‘ಧಾರ್ಮಿಕ ನೆಲೆ’ಯಲ್ಲಿ ಮೋದಿ ಫೋಟೋ ಪ್ರದರ್ಶಿಸದ ಮದ್ರಸಗಳು
Team Udayavani, Jan 5, 2018, 12:36 PM IST
ಡೆಹರಾಡೂನ್ : 2022ರೊಳಗೆ ನವಭಾರತ ನಿರ್ಮಾಣದ ಕನಸನ್ನು ನನಸುಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು, ಹುರುಪು ಮತ್ತು ಪೇರಣೆಯನ್ನು ತುಂಬುವುದಕ್ಕಾಗಿ ವಿದ್ಯಾಲಯಗಳಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಹಾಕಬೇಕೆಂಬ ರಾಜ್ಯ ಸರಕಾರದ ಆದೇಶವನ್ನು ಉತ್ತರಾಖಂಡದ ಡೆಹರಾಡೂನ್ನ ಹಲವು ಮದ್ರಸಗಳು ಸಾರಾಸಗಟು ಕಡೆಗಣಿಸಿವೆ.
ಮದ್ರಸಗಳಲ್ಲಿ ಯಾವುದೇ ವ್ಯಕ್ತಿಯ ಫೋಟೋ ಹಾಕುವುದು ಧಾರ್ಮಿಕ ನೆಲೆಯಲ್ಲಿ ಇಸ್ಲಾಂ ವಿರೋಧಿಯಾಗಿರುವುದರಿಂದ ಪ್ರಧಾನಿ ಮೋದಿ ಅವರ ಫೋಟೋ ಹಾಕಲು ಸಾಧ್ಯವಿಲ್ಲ ಎಂದು ಈ ಮದ್ರಸಗಳು ಹೇಳಿವೆ.
ಉತ್ತರಾಖಂಡ ಮದ್ರಸ ಶಿಕ್ಷಣ ಮಂಡಳಿಯ (ಯುಎಂಇಬಿ) ಪದಾಧಿಕಾರಿಗಳು ರಾಜ್ಯದಲ್ಲಿ ಮದ್ರಸ ವಿದ್ಯಾಲಯಗಳ ನಿಯಂತ್ರಣ ಹೊಂದಿದ್ದು ಈಚೆಗೆ ನಡೆಸಿದ ಸಮಾಲೋಚನ ಸಭೆಯಲ್ಲಿ ಮೋದಿ ಫೋಟೋವನ್ನು ತಮ್ಮ ಮದ್ರಸಗಳಲ್ಲಿ ಹಾಕಲು “ಧಾರ್ಮಿಕ ನೆಲೆ’ಯಲ್ಲಿ ಅಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂದರು.
ಪ್ರಧಾನಿಯವರ ಫೋಟೋವನ್ನು ಮದ್ರಸಗಳಲ್ಲಿ ಹಾಕಬೇಕೆಂಬ ರಾಜ್ಯ ಸರಕಾರದ ಆದೇಶವು ಶಿಕ್ಷಣಾಲಯಗಳಿಗೆ ರಾಜಕೀಯ ಬಣ್ಣ ನೀಡುವ ಉದ್ದೇಶ ಹೊಂದಿರುವಂತಿದೆ ಎಂದು ಮದ್ರಸ ಶಿಕ್ಷಕರೊಬ್ಬರು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.