9 ಸೆಕೆಂಡಲ್ಲಿ ನೆಲಸಮವಾಗಲಿದೆ ಅವಳಿ ಟವರ್!
4 ಟನ್ ಸ್ಫೋಟಕ ಬಳಸಿ 40 ಮಹಡಿಯ ಕಟ್ಟಡ ಧ್ವಂಸಕ್ಕೆ ನಿರ್ಧಾರ
Team Udayavani, Mar 16, 2022, 7:40 AM IST
ನೋಯ್ಡಾ:2,500 ಕೆಜಿ ಸ್ಫೋಟಕ, 9 ಸೆಕೆಂಡು, 40 ಅಂತಸ್ತಿನ ಅವಳಿ ಕಟ್ಟಡ ನೆಲಸಮ…
ಉತ್ತರಪ್ರದೇಶದ ನೋಯ್ಡಾ ವಲಯದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ 100 ಮೀಟರ್ ಎತ್ತರದ ಸೂಪರ್‌ಟೆಕ್ ಅವಳಿ ಟವರ್‌ಗಳನ್ನು ಕೇವಲ 9 ಸೆಕೆಂಡುಗಳಲ್ಲಿ ಧ್ವಂಸಗೊಳಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ನೋಯ್ಡಾ ಪ್ರಾಧಿಕಾರ ಮಾಹಿತಿ ನೀಡಿದೆ.
ಯುಪಿ ಅಪಾರ್ಟ್‌ಮೆಂಟ್ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಈ ಅವಳಿ ಟವರ್‌ಗಳನ್ನು ನಿರ್ಮಿಸಲಾಗಿತ್ತು ಎಂಬ ಆರೋಪದ ಮೇರೆಗೆ, ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಸುಪ್ರೀಂ ಕೋರ್ಟ್ 2021ರ ಆ.31ರಂದು ತೀರ್ಪು ನೀಡಿತ್ತು.
ಅದರಂತೆ, ಮೇ 22ರ ಮಧ್ಯಾಹ್ನ 2.30ಕ್ಕೆ ಈ ಪ್ರಕ್ರಿಯೆ ನಡೆಯಲಿದೆ. ಕಟ್ಟಡ ನೆಲಸಮ ಪ್ರಕ್ರಿಯೆಯ ವೆಚ್ಚವನ್ನು ಸೂಪರ್‌ಟೆಕ್ ಕಂಪನಿಯೇ ಭರಿಸಲಿದೆ.
ಇದನ್ನೂ ಓದಿ:ಆಧುನಿಕತೆ ಬಳಸಿ ಕಲೆಗೆ ರೂಪ ನೀಡಿದ ಕಲಾಕಾರರು;ಬನಹಟ್ಟಿಯಲ್ಲಿ ವೈವಿದ್ಯಮಯ ಕಾಮಣ್ಣನ ಮೂರ್ತಿಗಳು
ಏನೇನು ಪ್ರಕ್ರಿಯೆ?
ಈ ಟವರ್‌ಗಳ ಸುತ್ತಮುತ್ತ ವಾಸಿಸುವ ಸುಮಾರು 1500 ಕುಟುಂಬಗಳನ್ನು 5 ಗಂಟೆಗಳ ಕಾಲ ಸ್ಥಳಾಂತರಿಸ ಲಾಗುತ್ತದೆ. 1 ಗಂಟೆ ಕಾಲ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯನ್ನು ಮುಚ್ಚಲಾಗುತ್ತದೆ. ಭಾರೀ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅವಳಿ ಟವರ್‌ಗಳಿಂದ 9 ಮೀ. ದೂರದಲ್ಲಿರುವ 12 ಅಂತಸ್ತಿನ ಕಟ್ಟಡವನ್ನು ರಕ್ಷಿಸಲು ಉಕ್ಕಿನ ಶಿಪ್ಪಿಂಗ್ ಕಂಟೈನರ್‌ಗಳನ್ನು ಇಡಲಾಗುತ್ತದೆ. ಪಕ್ಕದ 4 ಕಟ್ಟಡಗಳ ರಕ್ಷಣೆಗಾಗಿ ಜಿಯೋಟೆಕ್ಸ್‌ಟೈಲ್ ಫ್ಯಾಬ್ರಿಕ್‌ನ ಪರದೆ ಹಾಕಲಾಗುತ್ತದೆ. ಧ್ವಂಸಗೊಂಡಾಗ ಏಳುವ ದಟ್ಟ ಧೂಳುಮಿಶ್ರಿತ ಹೊಗೆ ಮಾಯವಾಗಲು ಸುಮಾರು 10 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಟವರ್‌ಗಳ ಎತ್ತರ – ಮೊದಲ ಟವರ್ 103 ಮೀಟರ್, ಎರಡನೇ ಟವರ್ 97 ಮೀ.
ಒಟ್ಟು ವಿಸ್ತೀರ್ಣ – 7.5 ಲಕ್ಷ ಚದರ ಅಡಿ
ನೆಲಸಮಗೊಳಿಸಲು ಬಳಸಲಾಗುವ ಸ್ಫೋಟಕ – 2500 ಕೆಜಿ
ನೆಲಸಮಕ್ಕೆ ತಗಲುವ ಅವಧಿ – 9 ಸೆಕೆಂಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.