Tunnel ಎರಡು ಕಡೆಯಿಂದ ಕೊರೆಯುವ ಕೆಲಸ; ಕೈಯಿಂದಲೇ ಸುರಂಗ ಕೊರೆಯಲು 6 ಮಂದಿಯ ತಂಡ ಆಗಮನ
ಬೆಟ್ಟದ ಮೇಲ್ಭಾಗದಿಂದಲೂ ಮುಂದುವರಿದ ಡ್ರಿಲ್ಲಿಂಗ್
Team Udayavani, Nov 27, 2023, 8:52 PM IST
ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಹರಸಾಹಸ ಮುಂದುವರಿದಿದೆ. ಅಂತಾರಾಷ್ಟ್ರೀಯ ಹಾಗೂ ದೇಶೀಯ ತಜ್ಞರ ತಂಡವು 6 ಕಾರ್ಯತಂತ್ರಗಳನ್ನು ರೂಪಿಸಿದ್ದು, ಈ ಪೈಕಿ ಎರಡನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಬೆಟ್ಟದ ಮೇಲಿನಿಂದ ಡ್ರಿಲ್ಲಿಂಗ್ ನಡೆಸುವುದರ ಜೊತೆಗೆ, ಕೈಯಿಂದ ಅಗೆಯುವ ಕೆಲಸವೂ ಆರಂಭವಾಗಿದೆ.
ಕಾರ್ಮಿಕರಿಗೆ ಹೊರಬರುವ ಮಾರ್ಗವನ್ನು ನಿರ್ಮಿಸಬೇಕೆಂದರೆ ಬೆಟ್ಟದ ಮೇಲಿನಿಂದ ಲಂಬವಾಗಿ ಒಟ್ಟು 86 ಮೀಟರ್(1.2 ಮೀಟರ್ ವ್ಯಾಸದ ಪೈಪ್ ) ಕೊರೆಯಬೇಕಾಗುತ್ತದೆ. ಭಾನುವಾರವೇ ಈ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರ ಸಂಜೆ ವೇಳೆಗೆ 31 ಮೀ.ಗಳಷ್ಟು ಕೊರೆಯಲಾಗಿದೆ.
ಇದೇ ವೇಳೆ, ಪ್ಲಾಸ್ಮಾ ಕಟ್ಟರ್ ಮೂಲಕ ಒಳಗೆ ಸಿಲುಕಿದ್ದ ಆಗರ್ ಯಂತ್ರದ ಭಾಗಗಳನ್ನು ಹೊರತೆಗೆಯಲಾಗಿದೆ. ಈ ಸ್ಥಳದಲ್ಲಿ ಅಡ್ಡಲಾಗಿ ಕೊರೆಯುವ ಕೆಲಸವನ್ನು ಮಾಡಲು ರ್ಯಾಟ್-ಹೋಲ್ ಮೈನರ್ (ಒಬ್ಬ ವ್ಯಕ್ತಿಗಷ್ಟೇ ಹೋಗಿ-ಬರಲು ಸಾಧ್ಯವಾಗುವಂಥ ಕಿರಿದಾದ ಗುಂಡಿಗಳನ್ನು ಅಗೆಯುವವರು)ಗಳ ತಂಡವನ್ನು ಕರೆಸಿಕೊಳ್ಳಲಾಗಿದೆ. ಮತ್ತೂಂದೆಡೆ ಸುರಂಗದ ಮತ್ತೂಂದು ತುದಿಯಿಂದ ಡ್ರಿಲ್ಲಿಂಗ್ ಆರಂಭಿಸುವ ಚಿಂತನೆಯನ್ನೂ ಮಾಡಲಾಗಿದೆ.
ಕೈಯಿಂದ ಕೊರೆತ ಹೇಗೆ?
6 ಮಂದಿ ರ್ಯಾಟ್ ಹೋಲ್ ಮೈನರ್‌ಗಳ ತಂಡವು ಸೋಮವಾರ ಸ್ಥಳಕ್ಕೆ ಆಗಮಿಸಿದೆ. ಈ ತಂಡದ ಪ್ರತಿ ಸದಸ್ಯನು ಒಂದು ಬಾರಿಗೆ ಒಬ್ಬನಂತೆ ಸುರಂಗದ ಅವಶೇಷಗಳ ಒಳಗೆ ತೂರಿಸಲಾಗಿರುವ 800 ಎಂಎಂ ವ್ಯಾಸದ ಪೈಪ್‌ನೊಳಕ್ಕೆ ಹೋಗಿ, ಸಲಿಕೆಯ ಮೂಲಕ ಕೈಯಿಂದಲೇ ಅಗೆಯಲಿದ್ದಾರೆ. ಇದು ಅತ್ಯಂತ ನಿಧಾನ ಹಾಗೂ ಕಷ್ಟಕರ ಕೆಲಸವಾಗಿದ್ದರೂ, ಕಾರ್ಮಿಕರನ್ನು ತಲುಪಲು ಕೇವಲ 10-12 ಮೀಟರ್ ದೂರವಿರುವ ಕಾರಣ, ಇದುವೇ ಸದ್ಯಕ್ಕಿರುವ ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸಿದ್ದಾರೆ.
ಮಾನಸಿಕವಾಗಿ ಕುಗ್ಗದಂತೆ ಆಪ್ತ ಸಮಾಲೋಚನೆ
ಸುರಂಗ ಕೊರೆಯುವ ಪ್ರಕ್ರಿಯೆಯ ಮಧ್ಯೆಯೇ ಒಳಗೆ ಸಿಲುಕಿರುವ 41 ಕಾರ್ಮಿಕರು ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳುವ ಕೆಲಸವನ್ನೂ ಮಾಡಲಾಗುತ್ತಿದೆ. ವೈದ್ಯರು, ಮನಶಾÏಸ್ತ್ರಜ್ಞರು ಸೇರಿದಂತೆ ತಜ್ಞರ ತಂಡವು ದಿನಕ್ಕೆ 2 ಬಾರಿ(ಬೆಳಗ್ಗೆ 9ರಿಂದ 11 ಮತ್ತು ಸಂಜೆ 5ರಿಂದ 8) ಕಾರ್ಮಿಕರೊಂದಿಗೆ ಮಾತುಕತೆ ನಡೆಸುತ್ತಿದೆ. ಯಾವ ಕಾರಣಕ್ಕೂ ಧೈರ್ಯಗೆಡದಂತೆ, “ನಾವು ನಿಮ್ಮೊಂದಿಗಿದ್ದೇವೆ’ ಎಂದು ಹುರಿದುಂಬಿಸಲಾಗುತ್ತಿದೆ. ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಲೂ ಅವಕಾಶ ಕಲ್ಪಿಸಲಾಗುತ್ತಿದೆ. ಕಾರ್ಮಿಕರ ಮನದಲ್ಲಿ ಭಯ, ಆತಂಕ, ನಕಾರಾತ್ಮಕ ಯೋಚನೆಗಳು ಬಾರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ತಂಡದ ನೋಡಲ್ ಅಧಿಕಾರಿ ಡಾ. ಬಿಮಲೇಶ್ ಜೋಷಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.