮಿತಿ(1 ಲಕ್ಷ ರೂ.) ಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.