ಮನೆಯಂಗಳದ ಗಿಡ ಕಿತ್ತ ತಪ್ಪಿಗೆ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟ ದುರುಳ!
Team Udayavani, Mar 21, 2021, 9:08 AM IST
ಬೇಗುಸರಾಯ್: ಆಡುತ್ತಿದ್ದ ವೇಳೆ ಮನೆತಯಂಗಳದಲ್ಲಿದ್ದ ಕಿಡವೊಂದನ್ನು ಕಿತ್ತ ತಪ್ಪಿಗೆ 12 ವರ್ಷದ ಬಾಲಕಿಯನ್ನು ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಬೇಗುಸರಾಯ್ ಜಿಲ್ಲೆಯ ಸಿವರಾಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಖಂದರ್ ಯಾದವ್ ಎಂಬಾತನೇ ಬಾಲಕಿಯನ್ನು ಸುಟ್ಟು ಹಾಕಿದ ಆರೋಪಿ.
12 ವರ್ಷದ ಬಾಲಕಿ ಸಿಖಂದರ್ ಯಾದವ್ ನ ಮನೆಯ ಎದುರು ಆಡುತ್ತಿದ್ದಳು. ಈ ವೇಳೆ ಅಕಸ್ಮಾತ್ ಆಗಿ ಗಿಡವೊಂದನ್ನು ಕಿತ್ತಳು. ಇದನ್ನು ಗಮನಿಸಿದ ಸಿಖಂದರ್, ಆತನ ಪತ್ನಿ ಮತ್ತು ಆತನ ಮಗಳು ಬಾಲಕಿಗೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ:ತರಗತಿಗೆ ರಜೆ? : ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ತಜ್ಞರ ಶಿಫಾರಸು
ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಖಂದರ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.
ಇದನ್ನೂ ಓದಿ: ಬಂಗಾಲಿಗರ ಕನಸೇ ಬಂದ್! : ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.