ಎರಡನೇ ಹಂತದ ವಂದೇ ಭಾರತ್ ಮಿಷನ್ ನಲ್ಲಿ ಬಹುತೇಕ ಹೊಸ ದೇಶಗಳತ್ತ ಹಾರಲಿವೆ ವಿಮಾನಗಳು
Team Udayavani, May 14, 2020, 9:28 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಕೋವಿಡ್ ಲಾಕ್ ಡೌನ್ ನಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ದೇಶಕ್ಕೆ ವಾಪಸು ಕರೆತರುವ ‘ವಂದೇ ಭಾರತ್ ವಿಷನ್’ನ ಎರಡನೇ ಹಂತಕ್ಕೆ ಮೇ 16ರಂದು ಚಾಲನೆ ದೊರೆಯಲಿದೆ.
ಈ ಎರಡನೇ ಹಂತದ ವಂದೇ ಭಾರತ್ ಮಿಷನ್ ನಲ್ಲಿ ಬಹುತೇಕ ಹೊಸ ರಾಷ್ಟ್ರಗಳೇ ಇವೆ.
ಫ್ರಾನ್ಸ್, ಜರ್ಮನಿ, ಇಟಲಿ, ಐರ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್, ರಷ್ಯಾ, ಕಝಖ್‌ಸ್ಥಾನ್, ಉಕ್ರೇನ್, ಕಿರ್ಗಿಸ್ತಾನ್, ಜಾರ್ಜಿಯಾ, ತಜಿಕಿಸ್ತಾನ್, ಬೆಲಾರಸ್, ಕೆನಡಾ, ಆಸ್ಟ್ರೇಲಿಯಾ, ಜಪಾನ್, ಅರ್ಮೇನಿಯಾ, ನೇಪಾಳ, ನೈಜೀರಿಯಾಗಳತ್ತ ವಿಮಾನಗಳು ಮುಖ ಮಾಡಲಿವೆ.
ಈಗಾಗಲೇ ಆಯಾ ದೇಶಗಳಲ್ಲಿ ಪ್ರಯಾಣಿಕರ ಪಟ್ಟಿ ಸಿದ್ಧಗೊಳ್ಳುತ್ತಿದೆ. ವೃದ್ಧರು, ಗರ್ಭಿಣಿಯರು, ವಿದ್ಯಾರ್ಥಿಗಳು, ರೋಗಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
ಗ್ರೀನ್ ಕಾರ್ಡ್ ಇದ್ದವರಿಗೆ ತೊಂದರೆ
ಲಾಕ್ ಡೌನ್‌ನಿಂದಾಗಿ ಅಮೆರಿಕದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಏರ್ ಇಂಡಿಯಾ ವಿಮಾನದ ಮೂಲಕ ತವರಿಗೆ ಕರೆ ತರಲು ಭಾರತ ಸರ್ಕಾರ ಸಿದ್ಧತೆ ನಡೆಸಿದೆ.
ಆದರೆ, ಅಮೆರಿಕದಲ್ಲೇ ಜನಿಸಿದ ಮಕ್ಕಳಿರುವ ಎಚ್-1ಬಿ ವೀಸಾ ಅಥವಾ ಗ್ರೀನ್ ಕಾರ್ಡ್‌ದಾರರಿಗೆ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ.
ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಸಂಬಂಧ ಭಾರತ ಸರ್ಕಾರ ಕಳೆದ ತಿಂಗಳು ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಅದರ ಪ್ರಕಾರ, ವಿದೇಶದಲ್ಲಿರುವ ಭಾರತೀಯ ಸಂಜಾತರಿಗೆ ವೀಸಾರಹಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಆದರೆ, ನೂತನ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳನ್ವಯ ವಿದೇಶಿ ಪ್ರಜೆಗಳ ವೀಸಾ ಹಾಗೂ ಸಾಗರೋತ್ತರ ಪೌರತ್ವ (ಒಸಿಐ) ಕಾರ್ಡ್‌ಗಳನ್ನು ಅಮಾನತುಗೊಳಿಸಲಾಗಿದೆ. ಈ ನಿಯಮದಿಂದಾಗಿ ಕೆಲವು ದಂಪತಿಗಳಿಗೆ ತವರಿಗೆ ಮರಳಲು ತೊಂದರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.