ಜುಲೈ 31ರ ತನಕ ಸೋಂಕು ತಡೆ ಅಭಿಯಾನ : ಉತ್ತರ ಪ್ರದೇಶ ಸರ್ಕಾರದ ನೂತನ ಕ್ರಮ
50 ಲಕ್ಷ ಮಕ್ಕಳಿಗೆ ಹಾಗೂ 71 ಲಕ್ಷ ವಯಸ್ಕರಿಗೆ ಉಚಿತ ಔಷಧಿ ಕಿಟ್ : ಯೋಗಿ ಸರ್ಕಾರ
Team Udayavani, Jul 1, 2021, 4:22 PM IST
ನವ ದೆಹಲಿ : ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣವನ್ನು ತಡೆಗಟ್ಟುವ ಉದ್ದೇಶದಿಂದ ಜುಲೈ 31 ರ ತನಕ ರಾಜ್ಯವ್ಯಾಪಿ ಸಾಂಕ್ರಾಮಿಕ ತಡೆ ಅಭಿಯಾನವನ್ನು ಆರಂಬಿಸಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಈ ಅಭಿಯಾನದ ಮೂಲಕ ರಾಜ್ಯವ್ಯಾಪಿ ಕೋವಿಡ್ ಸೋಂಕಿನ ಬಗ್ಗೆ ಅರಿವು ಮತ್ತು ಮುಂಜಾಗ್ರತೆಯನ್ನು ಒಳಗೊಂಡು ಸೋಂಕು ನಿರೋಧಕ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಶ್ರಮಿಸಲಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ : ಲಹರಿ ಸಂಸ್ಥೆ ತೆಕ್ಕೆಗೆ ‘ಕೆಜಿಎಫ್ ಚಾಪ್ಟರ್ -2’ ಆಡಿಯೋ ರೈಟ್ಸ್
ಇನ್ನು, ಮೆನಿಂಜೈಟಿಸ್ (ಮೆದುಳಿನ ಉರಿಯೂತ) ನನ್ನು ನಿಯಂತ್ರಿಸಲು ಸರ್ಕಾರದ ‘ದಸ್ತಕ್’ಅಭಿಯಾನವು ಜುಲೈ 12 ರಿಂದ 25 ರವರೆಗೆ ನಡೆಯಸಲಾಗುತ್ತದೆ. ಆಶಾ ಕಾರ್ಯ ಕರ್ತೆಯರು ಹಾಗೂ ಅಂಗನವಾಡಿ ಕಾರ್ಯ ಕರ್ತೆಯರ ಮೂಲಕ ಈ ಅಭಿಯಾನವು ನಡೆಯಲಿದೆ. ಮನೆ ಮನೆಗೆ ತೆರಳಿ ರಾಜ್ಯದ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದ ಈ ಅಭಿಯಾನದ್ದಾಗಿದೆ ಎಂದು ತಿಳಿಸಿದೆ.
50 ಲಕ್ಷ ಮಕ್ಕಳಿಗೆ ಹಾಗೂ 71 ಲಕ್ಷ ವಯಸ್ಕರಿಗೆ ಉಚಿತ ಔಷಧಿ ಕಿಟ್..!
ಕೋವಿಡ್ 19 ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಮಕ್ಕಳಿಗೆ ಉಚಿತ ಔಷಧಿ ಕಿಟ್ ಗಳನ್ನು ನೀಡುವುದಾಗಿ ಸರ್ಕಾರ ಹೇಳಿದೆ. 50 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕಿಟ್ ಗಳನ್ನು ನೀಡಲಾಗುವುದು. 71 ಲಕ್ಷ ವೈದ್ಯಕೀಯ ಕಿಟ್ ಗಳನ್ನು ವಯಸ್ಕರಿಗೆ ಉಚಿತವಾಗಿ ನೀಡಲಾಗುವುದು ಎಂದು ಅದು ತಿಳಿಸಿದೆ.
ನಗರಾಭಿವೃದ್ಧಿ, ಪಂಚಾಯತಿ ರಾಜ್ ಮತ್ತು ಗ್ರಾಮ ಅಭಿವೃದ್ಧಿ, ಪಶುಸಂಗೋಪನೆ, ಶಿಕ್ಷಣ, ಕೃಷಿ, ವಿಕಲಚೇತನರ ಸಬಲೀಕರಣ, ನೀರಾವರಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು, ವೈದ್ಯಕೀಯ ಮತ್ತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಒಂದು ತಿಂಗಳ ಅಭಿಯಾನಕ್ಕೆ ವಿಶೇಷ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಿವೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಸುಮಾರು 18,000 ದಿಂದ ಸುಮಾರು 30,000 ಕ್ಕೆ ಹೆಚ್ಚಿಸಲಾಗುವುದು.
ಪ್ರೌಢ ಶಿಕ್ಷಣ ಇಲಾಖೆಯು ಜುಲೈ 31 ರವರೆಗೆ ಸಾಂಕ್ರಾಮಿಕ ರೋಗ ಜಾಗೃತಿ ಅಭಿಯಾನವನ್ನು ಸಹ ನಡೆಸಲಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಹೊಂದಿರುವ ವಾಟ್ಸಾಪ್ ಗ್ರೂಪ್ ಗಳ ಮೂಲಕ ಎಲ್ಲಾ ಸಂಬಂಧಿತ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ಜಾಗೃತಿ ಮೂಡಿಸಲು ಪ್ರಬಂಧ, ಚಿತ್ರಕಲೆ, ಪೋಸ್ಟರ್, ಘೋಷಣೆ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದೆ.
ಡೆಲ್ಟಾ ಪ್ಲಸ್’ರೂಪಾಂತರಿಯ ಬಗ್ಗೆ ಲಕ್ಷ್ಯ
‘ಡೆಲ್ಟಾ ಪ್ಲಸ್’ ರೂಪಾಂತರಿ ಸೋಂಕು ರಾಜ್ಯದಲ್ಲಿ ಈವರೆಗೆ ಇನ್ನೂ ಒಂದು ಪ್ರಕರಣವೂ ಪತ್ತೆಯಾಗಿಲ್ಲವಾದರೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಇನ್ನು, ಕಳೆದ 24 ಗಂಟೆಗಳಲ್ಲಿ 2,67,658 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 163 ಸಕಾರಾತ್ಮಕ ಪ್ರಕರಣಗಳು ಕಂಡುಬಂದಿದ್ದು, 260 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳು 3000 ರಿಂದ 2687 ಕ್ಕೆ ಇಳಿದಿವೆ. ಚೇತರಿಕೆ ಪ್ರಮಾಣವು 98.5 ಪ್ರತಿಶತಕ್ಕೆ ಏರಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ : 7000 ಕೋಟಿಗೂ ಅಧಿಕ ನಷ್ಟ ಅನುಭವಿಸಿದ ವೊಡಾಫೋನ್ ಐಡಿಯಾ..!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.