ಚಮೋಲಿ ದುರ್ಘಟನೆ : ಮೃತರ ಸಂಖ್ಯೆ 56ಕ್ಕೆ ಏರಿಕೆ
ಕಳೆದ 24 ಗಂಟೆಗಳಲ್ಲಿ 18 ಮೃತದೇಹಗಳನ್ನು ಎಸ್ ಡಿ ಆರ್ ಎಫ್ (State Disaster Response Force) ಹೊರ ತೆಗೆದಿದೆ
Team Udayavani, Feb 15, 2021, 7:04 PM IST
ಚಮೋಲಿ : ಉತ್ತರಾಖಂಡದ ಚಮೋಲಿಯ ದುರ್ಘಟನೆಗೆ ಸಂಬಂಧಪಟ್ಟ ಪತ್ತೆ ಕಾರ್ಯಾಚರಣೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ 18 ಮೃತದೇಹಗಳನ್ನು ಎಸ್ ಡಿ ಆರ್ ಎಫ್ (State Disaster Response Force) ಹೊರ ತೆಗೆದಿದೆ.
ತಪೋವನ್ ಬಳಿಯ ಸುರಂಗದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯದ ಸಂದರ್ಭದಲ್ಲಿ ಎಸ್ ಡಿ ಆರ್ ಎಫ್ 18 ಮೃತ ದೇಹಗಳನ್ನು ಹೊರತೆಗೆದಿದೆ. ಆ ಮೂಲಕ ಹಿಮ ನದಿ ಸ್ಫೋಟದ ಕಾರಣದಿಂದ ಉಂಟಾದ ಪ್ರವಾಹದ ಸೃಷ್ಟಿಯಿಂದಾಗಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಓದಿ : ರಮೇಶ್ ಜಾರಕಿಹೊಳಿ ಎರಡು ದೋಣಿಯಲ್ಲಿ ಕಾಲಿಟ್ಟಿರುವಂತಿದೆ : ಲಕ್ಷ್ಮಿ ಹೆಬ್ಬಾಳಕರ್ ವ್ಯಂಗ್ಯ
“ರಕ್ಷಾಣಾ ಪಡೆಯವರು ಸುರಂಗದಲ್ಲಿ ಪತ್ತೆ ಕಾರ್ಯವನ್ನು ಮುಂದುವರಿಸಿದ್ದಾರೆ. ಪ್ರತಿಕೂಲ ವಾತಾವರಣವಿದ್ದಾಗ ನಾವು ಭರವಸೆಯನ್ನು ಇಟ್ಟುಕೊಳ್ಳಬಹುದು” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ನಾಪತ್ತೆಯಾದವರ ಕುಟುಂಬದವರು ಸುರಂಗದ ಬಳಿ ಜಾಗರಣೆ ಹೂಡಿದ್ದಾರೆ. ರಕ್ಷಣಾ ಪಡೆಯವರು ಸುರಂಗದಿಂದ ದೇಹಗಳನ್ನು ಹೊರತರುವುದನ್ನೇ ಕಾದು ನೊಂದು ಕೂತಿದ್ದಾರೆ. ಕೆಲವರು ನಿರಾಶೆಯಿಂದ ಮರಳಿ ಮನೆ ಕಡೆ ಹಿಂದಿರುಗಲಾರಂಭಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇನ್ನು, “ರಕ್ಷಣಾ ಪಡೆಗಳ ಪತ್ತೆ ಕಾರ್ಯದ ಬೆಳವಣಿಗೆಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಸ್ಥಳಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸುವ ಕೆಲಸವೂ ಆಗುತ್ತಿದೆ. ಭಯ ಪಡುವ ಅಗತ್ಯವಿಲ್ಲ” ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
ಓದಿ : #DishaRavi ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ… : ಸಿದ್ದರಾಮಯ್ಯ ಟ್ವೀಟಾಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.