
Uttarakhand; ಲಿವ್ ಇನ್ ಜೋಡಿ ಬಗ್ಗೆ ಹೆತ್ತವರಿಗೂ ಮಾಹಿತಿ!
18-21 ವಯಸ್ಸಿನ ಜೋಡಿ ವಿಚಾರ ಬಹಿರಂಗ
Team Udayavani, Jul 14, 2024, 12:00 AM IST

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ನೇಮಿಸಿರುವ 9 ಮಂದಿಯ ಸಮಿತಿಯು ಸಹ ಜೀವನ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿ ಹಲವು ನಿಯಮಗಳನ್ನು ರೂಪಿಸಿದೆ.
ಹೊಸ ಸಂಹಿತೆಯಲ್ಲಿ ಲಿವ್ ಇನ್ ಸಂಬಂಧದಲ್ಲಿರುವವರು ತಮ್ಮ ಸಂಬಂಧವನ್ನು ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ನೋಂದಣಿ ವೇಳೆ ಆ ಜೋಡಿ ನೀಡುವ ಎಲ್ಲ ಮಾಹಿತಿಗಳನ್ನೂ ಗೌಪ್ಯವಾಗಿಡಲಾಗುವುದು ಎಂದು ಸಮಿತಿ ಹೇಳಿದೆ. ಆದರೆ ಲಿವ್ ಇನ್ ಸಂಬಂಧದಲ್ಲಿರುವ ಜೋಡಿಯು 18-21ರ ವಯೋಮಾನದವರಾಗಿದ್ದರೆ, ಅವರ ಬಗೆಗಿನ ಮಾಹಿತಿಯನ್ನು ಅವರ ಹೆತ್ತವರಿಗೆ ನೀಡಲಾಗುವುದು ಎಂದೂ ಸಮಿತಿ ಹೇಳಿದೆ. ಈ ಜೋಡಿ ಇನ್ನೂ ನಿಗದಿತ ಪ್ರಬುದ್ಧ ವಯೋಮಾನಕ್ಕೆ ಬಾರದೇ ಇರುವುದರಿಂದ, ಅವರ ಸುರಕ್ಷೆಯ ದೃಷ್ಟಿಯಿಂದ ಪೋಷಕರಿಗೆ ವಿಚಾರ ತಿಳಿಸಬೇಕಾಗುತ್ತದೆ ಎಂದಿದೆ.
ಅಕ್ಟೋಬರ್‌ನಿಂದ ಕಾಯ್ದೆ ಜಾರಿಯಾಗಲಿದ್ದು, ಅದಕ್ಕೆ ಸಂಬಂಧಿಸಿದ ನಿಯಮ, ಪ್ರಕ್ರಿಯೆ, ಇತರ ಸಂಗತಿ ರೂಪಿಸುವ ಅಧಿಕಾರ ಈ ಸಮಿತಿಗೆ ನೀಡಲಾಗಿತ್ತು. ಶುಕ್ರವಾರ ಸಮಿತಿ ವರದಿ ಯನ್ನು ಅಪ್‌ಲೋಡ್ ಮಾಡಲಾಗಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.