ವಿಚಾರಣೆ ಎದುರಿಸಿದ ವಾದ್ರಾ
Team Udayavani, Feb 7, 2019, 12:30 AM IST
ಹೊಸದಿಲ್ಲಿ: ಪತ್ನಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಔಪಚಾರಿಕವಾಗಿ ಸೇರುತ್ತಿದ್ದಂತೆಯೇ, ಅಕ್ರಮ ವಿದೇಶಿ ಸ್ವತ್ತುಗಳ ಆರೋಪದಲ್ಲಿ ಜಾರಿ ನಿದೇಶನಾಲಯವು ರಾಬರ್ಟ್ ವಾದ್ರಾ ವಿಚಾರಣೆ ನಡೆಸಿದೆ. ಬಿಳಿ ಟೊಯೋಟಾ ಲ್ಯಾಂಡ್ ಕ್ರೂಸರ್ ವಾಹನದಲ್ಲಿ ದೆಹಲಿಯ ಜಾಮ್‌ನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಎಸ್‌ಪಿಜಿ ಭದ್ರತೆಯೊಂದಿಗೆ ಪ್ರಿಯಾಂಕಾ ಹಾಗೂ ರಾಬರ್ಟ್ ಆಗಮಿಸಿದರು. ನಂತರ ಕಾಂಗ್ರೆಸ್ ಕಚೇರಿಗೆ ತೆರಳಿ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಅಧಿಕಾರ ಸ್ವೀಕರಿಸಿದರು. ಜಾರಿ ನಿರ್ದೇಶನಾಲಯವು ವಾದ್ರಾ ವಿಚಾರಣೆ ನಡೆಸುತ್ತಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ನಾನು ನನ್ನ ಕುಟುಂಬದ ಜೊತೆಗಿದ್ದೇನೆ ಎಂದು ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ.
ಅಕ್ರಮ ಹಣಕಾಸು ವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಾಬರ್ಟ್ ವಾದ್ರಾ ವಿಚಾರಣೆಗೆ ಹಾಜರಾಗಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಸೇರುತ್ತಿದ್ದಂತೆಯೇ ಮಧ್ಯಾಹ್ನ 3.47 ಕ್ಕೆ ವಾದ್ರಾ ಆಗಮಿಸಿದರು.
ವಿಚಾರಣೆಗೆ ಒಳಪಡುವುದಕ್ಕೂ ಮುನ್ನ ಅವರು ಹಾಜರಾತಿ ರಿಜಿಸ್ಟರ್‌ನಲ್ಲಿ ಸಹಿ ಮಾಡಿದರು. ವಿದೇಶಿ ಹಣಕಾಸು ವ್ಯವಹಾರದಲ್ಲಿ ಯಾವುದೇ ಅಕ್ರಮ ನಡೆಸಿಲ್ಲ ಎಂದು ವಾದ್ರಾ ಹೇಳಿದ್ದು, ಆರೋಪವು ರಾಜಕೀಯ ಪ್ರೇರಿತವಾಗಿದೆ ಎಂದಿದ್ದಾರೆ. ರಾಜಕೀಯವಾಗಿ ಲಾಭ ಗಳಿಸಲು ನನ್ನ ವಿರುದ್ಧ ಆರೋಪ ಹೊರಿಸಲಾಗುತ್ತಿದೆ ಎಂದೂ ಅವರು ಟೀಕಿಸಿದ್ದಾರೆ. ವಾದ್ರಾರನ್ನು ಇ.ಡಿ ಐದು ತಾಸು ವಿಚಾರಣೆ ನಡೆಸಿದೆ.
ಪೆಟೋಲಿಯಂ, ರಕ್ಷಣೆ ಡೀಲ್‌ಗಳಲ್ಲಿ ಅಕ್ರಮ ಆರೋಪ: ಯುಪಿಎ ಅವಧಿಯಲ್ಲಿ ಪೆಟ್ರೋಲಿಯಂ ಮತ್ತು ರಕ್ಷಣಾ ಡೀಲ್‌ಗಳಿಂದ ವಾದ್ರಾ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, 2008-09ರಲ್ಲಿ ಯುಪಿಎ ಅಧಿಕಾರ ದಲ್ಲಿದ್ದಾ ಪೆಟ್ರೋಲಿಯಂ ಮತ್ತು ರಕ್ಷಣಾ ಒಪ್ಪಂದಗಳಿಂದ ಲಂಚ ಪಡೆದಿದ್ದು, ಈ ಮೊತ್ತದಲ್ಲಿ ವಾದ್ರಾ 8 ರಿಂದ 9 ಸ್ವತ್ತುಗಳನ್ನು ಲಂಡನ್‌ನಲ್ಲಿ ಖರೀದಿಸಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ.
ಏನಿದು ಪ್ರಕರಣ?
