ಐಎಸ್‌ಐ ನೇಮಕಾತಿಗೆ ಸೆಟಲೈಟ್ ಫೋನ್ ಬಳಕೆ
Team Udayavani, Aug 29, 2019, 5:45 AM IST
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ಬಳಿಕ ಕಂಗೆಟ್ಟಿರುವ ಪಾಕಿಸ್ಥಾನವು ಭಾರತದಾದ್ಯಂತ ಐಎಸ್‌ಐ ಗೂಢಚಾರಿಗಳ ನೇಮಕಾತಿಗೆ ಇಳಿದಿದೆ. ಇದಕ್ಕಾಗಿ ಸೆಟಲೈಟ್ ಫೋನ್ ಬಳಕೆ ಮಾಡುತ್ತಿರುವ ಆಘಾತಕಾರಿ ಸಂಗತಿಯೂ ಬಯಲಾಗಿದೆ.
ವಿಶೇಷ ಸ್ಥಾನಮಾನ ರದ್ದತಿ ಅನಂತರ ಶಾಂತಿಯ ಮಾತು ಬಿಟ್ಟು ಯುದ್ಧದ ಮೇಲೆ ಕಣ್ಣಿಟ್ಟಿರುವ ಪಾಕ್ ಭಾರತದಲ್ಲಿ ಹಿಂಸಾಚಾರ ನಡೆಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಸಂಚಿನ ರೂಪ ದಲ್ಲೇ ಐಎಸ್‌ಐ ಏಜೆಂಟರ ನೇಮಕಾತಿ ನಡೆಯುತ್ತಿದೆ.
ಆಂಗ್ಲ ಸುದ್ದಿವಾಹಿನಿ “ಇಂಡಿಯಾ ಟುಡೆ’ ನಡೆಸಿರುವ ಸ್ಟಿಂಗ್ ಆಪರೇಷನ್‌ನಲ್ಲಿ ಐಎಸ್‌ಐಗೆ ನೇಮಕಾತಿ ಮಾಡುವ ಜಮ್ಮು ಮತ್ತು ಕಾಶ್ಮೀರ ಮೂಲದ ನಾಜೀರ್ ಅಹ್ಮದ್ ಭಟ್ ಎಂಬವ ನೇಮಕ ವಿಧಾನಗಳ ಬಗ್ಗೆ ಬಾಯಿಬಿಟ್ಟಿದ್ದಾನೆ.
ಬಹುದೇಶಗಳ ಬಳಕೆ
ಐಎಸ್‌ಐ ಏಜೆಂಟರ ನೇಮಕಾತಿಗಾಗಿ ಪಾಕಿ ಸ್ಥಾನ ಕೇವಲ ಭಾರತವೊಂದನ್ನೇ ಬಳಕೆ ಮಾಡಿ ಕೊಳ್ಳುವುದಿಲ್ಲ. ನೇಪಾಲ, ಶ್ರೀಲಂಕಾ, ದುಬಾೖ, ಮಾಲೆಯಲ್ಲಿ ಇದಕ್ಕಾಗಿ ತಯಾರಿ ನಡೆಸಲಾಗುತ್ತದೆ. ಈ ಎಲ್ಲ ದೇಶಗಳಲ್ಲಿರುವ ಪಾಕಿಸ್ಥಾನ ಹೈಕಮಿಷನ್‌ನಲ್ಲೇ ಐಎಸ್‌ಐ ಏಜೆಂಟರ ಸಂದರ್ಶನಕ್ಕೆ ಏರ್ಪಾಡು ಮಾಡಿ ಕೊಳ್ಳಲಾಗುತ್ತದೆ. ಪಾಕ್ ಸೇನೆಯ ಬ್ರಿಗೇಡಿ ಯರ್ ಮತ್ತು ಮೇಜರ್‌ಗಳೇ ಇದರಲ್ಲಿ ಭಾಗಿ ಯಾಗುತ್ತಾರೆ ಎಂಬ ಮಾಹಿತಿಯನ್ನೂ ಹೇಳಿದ್ದಾನೆ.
ಕಾಶ್ಮೀರದ ನಾಯಕರೂ ಭಾಗಿ
ಐಎಸ್‌ಐ ಏಜೆಂಟರ ನೇಮಕ ಪ್ರಕ್ರಿಯೆಯಲ್ಲಿ ತಾನೂ ಭಾಗಿಯಾಗಿದ್ದಾಗಿ ಹೇಳಿರುವ ನಾಜೀರ್, ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿ ನಾಯಕರು ಮತ್ತು ಕೆಲವು ರಾಜಕೀಯ ನೇತಾರರೂ ಸೇರಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದಾನೆ.
ಸೆಟಲೈಟ್ ಫೋನ್ ಬಳಕೆ
ಗೂಢಚಾರಿಗಳ ನೇಮಕ ಮಾಡುವವರ ಜತೆಗೆ ಸೆಟಲೈಟ್ ಪೋನ್‌ನಲ್ಲಿ ಮಾತ್ರ ಮಾತನಾಡುವುದಾಗಿ ನಾಜೀರ್ ಹೇಳಿದ್ದಾನೆ.
ಪಾಕ್ ಹೈಕಮಿಷನರ್ ಕೂಡ ಭಾಗಿ
ಭಾರತದಲ್ಲಿ ಮೇಜರ್ ಅಬ್ದುಲ್ಲ ಎಂಬಾತ ನೇಮಕಾತಿ ಪ್ರಕ್ರಿಯೆ ಮಾಡು ತ್ತಿದ್ದಾನೆ. ಕೆಲವೊಮ್ಮೆ ಇಸ್ಲಾಮಾಬಾದ್, ಕಾಠ್ಮಂಡು, ಮಾಲೆ, ದುಬಾೖಗೆ ಹೋಗ ಬೇಕಾಗು ತ್ತದೆ. ಪಾಕ್ ಕಡೆಯಿಂದ ನಕಲಿ ಪಾಸ್‌ಪೋರ್ಟ್ ಸಿಗುತ್ತದೆ. ಇಸ್ಲಾಮಾಬಾದ್ ಅಥವಾ ರಾವಲ್ಪಿಂಡಿಗೆ ಹೋದವರಿಗೆ ದುಬಾೖನ ಪಾಸ್‌ಪೋರ್ಟ್ ನೀಡಲಾಗುತ್ತದೆ. ದುಬಾೖನಿಂದ ನೇರ ಭಾರತಕ್ಕೆ ವಾಪಸ್ ಆಗುತ್ತಾರೆ. ಪಾಕ್‌ನ ಅಧಿಕಾರಿಗಳ ಜತೆ ಮಾತ ನಾಡಲು ದಿಲ್ಲಿ ಉತ್ತಮ ಸ್ಥಳ. ರಾಯಭಾರ ಕಚೇರಿಯ ಹೈ ಕಮಿಷನರ್ ಕೂಡ ಸಭೆಗೆ ಬರುತ್ತಾರೆ. ಅವರೇ ಈ ನೇಮಕಾತಿಗಳಿಗೆ ಮುಖ್ಯ ವ್ಯಕ್ತಿ ಎಂದು ಭಟ್ ಹೇಳಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.