ಇಟಾ: ಮದುವೆ ದಿಬ್ಬಣದ ಲಾರಿ ಕಾಲುವೆಗೆ ಉರುಳಿ 14 ಮಂದಿ ದಾರುಣ ಸಾವು
Team Udayavani, May 5, 2017, 2:27 PM IST
ಇಟಾ : ಮದುವೆಯ ದಿಬ್ಬಣ ಹೊತ್ತೂಯ್ಯುತ್ತಿದ್ದ ಲಾರಿಯೊಂದು ಕಾಲುವೆಗೆ ಉರುಳಿ 14 ಮಂದಿ ದಾರುಣವಾಗಿ ಸಾವನ್ನಪ್ಪಿ, 24 ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ಶುಕ್ರವಾರ ಬೆಳಗ್ಗೆ ಉತ್ತರಪ್ರದೇಶದ ಇಟಾದ ಸರೇನಿಮ್ ಎಂಬಲ್ಲಿ ನಡೆದಿದೆ.
ಮೃತರು ಶಂಶಾಬಾದ್ ಪ್ರದೇಶದವರಾಗಿದ್ದು, ಸಾಕ್ರುಲಿ ಎಂಬಲ್ಲಿ ವಿವಾಹ ಸಮಾರಂಭ ಮುಗಿಸಿ ದಿಬ್ಬಣಿಗರಾಗಿ ಬರುತ್ತಿದ್ದರು ಎಂದು ತಿಳಿದು ಬಂದಿದೆ.
ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಕೆಲವರನ್ನು ರಕ್ಷಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ತಿಳಿಸಿದ 2 ಗಂಟೆಗಳ ನಂತರ ಸ್ಥಳಕ್ಕಾಗಮಿಸಿದ ಜಲೇಸರ್ ಠಾಣೆಯ ಪೊಲೀಸರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಆಗಮಿಸುವಷ್ಟರಲ್ಲಿ ಸ್ಥಳೀಯರು ರಕ್ಷಣಾ ಕಾರ್ಯ ಮುಗಿಸಿದ್ದರು.
ಚಾಲಕ ನಿಯಂತ್ರಣಕಳೆದುಕೊಂಡು ಲಾರಿ ಚಲಾಯಿಸಿದ್ದೆ ದುರಂತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.