ಲಂಡನ್‌ನ 12 ಬ್ರೈನ್‌ಸ್ಟನ್ ಸ್ಕ್ವೇರ್‌ನಲ್ಲಿ 17 ಕೋಟಿ ರೂ. ಮೌಲ್ಯದ ಸ್ವತ್ತನ್ನು ವಾದ್ರಾ ಹೊಂದಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶ ನಾಲಯ ವಿಚಾರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿದ ವಹಿವಾಟು, ಹಣಕಾಸಿನ ಮೂಲ ಹಾಗೂ ಇತರ ಅಂಶಗಳ ಬಗ್ಗೆ ಪ್ರಶ್ನಿಸಲಾಗಿದೆ. ಈ ಸ್ವತ್ತನ್ನು ವಿವಾದಿತ ಶಸ್ತ್ರಾಸ್ತ್ರ ವಹಿವಾಟುದಾರ ಸಂಜಯ್ ಭಂಡಾರಿಯಿಂದ ವಾದ್ರಾ ಖರೀದಿಸಿ ದ್ದಾರೆ. ನಂತರ ಇಲ್ಲಿ 60 ಲಕ್ಷ ರೂ. ವೆಚ್ಚ ಮಾಡಿ ನವೀಕರಿಸಿದ್ದಾರಾದರೂ, ಇದೇ ಸ್ವತ್ತನ್ನು 2010ರಲ್ಲಿ ಇದೇ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಇನ್ನಷ್ಟು ಹೊಸ ಸ್ವತ್ತುಗಳನ್ನು ವಾದ್ರಾ ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ ಎಂದೂ ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ವಿವರ ನೀಡಿದೆ.
ಪ್ರಿಯಾಂಕಾ ಗಾಂಧಿ ಅಧಿಕಾರ ಸ್ವೀಕಾರ
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಪೂರ್ವ ವಲಯದ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ , ಬುಧವಾರ ದೆಹಲಿಯಲ್ಲಿನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. 15 ನಿಮಿಷಗಳ ಕಾಲ ಅವರು ಕಚೇರಿಯಲ್ಲಿದ್ದರು. ಕೆಲ ವೊಂದು ಚುನಾವಣೆಗಳ ಹೊರತಾಗಿ ಗೆಲುವು ಕಂಡಿ ರುವ ಕಾಂಗ್ರೆಸ್ ಪ್ರಿಯಾಂಕಾ ಆಗಮನ ವಿದ್ಯುತ್ ಸಂಚಾರ ತಂದಿತ್ತು. ಇ.ಡಿ. ಕಚೇರಿಯಿಂದ ಆಗಮಿಸಿ ಅವರು ತಮ್ಮ ಕೊಠಡಿಗೆ ತೆರಳಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ತಮ್ಮ ಆಸನದಲ್ಲಿ ಆಸೀನರಾದರು. ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕೊಠಡಿಯ ಪಕ್ಕದಲ್ಲೇ ಪ್ರಿಯಾಂಕಾ ಅವರ ಕೊಠಡಿ ಇದ್ದು, ಕೊಠಡಿಯ ಗೋಡೆಯ ಮೇಲೆ ಉತ್ತರ ಪ್ರದೇಶದ ಭೂಪಟವಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಇಲ್ಲಿಗೆ ಭೇಟಿ ನೀಡಿದ್ದು ಸಂತೋ ಷ ತಂದಿದೆ’ ಎಂದರು. ಜತೆಗೆ ಗುರುತರ ಹೊಣೆ ನೀಡಿದ ಸಹೋದರ ರಾಹುಲ್ ಗಾಂಧಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮೋದಿ ವಿರುದ್ಧ ರಾಹುಲ್ ಟೀಕೆ: “ಪ್ರಧಾನಿ ನರೇಂದ್ರ ಮೋದಿ ಬಡಾಯಿ ರಾಜ. ಅವರ ರಾಜ್ಯಭಾರವು ಪತನದ ಹಾದಿಯಲ್ಲಿದೆ. ಉತ್ತರ ಪ್ರದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಜತೆಗೆ, ಆ ರಾಜ್ಯದಲ್ಲಿ ರೈತರು ಸಂಕಷ್ಟೇ ಮುಗಿಲು ಮುಟ್ಟಿದೆ ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ. ಮೋದಿ ಮತ್ತು ಇತರರ ನಡುವಿನ ಯುದ್ಧ: ಶಾ: ಮುಂಬರುವ ಲೋಕಸಭೆ ಚುನಾವಣೆಯು, ಮೋದಿ ಮತ್ತು ಇತರರ ನಡುವಿನ ಯುದ್ಧವೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಎಸ್‌ಪಿ-ಬಿಎಸ್‌ಪಿಯೇ 74 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ ಎಂದರು.
ಟ್ವಿಟರ್‌ನಲ್ಲಿ ಮಾಯಾ
ಚುನಾವಣೆ ಸನ್ನಿಹಿತಕ್ಕೆ ಬರುತ್ತಿರುವಂತೆ ಸಾಮಾಜಿಕ ಜಾಲತಾಣಗಳ ಮಹತ್ವವನ್ನು ಅರಿತಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಟ್ವಿಟರ್‌ಗೆ ಲಗ್ಗೆಯಿಟ್ಟಿದ್ದಾರೆ. ತಮ್ಮ ಮೊದಲ ಸಂದೇಶದಲ್ಲಿ, “ಃಖusಜrಜಿMಚyಚಡಿಚಠಿಜಿ’ ಎಂಬುದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ಬಾರ್ ಆಗಿದ್ದು, ಇದರಡಿ ತಾವು ಸಂವಹನ ನಡೆಸುವುದಾಗಿ ತಿಳಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಇಂಥ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮೂಲಕ ಪ್ರತಿಪಕ್ಷಗಳನ್ನು ಬೆದರಿಸಲಾಗುತ್ತಿದೆ. ಮುಂದಿನ ಬುಧವಾರ ಅಥವಾ ಗುರುವಾರ ಹೊಸದಿಲ್ಲಿಗೆ ಭೇಟಿ ನೀಡಲಿದ್ದೇನೆ.
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.