US spy agency tool ಬಳಸಿ ವಿಶ್ವದ ನೂರು ದೇಶಗಳ ಮೇಲೆ ಸೈಬರ್‌ ದಾಳಿ

Team Udayavani, May 13, 2017, 11:25 AM IST

Cyber attack-700.jpg

ಹೊಸದಿಲ್ಲಿ : ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಸಾಫ್ಟ್ ವೇರ್‌ ಕಳವು ಗೈದು ಹ್ಯಾಕರ್‌ಗಳು ನಡೆಸಿರುವ ಸೈಬರ್‌ ದಾಳಿಗೆ ವಿಶ್ವಾದ್ಯಂತದ ನೂರರಷ್ಟು ದೇಶಗಳು ಬಾಧಿತವಾಗಿದ್ದು ಈ ಪೈಕಿ 12ರಷ್ಟು ದೇಶಗಳು ತೀವ್ರವಾಗಿ ಬಾಧಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಸಾಫ್ಟ್ ವೇರ್‌ ಉತ್ಪಾದಿಸುವ ಅವಾಸ್ಟ್‌ ಸಂಸ್ಥೆಯ ಸಂಶೋಧಕರ ಪ್ರಕಾರ ರಶ್ಯ, ಯುಕ್ರೇನ್‌ ಮತ್ತು ತೈವಾನ್‌ ಟಾಪ್‌ ಟಾರ್ಗೆಟ್‌ಗಳಾಗಿದ್ದು ಇವು ಸೇರಿದಂತೆ 99 ದೇಶಗಳ 57,000 ಕಂಪ್ಯೂಟರ್‌ಗಳು ಹ್ಯಾಕರ್‌ಗಳ ಸೈಬರ್‌ ದಾಳಿಗೆ ಗುರಿಯಾಗಿವೆ. 

ಇನ್‌ವಾಯ್‌ಸ್‌ಗಳು, ಜಾಬ್‌ ಆಫ‌ರ್‌ಗಳು, ಸೆಕ್ಯುರಿಟಿ ವಾರ್ನಿಂಗ್‌ಗಳು ಮತ್ತು ಇತರ ಕಾನೂನಾತ್ಮಕ ಕಡತಗಳನ್ನು ಒಳಗೊಂಡಿರುವಂತೆ ತೋರಿ ಬರುವ ಸ್ಪಾಮ್‌ ಇ-ಮೇಲ್‌ಗ‌ಳಿಗೆ ಜೋಡಿಸಲ್ಪಟ್ಟಿರುವ ಕಳ್ಳ ತಂತ್ರಾಂಶಗಳನ್ನು ತೆರೆಯುವಂತೆ ಪ್ರಚೋದಿಸುವ ಮೂಲಕ ಬಳಕೆದಾರರನ್ನು ಖೆಡ್ಡಾಗೆ ಬೀಳಿಸುವ ಹ್ಯಾಕರ್‌ಗಳು ಆ ಮೂಲಕ ಸೈಬರ್‌ ಸುಲಿಗೆ ತಂತ್ರವನ್ನು ಅನುಸರಿಸಿರುವುದಾಗಿ ನಂಬಲಾಗಿದೆ. 

‘300 ರಿಂದ 600 ಡಾಲರ್‌ ಹಣ ತೆತ್ತರೆ ಮಾತ್ರವೇ ನಿಮಗೆ ನಿಮ್ಮ ಕಂಪ್ಯೂಟರ್‌ ಪ್ರವೇಶಿಸುವುದಕ್ಕೆ ಅನುವು ಮಾಡಿಕೊಡುವೆವು’ ಎಂದು ತಿಳಿಸುವ ಎನ್‌ಕ್ರಿಪ್‌ಟೆಡ್‌ ಡಾಟಾ ರಾನ್‌ಸಮ್‌ವೇರ್‌ ಹ್ಯಾಕ್‌ ಮಾಡಲ್ಪಟ್ಟ  ಕಂಪ್ಯೂಟರ್‌ ಪರದೆಗಳ ಮೇಲೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. 

ಭದ್ರತಾ ಸಂಶೋಧಕರು ಗಮನಿಸಿರುವ ಹಾಗೆ ಕೆಲವೊಂದು ಸಂತ್ರಸ್ತರು ಬಿಟ್‌ಕಾಯಿನ್‌ ಡಿಜಿಟಲ್‌ ಕರೆನ್ಸಿ ಮೂಲಕ ಸುಲಿಗೆ ಹಣವನ್ನು ಹ್ಯಾಕರ್‌ಗಳಿಗೆ ಪಾವತಿ ಮಾಡಿದ್ದಾರೆ; ಆದರೆ ಸೈಬರ್‌ ಸುಲಿಗೆಕೋರರಿಗೆ ತಾವು ನಿರ್ದಿಷ್ಟವಾಗಿ ಪಾವತಿಸಿರುವ ಶೇಕಡಾವಾರು ಹಣದ ಪ್ರಮಾಣ ಎಷ್ಟೆಂಬುದು ಆ ಅಮಾಯಕ ಬಳಕೆದಾರರಿಗೆ ಗೊತ್ತಿಲ್ಲ ಎಂದು ವರದಿಯಾಗಿದೆ. 

ಹ್ಯಾಕರ್‌ಗಳ ದಾಳಿಗೆ ಗುರಿಯಾಗಿರುವುದು ಬ್ರಿಟನ್‌ನ ಅತ್ಯಧಿಕ ಕಂಪ್ಯೂಟರ್‌ಗಳು. ತಮ್ಮ ಕಂಪ್ಯೂಟರ್‌ ಜಾಲವನ್ನು ಪ್ರವೇಶಿಸಲು ಸಾಧ್ಯವಾಗದ ಬ್ರಿಟನ್‌ನ ಅಸಂಖ್ಯ ಆಸ್ಪತ್ರೆಗಳು, ಕ್ಲಿನಿಕ್‌ಗಳು ತಮ್ಮಲ್ಲಿಗೆ ಬಂದ ಅನೇಕ ರೋಗಿಗಳನ್ನು ಹಿಂದೆ ಕಳುಹಿಸಿರುವುದಾಗಿ ವರದಿಯಾಗಿದೆ. 

ಅಂತಾರಾಷ್ಟ್ರೀಯ ಸರಕು ಸಾಗಣೆಗಾ ಫೆಡೆಕ್ಸ್‌ ಹೇಳಿರುವ ಪ್ರಕಾರ ಅದರ ಕೆಲವು ವಿಂಡೋಸ್‌ ಕಂಪ್ಯೂಟರ್‌ಗಳು ಹ್ಯಾಕ್‌ ಆಗಿವೆ. ಇದನ್ನು ಸಾಧ್ಯವಿರುವಷ್ಟು ಬೇಗನೆ ಸರಿಪಡಿಸುವ ಕೆಲಸದಲ್ಲಿ ನಾವೀಗ ತೊಡಗಿಕೊಂಡಿದ್ದೇವೆ ಎಂದು ಅದು ಹೇಳಿದೆ. 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.