ವಂದೇ ಭಾರತ್ ರೈಲು ಸೂಪರ್ ಹಿಟ್
Team Udayavani, Nov 21, 2019, 6:45 PM IST
ಹೊಸದಿಲ್ಲಿ: ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ರೈಲು ಸೂಪರ್‌ಹಿಟ್ ಆಗಿದೆ .
ವಿಶ್ವದರ್ಜೆಯ ರೈಲು ಯಾನವನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈ ರೈಲುಗಳನ್ನು ಆರಂಭದಲ್ಲಿ ಹೊಸದಿಲ್ಲಿ-ವಾರಾಣಸಿ, ಹೊಸದಿಲ್ಲಿ-ಕಟ್ರಾ ನಡುವೆ ಆರಂಭಿಸಿದ್ದು, ಜನರಿಂದ ತುಂಬಿರುತ್ತದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಅವರು ಸಂಸತ್ತಿಗೆ ತಿಳಿಸಿದ್ದಾರೆ.
ಲಿಖೀತ ರೂಪದ ಉತ್ತರದಲ್ಲಿ ತಿಳಿಸಿರುವ ಅವರು, ಎಂಜಿನ್ ರಹಿತ, ಸೆಲ್ಫ್ ಪ್ರೊಫೆಲ್ ವ್ಯವಸ್ಥೆಯ ಈ ರೈಲುಗಳು ಯಶಸ್ವಿಯಾಗಿವೆ. ದಿಲ್ಲಿ-ವಾರಾಣಸಿ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶೇ.115.71 ಪ್ರಯಾಣಿಕರ ಇರುವಿಕೆ ಇದ್ದರೆ, ವೈಷ್ಣೋದೇವಿಗೆ ಸಂಪರ್ಕ ಕಲ್ಪಿಸುವ ದಿಲ್ಲಿ-ಕಟ್ರಾ ವಂದೇಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶೇ.99.27ರಷ್ಟು ಪ್ರಯಾಣಿಕರ ಇರುವಿಕೆ ಇದೆ ಎಂದು ಹೇಳಿದ್ದಾರೆ.
ವಾರಾಣಸಿಗೆ ವಂದೇಭಾರತ್ ಎಕ್ಸ್‌ಪ್ರೆಸ್ ವಾರದ ಐದು ದಿನಗಳಲ್ಲಿ ಸಂಚರಿಸುತ್ತದೆ. ಕಟ್ರಾಕ್ಕೆ ವಾರದ ಎಲ್ಲ ದಿನವೂ ಸಂಚರಿಸುತ್ತದೆ. ಅತಿ ಕಡಿಮೆ ನಿಲುಗಡೆ ಹೊಂದಿರುವ ಈ ರೈಲುಗಳು ಪ್ರತಿ ನಿಲ್ದಾಣದಲ್ಲಿ ಗರಿಷ್ಠ 2 ನಿಮಿಷಗಳ ಕಾಲ ನಿಲ್ಲುತ್ತದೆ.
ಐರೋಪ್ಯ ಶೈಲಿಯ ಸೀಟುಗಳು, ವೈಫೈ, ಅತ್ಯಾಧುನಿಕ ಶೌಚಾಲಯಗಳು, ಎಲ್‌ಇಡಿ ಲೈಟಿಂಗ್, ಅಟೋಮ್ಯಾಟಿಕ್ ಡೋರ್‌ಗಳು, ಟೀವಿ ಸೌಲಭ್ಯ, ಉತ್ತಮ ಆಹಾರ, ಪ್ರಯಾಣಿಕರಿಗೆ ದೃಶ್ಯ-ಶ್ರಾವ್ಯ ಸೂಚನೆಗಳು ಇದರ ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.