ವಿದೇಶಿಯರಿಗೂ ಭಾರತದಲ್ಲಿ ಲಸಿಕೆ
Team Udayavani, Aug 10, 2021, 7:00 AM IST
ಹೊಸದಿಲ್ಲಿ/ವಾಷಿಂಗ್ಟನ್: ಇನ್ನು ಮುಂದೆ ಭಾರತದಲ್ಲಿರುವ ವಿದೇಶಿಯರು ಕೂಡ ಇಲ್ಲೇ ಲಸಿಕೆ ಪಡೆಯಬಹುದು. ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡುವಾಗ ತಮ್ಮ ಪಾಸ್ಪೋರ್ಟ್ ಅನ್ನು ಗುರುತಿನ ದಾಖಲೆ ಎಂದು ತೋರಿಸಿ, ಲಸಿಕೆ ಸ್ವೀಕರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ತಿಳಿಸಿದ್ದಾರೆ.
ಮೆಟ್ರೋಪಾಲಿಟನ್ ನಗರಗಳಲ್ಲಿ ಬಹುಸಂಖ್ಯೆಯ ವಿದೇಶಿಗರು ನೆಲೆಸಿದ್ದು, ಅವರೆಲ್ಲರಿಗೂ ಲಸಿಕೆ ನೀಡಬೇಕಾದ ಅಗತ್ಯವಿದೆ. ಅಲ್ಲದೇ, ಕೊರೊನಾ ವ್ಯಾಪಿಸದಂತೆ ತಡೆಯಬೇಕೆಂದರೆ, ಎಲ್ಲರಿಗೂ ಲಸಿಕೆ ನೀಡಬೇಕಾಗುತ್ತದೆ ಎಂದು ಮಾಂಡವಿಯ ಹೇಳಿದ್ದಾರೆ.
ಮಕ್ಕಳ ಲಸಿಕೆಗೆ ಈ ವಾರವೇ ಒಪ್ಪಿಗೆ?: ಝೈಡಸ್ ಕ್ಯಾಡಿಲಾ ಕಂಪೆನಿಯ ಲಸಿಕೆಗೆ ಈ ವಾರವೇ ತುರ್ತು ಬಳಕೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಅಧಿಕವಾಗಿದೆ. ಈ ಕಂಪೆನಿಯು ಭಾರತದಲ್ಲಿ 12-18 ವಯೋಮಾನದವರೂ ಸೇರಿದಂತೆ ಭಾರೀ ಸಂಖ್ಯೆಯ ಜನರ ಮೇಲೆ ದೊಡ್ಡ ಮಟ್ಟದ ಕ್ಲಿನಿಕಲ್ ಟ್ರಯಲ್ ನಡೆಸಿದೆ. ಝೈಕೋವ್-ಡಿ ಲಸಿಕೆಗೆ ಒಪ್ಪಿಗೆ ಸಿಕ್ಕಿದರೆ, ದೇಶದಲ್ಲಿ 12-18ರ ವಯೋಮಾನದವರಿಗೆ ದೊರಕುವ ಮೊದಲ ಲಸಿಕೆ ಇದಾಗಲಿದೆ. ಇದೇ ವೇಳೆ, ರವಿವಾರದಿಂದ ಸೋಮವಾರಕ್ಕೆ ದೇಶದಲ್ಲಿ 35,499 ಮಂದಿಗೆ ಸೋಂಕು ತಗಲಿದ್ದು, 447 ಮಂದಿ ಸಾವಿಗೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.